»   » ರಾಕಿಂಗ್ ಸ್ಟಾರ್ ಯಶ್ 'ಗೂಗ್ಲಿ' ಸಂದರ್ಶನ

ರಾಕಿಂಗ್ ಸ್ಟಾರ್ ಯಶ್ 'ಗೂಗ್ಲಿ' ಸಂದರ್ಶನ

By ರಾಜೇಂದ್ರ ಚಿಂತಾಮಣಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ರಾಕಿಂಗ್ ಸ್ಟಾರ್ ಯಶ್ (ಪವನ್ ಕುಮಾರ್ ಗೌಡ) ಅಭಿನಯದ ಹಾಗೂ ಪವನ್ ಒಡೆಯರ್ ನಿರ್ದೇಶನದ 'ಗೂಗ್ಲಿ' ಚಿತ್ರ ಇದೇ ಶುಕ್ರವಾರ (ಜು.19) ಬಿಡುಗಡೆಯಾಗುತ್ತಿದೆ. ಈ ಸಂಬಂಧ ಯಶ್ ಹಾಗೂ ಪವನ್ ಅವರು ಒನ್ಇಂಡಿಯಾ ಕಚೇರಿಗೆ ಭೇಟಿ ನೀಡಿದ್ದರು. ತಮ್ಮ ಚಿತ್ರದ ಬಗೆಗಿನ ಅನುಭವಗಳನ್ನು ಹಂಚಿಕೊಂಡರು. ಗೂಗ್ಲಿ ಮೆಲೆ ಗೂಗ್ಲಿ ಎಸೆದರು. ಚಿತ್ರಕ್ಕೆ ಸಂಬಂಧಿಸಿದಂತೆ ಯಶ್ ಅವರೊಂದಿಗೆ ನಡೆಸಿದ ಮಾತುಕತೆಯ ಆಯ್ದಭಾಗ ಇಲ್ಲಿದೆ.

  ತಮ್ಮ ಸಿನಿಮಾ ಜರ್ನಿ, ಸಕ್ಸಸ್ ಬಗ್ಗೆ ಏನನ್ನಿಸುತ್ತದೆ?
  ಸಕ್ಸಸನ್ನು ಹೊರೋದಕ್ಕೆ ಒಂದು ಅನುಭವ ಬೇಕು, ತಾಕತ್ತು ಬೇಕು. ಅದು ಹುಟ್ಟುತ್ತಲೇ ಬರಲ್ಲ ಅಥವಾ ಆರಂಭದಲ್ಲೇ ಇರಲ್ಲ. ಆರಂಭದಲ್ಲೇ ಬಿಗ್ ಸಕ್ಸಸ್ ಸಿಕ್ಕಿದರೆ ಬಹುಶಃ ತಪ್ಪು ದಾರಿಗೆ ಹೋಗುವುದೋ ಅಥವಾ ಸ್ಟುಪಿಡ್ ಆಗಿ ನಡೆದುಕೊಳ್ಳುವ ಸಾಧ್ಯತೆಗಳು ಜಾಸ್ತಿ ಇರುತ್ತವೆ. ಗೂಗ್ಲಿ ಗ್ಯಾಲರಿ.

  ಈಗ ನನಗೆ ಹೇಗಾಗಿದೆ ಎಂದರೆ ಉದಾಹಣೆಗೆ ಹೇಳ್ತೀನಿ ಪಿಯುಸಿಯಲ್ಲಿ ಬೈಕ್ ಬೇಕು ಅನ್ನಿಸುತ್ತದೆ. ಆಗ ಬೈಕ್ ಸಿಕ್ಕಿದರೆ ವ್ಹೀಲಿಂಗ್ ಮಾಡಬೇಕು, ಸೌಂಡ್ ಮಾಡಿಕೊಂಡು ಓಡಿಸಬೇಕು ಅನ್ನಿಸುತ್ತದೆ. ಅದೇ ನೀವು ಕೆಲಸಕ್ಕೆ ಹೋಗಬೇಕಾದ ಸಮಯದಲ್ಲಿ ಬೈಕ್ ಸಿಕ್ಕಿದರೆ ಅದು ಒಂದು ರೀತಿ ಮೋಡ್ ಆಫ್ ಟ್ರಾನ್ಸ್ ಪೋರ್ಟ್ ಆಗುತ್ತದೆ. ನನ್ನ ಜೀವನದಲ್ಲಿ ಇದು ಒಂದು ರೀತಿ ಮೋಡ್ ಆಫ್ ಟ್ರಾನ್ಸ್ ಪೋರ್ಟ್ ಅಷ್ಟೇ.

