»   » ಲಾಂಗು, ಮಚ್ಚು ಬೇಡ ಅಂತಿದ್ದಾರೆ ರಾಕಿಂಗ್ ಸ್ಟಾರ್

ಲಾಂಗು, ಮಚ್ಚು ಬೇಡ ಅಂತಿದ್ದಾರೆ ರಾಕಿಂಗ್ ಸ್ಟಾರ್

Posted By: ಉದಯರವಿ
Subscribe to Filmibeat Kannada

ರೌಡಿಯಿಸಂ ಚಿತ್ರಗಳಿಂದ ಪ್ರೇರಿತರಾಗಿ ಯುವಕರು ಲಾಂಗು, ಮಚ್ಚಿಗೆ ಶರಣಾಗಿ ಅಡ್ಡದಾರಿ ತುಳಿಯುತ್ತಿರುವುದು ಗೊತ್ತೇ ಇದೆ. ಈ ಬಗ್ಗೆ ದಾರಿತಪ್ಪುತ್ತಿರುವ ಯುವಕರನ್ನು ಸರಿದಾರಿಗೆ ತರಲು ಬೆಂಗಳೂರು ನಗರ ಅಪರಾಧ (ಸಿಸಿಬಿ) ಪೊಲೀಸರು ಪಣತೊಟ್ಟಿದ್ದಾರೆ.

ಇದಕ್ಕಾಗಿ ಬೆಂಗಳೂರು ನಗರ ಅಪರಾಧ ಕೇಂದ್ರ ವಿಭಾಗ ಆಯ್ಕೆ ಮಾಡಿಕೊಂಡ ದಾರಿಯೂ ಭಿನ್ನವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರನ್ನು ಕಣಕ್ಕಿಳಿಸುತ್ತಿದೆ. ಅರ್ಥಾತ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿದೆ. ಅಡ್ಡದಾರಿ ಹಿಡಿಯುತ್ತಿರುವ ಯುವಕರಿಗೆ ಯಶ್ ಇನ್ನು ಮುಂದೆ ಬುದ್ಧಿಮಾತು ಹೇಳಲಿದ್ದಾರೆ.


ಯುವಕರೇ ರೌಡಿಯಿಸಂ ಬೇಡ, ಅಪರಾಧ ಮುಕ್ತ ಸಮಾಜವನ್ನು ನಿರ್ಮಿಸೋಣ ಬನ್ನಿ ಎಂಬ ಸಂದೇಶ ಸಾರುವ ಪೋಸ್ಟರ್ ಗಳು ಇನ್ನು ಮುಂದೆ ಬೆಂಗಳೂರಿನಲ್ಲಿ ರಾರಾಜಿಸಲಿವೆ. ಫ್ಲೆಕ್ಸ್ ಹಾಗೂ ವಿಡಿಯೋಗಳಲ್ಲೂ ಯಶ್ ಯುವಕರಿಗೆ ಕಿವಿಮಾತು ಹೇಳಲಿದ್ದಾರೆ. [ಇನ್ನೆರಡು ವರ್ಷ ರಾಕಿಂಗ್ ಸ್ಟಾರ್ ಯಶ್ ಫುಲ್ ಬಿಜಿ]


Rocking Star Yash is now CCB Police Brand Ambassador

ಈ ಮೂಲಕ ಯಶ್ ಇದೇ ಮೊದಲ ಬಾರಿಗೆ ಜಾಹೀರಾತೊಂದರಲ್ಲಿ ಕಾಣಿಸುತ್ತಿರುವುದು. ಜೊತೆಗೆ ಇದೇ ಮೊದಲ ಭಾರಿಗೆ ಖಾಕಿ ತೊಡುತ್ತಿರುವುದು. 'ಗೂಗ್ಲಿ' ಚಿತ್ರದಲ್ಲಿ ಅವರು ಖಾಕಿ ತೊಟ್ಟಿದ್ದರೂ ಅದು ಪೂರ್ಣಪ್ರಮಾಣದ ಪೊಲೀಸ್ ಸ್ಟೋರಿಯಲ್ಲ ಎಂಬುದು ಗಮನಾರ್ಹ ಸಂಗತಿ.


ಈಗಾಗಲೆ ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಅವರನ್ನು ಯಶ್ ಭೇಟಿ ಮಾಡಿ ಈ ಬಗ್ಗೆ ಸಮಾಲೋಚಿಸಿದ್ದಾರೆ. ಯಶ್ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಸಂಗತಿಯನ್ನು ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು ಖಚಿತಪಡಿಸಿದ್ದಾರೆ.


ಈಗಾಗಲೆ ನಗರ ಪೊಲೀಸರು ಸಂಚಾರ ನಿಯಮಗಳನ್ನು ಪಾಲಿಸಲು, ರಸ್ತೆ ಸುರಕ್ಷತೆ ಬಗ್ಗೆ, ಪಾನಮುಕ್ತ ಚಾಲನೆ ಬಗ್ಗೆ ಹಲವು ಸೆಲೆಬ್ರಿಟಿಗಳನ್ನು ರಾಯಭರಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ.


ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ನಟ ಸುದೀಪ್, ಕ್ರಿಕೆಟಿಗ ರಾಹುಲ್ ದ್ರಾವಿಡ್ ರಾಯಭಾರಿಗಳಾಗಿದ್ದಾರೆ. ಇದೀಗ ಆ ಪಟ್ಟಿಗೆ ಯಶ್ ಹೊಸ ಸೇರ್ಪಡೆ ಎನ್ನಬಹುದು. ಯಶ್ ಈಗ ಯುವಕರ ಪ್ರತಿನಿಧಿ, ತಪ್ಪು ದಾರಿಹಿಡಿಯುತ್ತಿರುವ ಯುವಜನತೆಯನ್ನು ದಾರಿಗೆ ತರಲು ಅವರೇ ಸೂಕ್ತ ಅಲ್ಲವೇ? (ಏಜೆನ್ಸೀಸ್)

English summary
Rocking Star Yash, for first time agreed to new endorsement deal with City Crime Brach Police, Bengaluru. The actor sports in Khaki and to advise the youth, don't involve in type of criminal offence and rowdyism.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada