Don't Miss!
- Finance
Bank Holidays in February 2023: ಫೆಬ್ರವರಿಯಲ್ಲಿ ಎಷ್ಟು ದಿನ ಬ್ಯಾಂಕ್ ರಜೆ ನೋಡಿ
- Technology
ಗೂಗಲ್ನ ಈ ಎರಡು ಅಗತ್ಯ ಆಪ್ಗಳಲ್ಲಿ ಬದಲಾವಣೆ; ಏನದು ಗೊತ್ತಾ!?
- News
ಬಿಜೆಪಿಯಿಂದ ಶಾಸಕರ ಖರೀದಿಯನ್ನು ಕಾನೂನುಬದ್ಧಗೊಳಿಸಲು ಒಂದು ರಾಷ್ಟ್ರ, ಒಂದು ಚುನಾವಣೆ: ಎಎಪಿ
- Automobiles
ಶೀಘ್ರದಲ್ಲೇ 2023 ಹ್ಯುಂಡೈ ವೆನ್ಯೂ ಬಿಡುಗಡೆ... 4 ಏರ್ಬ್ಯಾಗ್, ಡೀಸಲ್ ಎಂಜಿನ್, ಹೊಸ ವೈಶಿಷ್ಟ್ಯಗಳು
- Sports
IPL 2023: ಐಪಿಎಲ್ನಲ್ಲಿ ಆಡಬೇಕೆನ್ನುವುದು ಕನಸು: ಅಷ್ಟು ದೊಡ್ಡ ಮೊತ್ತ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ!
- Lifestyle
ತನ್ನ ಪುರುಷನಲ್ಲಿ ಮಹಿಳೆ ಹುಡುಕುವ ಗುಣಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಾನ್ ಮಸಾಲ ಜಾಹೀರಾತು ನಿರಾಕರಿಸಿದ್ದ ಯಶ್ 'ಪೆಪ್ಸಿ ಐ ಲವ್‌ಯು' ಎಂದಿದ್ಯಾಕೆ? ಸಂಭಾವನೆ ಎಷ್ಟು?
KGF ರಾಕಿಭಾಯ್ ಆಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ ನಟ ಯಶ್ ಈಗ ಪೆಪ್ಸಿ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದಾರೆ. ಹಾಗಾಗಿ ದೊಡ್ಡ ದೊಡ್ಡ ಉತ್ಪನ್ನ ಸಂಸ್ಥೆಗಳು ಯಶ್‌ನ ತಮ್ಮ ಉತ್ಪನ್ನದ ರಾಯಭಾರಿನ್ನಾಗಿ ಮಾಡಿಕೊಳ್ಳಲು ಮುಗಿಬಿದ್ದಿವೆ.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಯಶ್19 ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. KGF -2 ತೆರೆಕಂಡು ತಿಂಗಳುಗಳೇ ಕಳೆದರೂ ಹೊಸ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಕಾದು ಕಾದು ಸುಸ್ತಾಗಿದ್ದ ಫ್ಯಾನ್ಸ್ ಇತ್ತೀಚೆಗೆ ಬಹಿರಂಗ ಪತ್ರ ಬರೆದು ಬೇಗ ಮುಂದಿನ ಸಿನಿಮಾ ಅಪ್‌ಡೇಟ್ ಕೊಡಿ ಎಂದಿದ್ದರು. ಕಳೆದೆರಡು ದಿನಗಳಿಂದ ಯಶ್ ಕಡೆಯಿಂದ ಜನವರಿ 24ಕ್ಕೆ ದೊಡ್ಡ ಅಪ್‌ಡೇಟ್ ಸಿಗುತ್ತೆ ಎನ್ನಲಾಗಿತ್ತು. ಟ್ವಿಟ್ಟರ್‌ನಲ್ಲಿ ಈ ವಿಚಾರ ಭಾರೀ ಚರ್ಚೆ ಆಗಿತ್ತು. ಯಶ್ ಕಡೆಯಿಂದ ಅಪ್‌ಡೇಟ್ ಏನೋ ಸಿಕ್ಕಿದೆ. ಆದರೆ ಸಿನಿಮಾ ಬಗ್ಗೆ ಅಲ್ಲ. ಬದಲಿಗೆ ಪೆಪ್ಸಿ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಯಶ್ ಪಾನ್ ಮಸಾಲಾ ಜಾಹೀರಾತಿನ ಬ್ರ್ಯಾಂಡ್ ಅಂಬಾಸಿಡರ್ ಆಗುವ ಅವಕಾಶವನ್ನು ನಿರಾಕರಿಸಿದ್ದರು. ಇದಕ್ಕಾಗಿ ಆ ಸಂಸ್ಥೆ ಭಾರೀ ಮೊತ್ತದ ಸಂಭಾವನೆ ಕೊಡಲು ಮುಂದಾದರೂ ಯಶ್ ಒಪ್ಪಿರಲಿಲ್ಲ. ಆದರೆ ಈಗ ಇದಕ್ಕಿದ್ದಂತೆ ಪೆಪ್ಸಿ ತಂಪು ಪಾನೀಯಕ್ಕೆ ಅಂಬಾಸಿಡರ್ ಆಗಿದ್ದಾರೆ.