  ಹೊಸಬರಾದ ಪವನ್ ಜೊತೆ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣ?

  ನಾನು ಯಾವಾಗಲೂ ಹೊಸಬರ ಜೊತೆಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅವರಲ್ಲಿ ಹೊಸ ಐಡಿಯಾಗಳು, ಎನರ್ಜಿ ಜೊತೆಗೆ ತುಡಿತ ಇರುತ್ತದೆ. ಇನ್ನೂ ಏನೋ ಮಾಡಬೇಕು. ನನ್ನನ್ನು ನಾನು ನಿರೂಪಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ. ಆ ರೀತಿಯ ಎನರ್ಜಿಯುಳ್ಳವರೊಂದಿಗೆ ಕೆಲಸ ಮಾಡಬೇಕಾದರೆ ನಮಗೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತದೆ. ಒಳ್ಳೆಯ ಔಟ್ ಪುಟ್ ಬರುವ ಸಾಧ್ಯತೆಗಳಿರುತ್ತವೆ.

  ಪವನ್ ಅವರಲ್ಲಿ ತುಂಬಾ ಇಷ್ಟವಾದ ಗುಣ ಅಂದ್ರೆ?

  ಪವನ್ ಅವರಲ್ಲಿ ನನಗೆ ತುಂಬಾ ಇಷ್ಟವಾದ ಗುಣ ಎಂದರೆ, ಅವರಲ್ಲಿ ಪಾಸಿಟೀವ್ ಅಟಿಟ್ಯೂಡ್ ಇತ್ತು. ಚಿತ್ರಕಥೆಯಲ್ಲಿ ಹಿಡಿತ ಇತ್ತು. ಕಥೆಯಲ್ಲಿ ತುಂಬ ಹುರುಳಿತ್ತು. ಅವರೊಬ್ಬ ಹೊಸಬ ಎಂದು ನೋಡುವ ಯಾವುದೇ ಒಂದು ಗುಣಗಳೂ ನನಗೆ ಕಾಣಲಿಲ್ಲ. ಎಲ್ಲದಕ್ಕಿಂತಲೂ ಹೆಚ್ಚಾಗಿ ತುಂಬಾ ಪ್ರೀತಿಯಿಂದ ಬಂದಂತಹ ನಿರ್ದೇಶಕ.

  ಹೊಂದಾಣಿಕೆ ಇದ್ದರೆ ಎಲ್ಲವೂ ಚೆನ್ನಾಗಿರುತ್ತದೆ

  ನನ್ನ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆ ಅವರಲ್ಲಿ ತುಂಬಾ ಕಾಣಿಸುತ್ತಿತ್ತು. ಆ ರೀತಿ ಹೊಂದಾಣಿಕೆ ಇದ್ದಾಗ ಚಿತ್ರವೂ ಇನ್ನೂ ಚೆನ್ನಾಗಿ ಮೂಡಿ ಬರುತ್ತದೆ ಎಂಬ ನಂಬಿಕೆ ನನ್ನದು. ಒಬ್ಬ ಕಲಾವಿದನನ್ನು ಹೀಗೆ ತೋರಿಸಬೇಕು ಹಾಗೆ ತೋರಿಸಬೇಕು ಎಂದು ಕನಸು ಹೊತ್ತು ಬಂದ ನಿರ್ದೇಶಕನಿಗೆ ನಾವು ಸಪೋರ್ಟ್ ಮಾಡಬೇಕು ಅದರ ಜೊತೆಗೆ ದುಡಿಯಬೇಕು. ನನ್ನ ಕೆಲಸ ನಾನು ಮಾಡಿದ್ದೇನೆ.

  ಪವನ್ ಜೊತೆಗಿನ ಕೆಲಸದ ಅನುಭವ ಹೇಗಿತ್ತು?

