For Quick Alerts
  ALLOW NOTIFICATIONS  
  For Daily Alerts

  ಯಶ್ ಗಿದೆ ಹೀಗೊಂದು ಆಸೆ: ಯಾವಾಗ ಈಡೇರುತ್ತೋ.?

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆ ಜೊತೆಗೆ ತಮ್ಮದೇ ಪ್ರೊಡಕ್ಷನ್ ಹೌಸ್ ಶುರು ಮಾಡಿರೋದು ನಿಮಗೆಲ್ಲ ಗೊತ್ತೇ ಇದೆ.

  ತಮ್ಮ ತಮ್ಮ ಪ್ರೊಡಕ್ಷನ್ ಹೌಸ್ ಮುಖಾಂತರ ಹೊಸಬರಿಗೆ, ಯುವ ಪ್ರತಿಭೆಗಳಿಗೆ ಸ್ಟಾರ್ ನಟರು ಪ್ರೋತ್ಸಾಹ ನೀಡುತ್ತಿದ್ದಾರೆ. ಈಗ ಇವರದ್ದೇ ಹಾದಿಯಲ್ಲಿ ಸಾಗಲು ಯಶ್ ಕೂಡ ಮನಸ್ಸು ಮಾಡಿದ್ದಾರೆ.

  ಹೌದು, ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡುವ ಆಸೆ ರಾಕಿಂಗ್ ಸ್ಟಾರ್ ಯಶ್ ಗಿದೆ. ಹಾಗಂತ ಸ್ವತಃ ಯಶ್ ಫೇಸ್ ಬುಕ್ ಲೈವ್ ನಲ್ಲಿ ಹೇಳಿದರು.

  'ನಾನು ಒಳ್ಳೆಯವನಲ್ಲ, ನನ್ನನ್ನ ಒಳ್ಳೆಯವನು ಅಂತ ಅಂದುಕೊಳ್ಳಬೇಡಿ' ಎಂದ ಯಶ್.!'ನಾನು ಒಳ್ಳೆಯವನಲ್ಲ, ನನ್ನನ್ನ ಒಳ್ಳೆಯವನು ಅಂತ ಅಂದುಕೊಳ್ಳಬೇಡಿ' ಎಂದ ಯಶ್.!

  ಫೇಸ್ ಬುಕ್ ಲೈವ್ ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ''ಪ್ರೊಡಕ್ಷನ್ ಕಂಪನಿ ಓಪನ್ ಮಾಡಬೇಕು ಅಂತ ಒಂದು ಆಸೆ ಇದೆ. ಹೊಸಬರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಖಂಡಿತ ಪ್ರೊಡಕ್ಷನ್ ಕಂಪನಿ ಓಪನ್ ಮಾಡ್ತೀನಿ. ನಮ್ಮ ಪ್ರೊಡಕ್ಷನ್ ಕಂಪನಿ ಇಂದಲೇ ನನ್ನ ಸಿನಿಮಾ ಮಾಡಬೇಕು ಎನ್ನುವ ಪ್ಲಾನ್ ಕೂಡ ಇದೆ'' ಎಂದರು ನಟ ಯಶ್.

  ನಿರ್ದೇಶಕರೇ ಕೇಳಿಸಿಕೊಳ್ಳಿ... ದರ್ಶನ್ ಜೊತೆಗೆ ಸಿನಿಮಾ ಮಾಡಲು ಯಶ್ ರೆಡಿ! ನಿರ್ದೇಶಕರೇ ಕೇಳಿಸಿಕೊಳ್ಳಿ... ದರ್ಶನ್ ಜೊತೆಗೆ ಸಿನಿಮಾ ಮಾಡಲು ಯಶ್ ರೆಡಿ!

  ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. 'ಕೆಜಿಎಫ್' ಮುಗಿದ ಬಳಿಕ ಯಾವ ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ಕೊಡ್ತಾರೋ, ನೋಡ್ಬೇಕು.

  English summary
  Rocking Star Yash revealed that he will start his own production house soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X