ಪೆಪ್ಸಿಗೆ ಮೊದಲ ಕನ್ನಡ ರಾಯಭಾರಿ ಯಶ್
ರಾಕಿಂಗ್ ಸ್ಟಾರ್ ಯಶ್ ಈಗ ಬರೀ ಸ್ಯಾಂಡಲ್‌ವುಡ್ ಸ್ಟಾರ್ ನಟ ಅಲ್ಲ. ಭಾರತೀಯ ಚಿತ್ರರಂಗ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. KGF ಚಾಪ್ಟರ್ 1 ಬಂದಾಗಲೇ ಯಶ್ ಕ್ರೇಜ್ ದೇಶ್ಯಾದ್ಯಂತ ಸೃಷ್ಟಿಯಾಗಿತ್ತು. ಚಾಪ್ಟರ್-2 ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು. ಬಾಲಿವುಡ್ ಸ್ಟಾರ್ ನಟರೇ ಯಶ್ ಅಭಿಮಾನಿಗಳಾಬಿಟ್ಟರು. ಅಂದಹಾಗೆ ಇಲ್ಲಿವರೆಗೆ ಬಾಲಿವುಡ್ ಹಾಗೂ ಕ್ರಿಕೆಟ್ ಲೋಕದ ತಾರೆಯರು ಮಾತ್ರ ಪೆಪ್ಸಿ ತಂಪು ಪಾನೀಯಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಇದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬ ಈ ಹಂತಕ್ಕೆ ಏರಿದ್ದಾರೆ.

ಪಾನ್ ಮಸಾಲಾ ಜಾಹೀರಾತು ತಿರಸ್ಕಾರ
KGF- 2 ಸಕ್ಸಸ್ ಬೆನ್ನಲ್ಲೇ ಯಶ್‌ಗೆ ಒಂದು ಭಾರೀ ಆಫರ್ ಬಂದಿತ್ತು. ಮಾಸ್ ಮಸಾಲಾ ಒಂದರ ಅಂಬಾಸಿಡರ್ ಆಗುವುದಕ್ಕೆ ಡಬಲ್ ಡಿಜಿಟ್ ಮೊತ್ತದ ಆಫರ್ ಸಂಭಾವನೆ ಕೊಡಲು ಮುಂದೆ ಬಂದಿದ್ದರು. ಯಶ್ ಅವರ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನೋಡಿಕೊಳ್ಳುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್‌ಟೇನ್‌ಮೆಂಟ್‌ನ ಟ್ಯಾಲೆಂಟ್ ಮತ್ತು ನ್ಯೂ ವೆಂಚರ್ಸ್ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ಯಶ್ ಆಫರ್ ತಿರಸ್ಕರಿಸಿದ್ದರ ಬಗ್ಗೆ ಮಾಹಿತಿ ನೀಡಿದ್ದರು. "ಪಾನ್ ಮಸಾಲಾ ಮತ್ತು ಅಂತಹ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇದರಿಂದ ಜೀವಕ್ಕೆ ಅಪಾಯ ಉಂಟಾಗುತ್ತದೆ. ತಮ್ಮ ಅಭಿಮಾನಿಗಳ ಹಿತದೃಷ್ಟಿಯಿಂದ ವೈಯಕ್ತಿಕವಾಗಿ ಲಾಭದಾಯಕವಾದರೂ ಈ ಒಪ್ಪಂದವನ್ನು ಯಶ್ ನಿರಾಕರಿಸಿದ್ದಾರೆ" ಎಂದಿದ್ದರು.

ಭಾರೀ ಮೊತ್ತದ ಸಂಭಾವನೆ
ಸದ್ಯ ಯಶ್ ಕ್ರೇಜ್ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಪೆಪ್ಸಿ ತಂಪು ಪಾನೀಯ ಸಂಸ್ಥೆ ಈಗ ಬಾಲಿವುಡ್ ಸ್ಟಾರ್‌ಗಳನ್ನು ಬಿಟ್ಟು ಕನ್ನಡದ ನಟನನ್ನು ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಳ್ಳಲು ಭಾರೀ ಮೊತ್ತದ ಸಂಭಾವನೆಯನ್ನೇ ನೀಡಿರುವಂತೆ ಕಾಣುತ್ತಿದೆ. ಯಶ್ ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇಂತಹ ಯಾವುದೇ ಅವಕಾಶ ಬಂದರೂ ಅಳೆದು ತೂಗಿ ಆರಿಸಿಕೊಳ್ಳುತ್ತಾರೆ. ಹಾಗಾಗಿ ಪೆಪ್ಸಿ ಇಂಡಿಯಾ ಜಾಹೀರಾತಿಗೂ ದೊಡ್ಡ ಮೊತ್ತದ ಸಂಭಾವನೆ ಜೇಬಿಗಿಳಿಸಿರುವಂತೆ ಕಾಣುತ್ತಿದೆ.

ಯಶ್19 ಅಪ್‌ಡೇಟ್ ಯಾವಾಗ?
ನಟ ಯಶ್ ಪೆಪ್ಸಿ ಇಂಡಿಯಾ ಅಂಬಾಸಿಡರ್ ಆಗಿರುವ ವಿಚಾರವನ್ನು ಸಣ್ಣ ವಿಡಿಯೋ ಸಮೇತ ಹಂಚಿಕೊಂಡಿಕೊಂಡಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ಪೆಪ್ಸಿ ಬಾಟಲ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಯಶ್19 ಅಪ್‌ಡೇಟ್ ಕೊಡಿ ಎಂದು ಕೇಳುತ್ತಿದ್ದಾರೆ. ಇತ್ತೀಚೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಅನೌನ್ಸ್ ಆಗುತ್ತೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಲು ಇನ್ನು ಸ್ವಲ್ಪ ಸಮಯ ಬೇಕು ಎಂದು ಯಶ್ ಅಭಿಮಾನಿಗಳಿ ಕೇಳಿದ್ದರು.