For Quick Alerts
  ALLOW NOTIFICATIONS  
  For Daily Alerts

  ದೀಪಾವಳಿಗೆ ಸಂಭ್ರಮ ಹೆಚ್ಚಿಸಲು ಬರ್ತಿದ್ದಾನೆ ರಾಬರ್ಟ್‌!

  |

  ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ರಾಬರ್ಟ್‌ ನಿಮ್ಮ ಮನೆದಂಗಳಕ್ಕೆ ಬರ್ತಿದೆ. ರಾಬರ್ಟ್‌ ಸಿನಿಮಾವನ್ನ ಚಿತ್ರಮಂದಿರದಲ್ಲಿ ನೋಡಿ ಮೆಚ್ಚಿಕೊಂಡವರು ಅಥವಾ ನೋಡಲು ಆಗದೇ ಇರುವವರು ಈಗ ರಾಬರ್ಟ್ ಸಿನಿಮಾವನ್ನ ನಿಮ್ಮ ಮನೆಯಲ್ಲೇ ಮನೆ ಮಂದಿ ಜೊತೆಗೆ ಕೂತು ನೋಡ ಬಹುದು. ಹೌದು ರಾಬರ್ಟ್‌ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾನೆ. ಮೊಟ್ಟ ಮೊದಲ ಬಾರಿಗೆ ರಾಬರ್ಟ್‌ ಸಿನಿಮಾ ಕನ್ನಡದ ಕಿರುತೆಯಲ್ಲಿ ಬಿಡುಗಡೆ ಆಗುತ್ತಿದೆ. ಹಾಗಾಗಿ ರಾಬರ್ಟ್‌ ಮಿಸ್‌ ಮಾಡಿಕೊಂಡವರು ಮಿಸ್‌ ಮಾಡದೇ ಮನೆಯಲ್ಲೇ ಸಿನಿಮಾ ನೋಡ ಬಹುದು.

  ರಾಬರ್ಟ್‌ ಹೇಳಿ ಕೇಳಿ ದರ್ಶನ್‌ ಅಭಿನಯದ ಸಿನಿಮಾ. ದರ್ಶನ್‌ ಅವರ ಸಣ್ಣ ವಿಡಿಯೋ ಬಂದ್ರೂ ಸಾಕು ಅಭಿಮಾನಿಗಳು ಮುಗಿಬಿದ್ದು ನೋಡುತ್ತಾರೆ. ಈಗ ಸಿನಿಮಾ ಕಿರುತೆರೆಗ ಬರುತ್ತಿದೆ ಅಂದ್ರೆ ಅದು ದರ್ಶನ್‌ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಇದೇ ನವೆಂಬರ್‌ 4ನೇ ತಾರೀಖಿನಂದು ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ರಾಬರ್ಟ್‌ ಸಿನಿಮಾ ಪ್ರಸಾರ ಆಗಲಿದೆ. ಹಬ್ಬದ ದಿನವೇ ಸಿನಿಮಾ ಪ್ರಸಾರ ಆಗುತ್ತಿರುವುದರಿಂದ ಇದು ದರ್ಶನ್‌ ಅಭಿಮಾನಿಗಳಿಗೆ ಡಬಲ್‌ ಧಮಾಕ. ಈ ಬಾರಿಯ ದೀಪಾಳಿಯನ್ನ ದರ್ಶನ್‌ ಅಭಿಮಾನಿಗಳು ರಾಬರ್ಟ್‌ ಜೊತೆಗೆ ಆಚರಿಸಲಿದ್ದಾರೆ.