  ತುಂಬಾ ತುಂಬಾ ಖುಷಿಯಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಅವರಿಗೆ ಯಾವಾಗ ಬೇಕಿದ್ದರೂ ಡೇಟ್ ಕೊಡುವಷ್ಟರ ಮಟ್ಟಿಗೆ ಖುಷಿಯಾಗಿದ್ದೇನೆ. ಅವರೊಂದಿಗೆ ಕೆಲಸ ಮಾಡುತ್ತಾ ಎಂಜಾಯ್ ಮಾಡಿದ್ದೇವೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಪವನ್ ನನಗೆ ವ್ಯಕ್ತಿಯಾಗಿ ತುಂಬಾ ಇಷ್ಟವಾಗಿದ್ದಾನೆ. ಎಲ್ಲಾ ಕಡೆ ನನ್ನ ತಮ್ಮ ಇದ್ದಂತೆ ಎಂದು ಹೇಳುತ್ತಿದ್ದೇನೆ. ಅವರ ನಡವಳಿಕೆ, ಸಿನಿಮಾ ಬಗ್ಗೆ ಇರುವ ಉತ್ಕಟ ಪ್ರೀತಿಯಾಗಬಹುದು, ಮೋಹವಾಗಬಹುದು. ಅವರು ಅಷ್ಟೇ ಪ್ರೀತಿಯಿಂದ ಕೆಲಸ ಮಾಡುವುದನ್ನು ನೋಡಿ ನನಗೂ ಇಷ್ಟವಾಗಿದೆ.

  ನಿಮ್ಮಿಬ್ಬರ ನಡುವೆ ಜಗಳ ಮನಸ್ತಾಪ ಬಂದ ಸಂದರ್ಭಗಳು ಇವೆಯೇ?

  ಅದೇನೋ ಗೊತ್ತಿಲ್ಲ. ನಮ್ಮಿಬ್ಬರ ನಡುವೆ ಯಾವುದೇ ವಿಷಯಕ್ಕೂ ಜಗಳ ಮನಸ್ತಾಪ ಬಂದಿಲ್ಲ. ಒಂದು ಸಣ್ಣ ಸಿಟ್ಟು ಅವರ ಮೇಲೆ ಬಂದಿಲ್ಲ. ತುಂಬಾ ಪ್ರೀತಿಯಿಂದ ನೋಡಿದಾಗ ಆ ರೀತಿಯ ಸಮಸ್ಯೆಗಳೇನು ಬರುವುದಿಲ್ಲ ಅಂಥ ಅನ್ನಿಸುತ್ತದೆ.

  ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಏನು ಹೇಳಲು ಬಯಸುತ್ತೀರಿ?

  ಒಬ್ಬ ಗಾಢ ನಂಬಿಕೆಯುಳ್ಳ ಹುಡುಗನ ಪಾತ್ರ. ಅವನದು ವಿಲಕ್ಷಣ ವ್ಯಕ್ತಿತ್ವ. ಅವನ ಮೇಲೆ ಅವನಿಗೆ ನಂಬಿಕೆ ಇರುವಂತಹವನು. ಇನ್ನೊಬ್ಬರಿಗಾಗಿ ಬದುಕುವವನಲ್ಲ. ತನಗೋಸ್ಕರ ಬದುಕುವವನು. ಹಾಗಂತ ದುರಹಂಕಾರಿ ಪಾತ್ರವಲ್ಲ. ಪ್ರಪಂಚದ ಬಗ್ಗೆ ಅವನಿಗೇ ಆದಂತಹ ದೃಷ್ಟಿಕೋನ ಇರುತ್ತದೆ.

  ಒಂದರ್ಥದಲ್ಲಿ ನ್ಯಾಚುಲರಿ ಯಾಲಂಟೆಡ್

  ರಾತ್ರಿಯಲ್ಲಾ ನಿದ್ದೆಗೆಟ್ಟು ತುಂಬಾ ಓದಬೇಕಾಗಿಲ್ಲ. ಕಷ್ಟಪಟ್ಟು ಓದುತ್ತಾನೋ ಇಲ್ವೋ ಗೊತ್ತಿಲ್ಲ. ಆದ್ರೆ ಯಾವಾಗಲೂ ಟಾಪರ್. ಒಂದರ್ಥದಲ್ಲಿ ನ್ಯಾಚುರಲಿ ಟ್ಯಾಲಂಟೆಡ್. ಆ ರೀತಿಯ ಒಂದು ಪಾತ್ರ. ಯಾರನ್ನೂ ಇಂಪ್ರೆಸ್ ಮಾಡಬೇಕು ಎಂದು ಬದುಕಲ್ಲ. ಯಾರನ್ನೂ ಕೇರ್ ಮಾಡಲ್ಲ. ಎಲ್ಲಾ ತರಹದ ಹುಡುಗಿಯರಿಂದಲೂ ದೂರ ಇರುವಂತಹ ಹುಡುಗನ ಲವ್ ಸ್ಟೋರಿ.

