For Quick Alerts
  ALLOW NOTIFICATIONS  
  For Daily Alerts

  ಘರ್ಜಿಸಿ ಮಗನನ್ನ ಹೆದರಿಸಿದ ನಟ ಯಶ್: ವಿಡಿಯೋ ವೈರಲ್!

  |

  ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್ 2 ಚಿತ್ರದ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ಇಷ್ಟು ದಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಯಶ್ ಸಮಯ ಸಿಕ್ಕಾಗ ಮಕ್ಕಳ ಜೊತೆಗೆ ಕಾಲ ಕಳೆಯುತ್ತಾರೆ. ಆಗಾಗ ಮಕ್ಕಳ ಜೊತೆಗಿನ ತುಂಟಾದ ವಿಡಿಯೋಗಳನ್ನು ಯಶ್ ಹಂಚಿಕೊಳ್ಳುತ್ತಾರೆ. ಯಥರ್ವ ಮತ್ತು ಆಯ್ರಾ ಜೊತೆಗಿನ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ ಯಶ್.

  ಯಶ್ ಮಕ್ಕಳ ಜೊತೆಗೆ ಹಂಚಿಕೊಳ್ಳುವ ವಿಡಿಯೋ ಮತ್ತು ಫೊಟೋಗಳನ್ನು ನೋಡಲು ಸಾಕಷ್ಟು ಮಂದಿ ಕಾಯುತ್ತಾ ಇರುತ್ತಾರೆ. ಹಾಗಾಗಿ ಯಶ್ ವಿಡಿಯೋ, ಫೋಟೊಗಳನ್ನು ಹಂಚಿಕೊಂಡ ಬಳಿಕಾ ಸಿಕ್ಕಾಪಟ್ಟೆ ವೈರಲ್ ಆಗಿ ಬಿಡುತ್ತವೆ. ಈಗ ಮತ್ತೊಂದು ವಿಡಿಯೋವನ್ನು ಯಶ್ ಹಂಚಿಕೊಂಡಿದ್ದಾರೆ.

  ಕನ್ನಡ ನಟರ ಟ್ರೋಲ್: ಯಶ್ ಅಭಿಮಾನಿಗಳು ಮಾಡ್ತಿರೋದು ಸರಿಯೇ?ಕನ್ನಡ ನಟರ ಟ್ರೋಲ್: ಯಶ್ ಅಭಿಮಾನಿಗಳು ಮಾಡ್ತಿರೋದು ಸರಿಯೇ?

  ಯಶ್ ವಿಡಿಯೋದಲ್ಲಿ ಮಕ್ಕಳ ಜೊತೆಗೆ ಮಕ್ಕಳಾಗಿ ಆಟವಾಡಿದ್ದಾರೆ. ಯಥರ್ವ ನಾನು ಡೈನೋಸರ್ ಎಂದು ಆಯ್ರಾ ಮತ್ತು ಯಶ್‌ಗೆ ಹೆದರಿಸುತ್ತಾನೆ. ಆಗ ಯಶ್, ಅಪ್ಪ ಈಗ ಟೈಗರ್ ಆಗುತ್ತಾನೆ ಎಂದು ಹುಲಿಯ ಮಾದರಿ ಘರ್ಜಿಸುತ್ತಾರೆ. ಇದನ್ನು ಕಂಡು ಯಥರ್ವ ಓಡಿ ಹೋಗುತ್ತಾನೆ. ಆಗ ಆಯ್ರಾ ಅವನು ಹೆದರಿದ ಎಂದು ಅಪ್ಪನನ್ನು ತಬ್ಬಿಕೊಳ್ಳುತ್ತಾಳೆ. ಈ ವಿಡಿಯೋದಲ್ಲಿ ಅಪ್ಪ, ಮಕ್ಕಳು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಕೂಡ ಈಗ ವೈರಲ್ ಲಿಸ್ಟ್ ಸೇರಿದೆ.

  ವಿಡಿಯೋ ಹಂಚಿಕೊಂಡ ನಟ ಯಶ್ "ಅ ವೈಲ್ಡ್ ಸ್ಟಾರ್ಟ್ ಅವರ್ ವೆಡ್ನೆಸ್ ಡೇ" ಎಂದು ಬರೆದುಕೊಂಡಿದ್ದಾರೆ.

  ಈ ಹಿಂದೆ ಮಗಳು ಆಯ್ರಾ ವಿಡಿಯೋ ಒಂದನ್ನು ನಟ ಯಶ್ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಆಯ್ರಾ ರಾಕಿ ಭಾಯ್ ಎಂದು ಡೈಲಾಗ್ ಹೊಡೆದಿದ್ದಳು.

  ಇನ್ನು ನಟಿ ರಾಧಿಕಾ ಪಂಡಿತ್ ಕೂಡ ತಮ್ಮ ಮಕ್ಕಳ ತುಂಟಾದ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಮಕ್ಕಳ ನಿತ್ಯದ ಚಟುವಟಿಕೆಗಳ ಬಗ್ಗೆ ರಾಧಿಕಾ ಪಂಡಿತ್ ಒಂದಲ್ಲಾ ಒಂದು ವಿಡಿಯೋ ಹಂಚಿಕೊಳ್ಳುತ್ತಾ ಇರುತ್ತಾರೆ.

  'ಕೆಜಿಎಫ್ 2'ಗೆ ಬೋಲ್ಡ್ ಆದ ಬಾಲಿವುಡ್‌ ನಟ ರಣ್ವೀರ್ ಸಿಂಗ್!'ಕೆಜಿಎಫ್ 2'ಗೆ ಬೋಲ್ಡ್ ಆದ ಬಾಲಿವುಡ್‌ ನಟ ರಣ್ವೀರ್ ಸಿಂಗ್!

  ಯಶ್, ರಾಧಿಕಾ ಹಾಗೂ ಮಕ್ಕಳು ಇತ್ತೀಚೆಗೆ ಗೋವಾ ಪ್ರವಾಸದಲ್ಲಿ ಕಾಣಿಸಿಕೊಂಡಿದ್ದರು. ಖಾಸಗಿ ಬೀಚ್‌ನಲ್ಲಿ ಆಟವಾಡಿ ಸಮಯ ಕಳೆದಿದ್ದಾರೆ. ಅಲ್ಲಿನ ಬೀಚ್ ಫೊಟೋವನ್ನು ಕೂಡ ನಟಿ ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು.

  English summary
  Rocking Star Yash Start Wild Wednesday With Son Yatharv And Ayra, Yash New Video Goes viral.
  Thursday, May 12, 2022, 8:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X