  ಲಾಕ್‌ಡೌನ್‌ ಬಳಿಕಾ ಬಂದು ದಾಖಲೆ ಮಾಡಿದ್ದ ರಾಬರ್ಟ್

  ಇನ್ನು ರಾಬರ್ಟ್‌ ಚಿತ್ರ ಮೊದಲ ಕೊರೊನಾ ಲಾಕ್‌ಡೌನ್‌ ಬಳಿಕಾ ರಿಲೀಸ್‌ ಆಗಿದ್ದ ಸಿನಿಮಾ. ಲಾಕ್‌ ಬಳಿಕ ಚಿತ್ರಮಂದಿರಕ್ಕೆ ಬಂದರೂ ರಾಬರ್ಟ್‌ ಬಾಕ್ಸಾಫೀಸ್‌ನ್ಲಲಿ ಭರ್ಜರಿ ಜಯ ಸಾಧಿಸಿತ್ತು. ರಾಬರ್ಟ್‌ ನೋಡಲು ಹರಿದು ಬಂದ ಜನ ಸಾಗರ ಚಿತ್ರರಂಗಕ್ಕೆ ಹೊಸ ಭರವಸೆ ಮೂಡಿಸಿತ್ತು. ಗಳಿಕೆಯಲ್ಲೂ ರಾಬರ್ಟ್‌ ದಾಖಲೆ ಮಾಡಿದ್ದ. ನಂತರ ಚಿತ್ರಕ್ಕೆ ಸಿಕ್ಕ ಯಶಸ್ಸಿನ ಬಗ್ಗೆ ಚಿತ್ರತಂಡ ಹಂಚಿಕೊಂಡಿತ್ತು. ನಟ ದರ್ಶನ್‌ ಕೂಡ ಸಿನಿಮಾದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ರಾಬರ್ಟ್‌ ಅಂತಹ ಸಿನಿಮಾವನ್ನ ದರ್ಶನ್‌ ಮೊದಲ ಬಾರಿಗೆ ಒಪ್ಪಿಕೊಂಡಿದ್ದರು. ಮಾಸ್‌ ಆಡಿಯನ್ಸ್‌ ಜೊತೆಗೆ ರಾಬರ್ಟ್‌ ಕೌಟುಂಬಿಕ ಸಿನಿಮಾ ಆಗಿಯೂ ಹೊರ ಹೊಮ್ಮಿದೆ. ಈಗ ಈ ರಾಬರ್ಟ್‌ ಕಿರುತೆರೆಗೆ ಬರ್ತಿದ್ದಾನೆ. ಇಲ್ಲೂ ಕೂಡ ಹೊಸ ದಾಖಲೆಗಳನ್ನ ಮಾಡುವ ಸೂಚನೆ ಕೊಟ್ಟಿದೆ ಚಿತ್ರ. ಅದರಲ್ಲೂ ದೀಪಾವಳಿ ಹಬ್ಬದ ನಿಮಿತ್ತ ಸಿನಿಮಾ ಕಿರುತೆಗೆ ಬರ್ತಿರೋದು ವಿಶೇಷ.

  ರಾಬರ್ಟ್ 2021 ರ ಆಕ್ಷನ್ ಥ್ರಿಲ್ಲರ್ ಚಲನಚಿತ್ರ. ತರುಣ್ ಸುಧೀರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಾಬರ್ಟ್‌ ಚಿತ್ರವನ್ನು ಉಮಾಪತಿ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿದ್ದಾರೆ. ಚಿತ್ರದಲ್ಲಿ ದರ್ಶನ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿ ಕಿಶನ್, ನಟಿ ಆಶಾ ಭಟ್, ದೇವರಾಜ್ ಮತ್ತು ಪಿ.ರವಿ ಶಂಕರ್ ನಟಿಸಿದ್ದಾರೆ. ವಿ.ಹರಿಕೃಷ್ಣ ಮತ್ತು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸುಧಾಕರ್ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ತರುಣ್ ಸುಧೀರ್‌ ಮತ್ತೊಮ್ಮ ಗೆದ್ದು ಬೀಗಿದ್ದಾರೆ. ರಾಬರ್ಟ್‌ ಚಿತ್ರದಿಂದ ಇಡೀ ಚಿತ್ರತಂಡಕ್ಕೆ ಉತ್ತಮ ಪ್ರಶಂಸೆ ಸಿಕ್ಕಿತ್ತು . ಸದ್ಯ ರಾಬರ್ಟ್‌ ಕಿರುತೆಗೆ ಬರ್ತಾ ಇದ್ದು ದರ್ಶನ್‌ ಅಭಿಮಾನಿಗಳ್ಲಲಿ ಸಂತಸ ಮನೆ ಮಾಡಿದೆ. ದೀಪಾವಳಿ ಜೊತೆಗೆ ರಾಬರ್ಟ್‌ ಹಬ್ಬವನ್ನು ಆಚರಿಸಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  English summary
  Robert Arriving To Increase diwali celebrtaion,
  Tuesday, November 2, 2021, 18:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X