  ತಮ್ಮ ಉಳಿದ ಚಿತ್ರಗಳಿಗಿಂತ 'ಗೂಗ್ಲಿ' ಹೇಗೆ ಭಿನ್ನ?

  ತುಂಬಾನೇ ಡಿಫರೆಂಟ್ ಆಗಿದೆ. ನನ್ನ ಬಾಡಿ ಲಾಂಗ್ವೇಜ್ ತುಂಬಾನೇ ಬದಲಾಗುತ್ತದೆ. ನೋಟದಲ್ಲೂ ಭಿನ್ನವಾಗಿದೆ. ಚಾಲೆಂಜಿಂಗ್ ಆಗಿರುವ ಪಾತ್ರ. ಆರಂಭದಿಂದ ಕೊನೆಯ ತನಕ ಅದೇ ರೀತಿ ಸ್ಟೈಲ್ ಮೈಂಟೇನ್ ಮಾಡಬೇಕಾಗಿತ್ತು. ಪವನ್ ಸ್ಕ್ರಿಪ್ಟ್ ತುಂಬಾ ಚೆನ್ನಾಗಿ ಬರೆದಿದ್ದರಿಂದ ನಟಿಸುವುದು ನನಗೆ ಸುಲಭವಾಯಿತು.

  ಪವನ್ ಒಬ್ಬ ಒಳ್ಳೆಯ ಪ್ರೇಕ್ಷಕ. ಅವರಲ್ಲಿ ಒಂದು ಮುಗ್ಧತೆ ಇದೆ. ಆ ಇನ್ನೋಸೆನ್ಸ್ ಇದ್ದಾಗ ಅದೆಷ್ಟೋ ವಿಚಾರಗಳನ್ನು ತಿಳಿದುಕೊಳ್ಳಬಹುದು. ಅವರ ಮನಸ್ಸು, ಮನಸ್ಥಿತಿ ಎಲ್ಲವೂ ಓಪನ್ ಆಗಿದೆ. ಅವರಲ್ಲಿನ ಒಳ್ಳೆಯ ಗುಣ ಇದೇ.

  ತಮ್ಮ ಪಾತ್ರ ತುಂಬಾ ಚಾಲೆಂಜಿಂಗ್ ಆಗಿತ್ತಾ?

  ಹೌದು ಪಾತ್ರದಲ್ಲಿ ತುಂಬಾ ವೇರಿಯೇಷನ್ಸ್ ಇರುತ್ತವೆ. ಬೆಂಗಳೂರಿನ ಹವಾಮಾನದಂತೆ ಸಡನ್ ಆಗಿ ಬದಲಾಗುತ್ತಿರುತ್ತದೆ. ಯಾವಾಗ ಏನು ಎಂದು ಹೇಳಲಿಕ್ಕೇ ಆಗಲ್ಲ. ತುಂಬಾ ಉಡಾಫೆ ವ್ಯಕ್ತಿತ್ವದ ಒಬ್ಬ ಬೆಂಗಳೂರಿನೊಬ್ಬನ ಪಾತ್ರ.

  ಕೃತಿ ಕರಬಂಧ ಜೊತೆಗಿನ ಅಭಿನಯ ಹೇಗಿತ್ತು?

  ಇಬ್ಬರು ತಾರೆಗಳು ತುಂಬಾ ಪ್ರೊಫೆಷನಲ್ ಆಗಿದ್ದಾಗ ಕೆಮಿಸ್ಟ್ರಿ ಎಂಬುದು ಅಷ್ಟು ಮುಖ್ಯವಾಗಲ್ಲ. ಯಾರ ಜೊತೆಗೆ ಮಾಡಿದರು ಅಭಿನಯ ಚೆನ್ನಾಗಿಯೇ ಮೂಡಿಬರುತ್ತವೆ. ನಮ್ಮಿಬ್ಬರ ಪಾತ್ರಗಳೂ ಅಷ್ಟೇ ಚೆನ್ನಾಗಿ ಮೂಡಿಬಂದಿದೆ.

  ಚಿತ್ರದಲ್ಲಿ ಯಾವುದನ್ನು ಹೈಲೈಟ್ ಮಾಡಲು ಇಷ್ಟಪಡುತ್ತೀರಾ?

  ಹೀರೋನ ಕ್ಯಾರೆಕ್ಟರೈಜೇಷನ್. ಮನೆಗೆ ವಾಪಸ್ ಬಂದ ಮೇಲೂ ಕಾಡುವಂತಹ ಪಾತ್ರ. ಸೂಪರ್ ಹುಡುಗ ಅನ್ನಿಸುತ್ತದೆ. ಆ ರೀತಿಯ ಒಂದು ಪಾತ್ರ. ಪ್ರೀತಿ, ಜಗಳ ಎಲ್ಲವೂ ಇರುತ್ತವೆ. ಕಂಪ್ಲೀಟ್ ಲವ್ ವಿತ್ ಆಕ್ಷನ್.

  ಗೂಗ್ಲಿ ಚಿತ್ರದ ಯಾವುದಾದರೂ ಸೂಪರ್ ಡೈಲಾಗ್ ಹೇಳಿ?

  ಈ ಲವ್ ಅನ್ನೋದೇ ಕುಲ್ಪಿ ಐಸ್ ಕ್ಯಾಂಡಿ ಇದ್ದಂತೆ. ಆ ಕಡೆ ತಿರುಗಿ ಈ ಕಡೆ ತಿರುಗೋ ಅಷ್ಟರಲ್ಲಿ ಕರಗೋಗಿ ಬರೀ ಕಡ್ಡಿ ಮಾತ್ರ ಉಳಿದುಕೊಂಡಿರುತ್ತದೆ. ಅದನ್ನ ಎಸೆಯೋದಾ ಇಟ್ಟುಕೊಳ್ಳೋದಾ, ಇಟ್ಟುಕೊಂಡ್ರು ಎಲ್ಲಿ ಇಟ್ಟುಕೊಳ್ಳೋದು ಎಂಬುದೇ ಹುಡುಗ್ರ ಲೈಫ್ ಲಾಂಗ್ ಕನ್ಫೂಷನ್.

  ಗೂಗ್ಲಿ ಚಿತ್ರದಲ್ಲಿ ತಮ್ಮ ಲವ್ ಯಾವ ರೀತಿ ಸ್ಪಿನ್ ಆಗಿದೆ?

  ಅದೇ ಗೂಗ್ಲಿ ಅನ್ನುವುದು. ಯಾವ ರೀತಿ ಆಗುತ್ತದೆ ಅಂದುಕೊಳ್ತೀರೋ ಆ ರೀತಿ ಆಗಲ್ಲ. ಆ ರೀತಿ ಆಗಲಿ ಎಂದು ಹೀರೊ ಬಯಸುತ್ತಾನೆ, ಆಗಲ್ಲ. ಹೀರೋಯಿನ್ ಬಯಸ್ತಾಳೆ, ಅದೂ ಆಗಲ್ಲ. ಕಡೆಗೆ ಏನೋ ಒಂದು ಆಗುತ್ತದೆ. ಅದೇನಾಗುತ್ತದೆ ಎಂಬುದನ್ನು ತೆರೆಯ ಮೇಲೆ ನೋಡಿ.

  ಗಂಡು ಜನ್ಮ ಹಾಡು ಮೇಕಿಂಗ್ ಹೇಗಿತ್ತು?

  ಈ ಹಾಡನ್ನು ಮುರಳಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಮಾಡಿದೆವು. ನಾಲ್ಕು ದಿನ ಶೂಟಿಂಗ್. ಎಲ್ಲಾ ಜನಗಳ ಜೊತೆ ಬೆರೆತು ಇರಬೇಕಾದಂತಹ ಕಾನ್ಸೆಪ್ಟ್ ಮಾಡಿಕೊಂಡರು. ಮಲಯಾಳಿ ಗೆಟಪ್, ತಮಿಳಿಯನ್ ಗೆಟಪ್ ಡಾನ್ಸರ್ಸ್ ಇರುತ್ತಾರೆ. ಮುಸ್ಲಿಂ ಬಾಂಧವರ ಗೆಟಪ್, ಈ ರೀತಿ ಬೇರೆ ಬೇರೆ ಡ್ರೆಸ್ ಗಳನ್ನು ಹಾಕಿ ಮಾಡಿದಂತಹ ಹಾಡಿದು. ಬೆಂಗಳೂರಿನಲ್ಲಿ ಎಲ್ಲಾ ಭಾಷೆಯ ಜನರಿದ್ದಾರೆ. ಅದನ್ನು ಬಿಂಬಿಸುವಂತಹ ಹಾಡಿದು. ಹುಡುಗಿಯನ್ನು ರೇಗಿಸುವ ತರಹ ತುಂಬಾ ಫನ್ನಿಯಾಗಿ ಇರುತ್ತದೆ. ಹುಡುಗ ಹಿಂಗೆ ಹುಡುಗಿ ಹಿಂಗೆ ಎಂದು ಹೇಳುತ್ತಾ ಸಾಗುವ ಹಾಡು.

  ಚಿತ್ರದಲ್ಲಿನ ಸಾಹಸ ಸನ್ನಿವೇಶಗಳು ಹೇಗಿವೆ?

  ಆಕ್ಷನ್ ಸೀನ್ ಗಳಿಗೆ ತುಂಬಾ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಈ ಚಿತ್ರಕ್ಕಾಗಿ ರಿಯಲ್ ಸ್ಟಂಟ್ ಮಾಡಿದ್ದೇನೆ. ಕಾರು ಮೂವ್ ಆಗುತ್ತಿರುತ್ತದೆ ಎಗರಿ ನಾನು ಗ್ಲಾಸ್ ಬ್ರೇಕ್ ಮಾಡಿದ್ದೇನೆ. ಈ ಸನ್ನಿವೇಶ ಮಾಡಿದಾಗ ನನ್ನ ಕೈಗೆ ಗಾಯವಾಗಿತ್ತು. ಕೈ ಕಾಲಿಗೆ ಏನಾದರೂ ಆಗಲಿ ಪರ್ವಾಗಿಲ್ಲ. ಆದರೆ ಮುಖಕ್ಕೆ ಏನೂ ಆಗಬಾರದು ಎಂಬ ಭಯ ಇತ್ತು. ದೇವರ ದಯೆಯಿಂದ ಆ ರೀತಿ ಏನೂ ಆಗಲಿಲ್ಲ.

  ಕೃತಿ ಕರಬಂಧ ಜೊತೆ ಭಾಷಾ ಸಮಸ್ಯೆ ಏನೂ ಉದ್ಭವಿಸಲಿಲ್ಲವೇ?

  ಯಾವುದೇ ಭಾಷೆ ಗೊತ್ತಿಲ್ಲದೆ ಇದ್ದಾಗ ಸ್ವಲ್ಪ ಸಮಸ್ಯೆ ಆಗುತ್ತದೆ. ಆದರೆ ಕೃತಿ ಜೊತೆ ಮಾಡಿದಾಗ ಆ ರೀತಿ ಸಮಸ್ಯೆಯೇನೂ ಆಗಲಿಲ್ಲ. ಇವರು ಬೆಂಗಳೂರಿನಲ್ಲೇ ಸ್ವಲ್ಪ ದಿನ ಇದ್ದ ಕಾರಣ ಅಷ್ಟೋ ಇಷ್ಟೋ ಕನ್ನಡ ಅರ್ಥವಾಗುತ್ತಿತ್ತು.

  ನಿಮ್ಮ ಗೂಗ್ಲಿಗೆ ಪ್ರೇಕ್ಷಕರು ಔಟ್ ಆಗ್ತಾರೆ ಎಂಬ ನಿರೀಕ್ಷೆ ಇದೆಯಾ?

  ಖಂಡಿತ, ಕ್ಲೀನ್ ಬೌಲ್ಡ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರದ ಬಜೆಟ್ ಜಾಸ್ತಿನೇ ಇದೆ. ಚಿತ್ರದಲ್ಲಿ ಬಳಕೆ ಮಾಡಿರುವ ಕಾಸ್ಟ್ಯೂಮ್ಸ್, ಕಾರುಗಳು ಎಲ್ಲವೂ ದುಬಾರಿ. ಪವಿತ್ರಾ ರೆಡ್ಡಿ ಎಂಬ ಕಾಸ್ಟ್ಯೂಮ್ ಡಿಸೈನರ್ ನನ್ನ ಹೇರ್ ಸ್ಟೈಲ್ ನಿಂದ ಹಿಡಿದು ಎಲ್ಲವೂ ಭಿನ್ನವಾಗಿರುವಂತೆ ನೋಡಿಕೊಂಡರು.

  English summary
  Rocking Star Yash, who is returning after the success of Yogaraj Bhat's Drama, is game for the release of his Googly directed by Pavan Wadeyar of Govindaya Namaha. To promote the movie and talk about the same, he visited Oneindia. Here are the excerpts from the interview.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more