ಮಗಳ ಹುಟ್ಟುಹಬ್ಬ ಆಚರಿಸಿದ ರಾಕಿಂಗ್ ಸ್ಟಾರ್ ಯಶ್ ದಂಪತಿ
ಡಿಸೆಂಬರ್ 2, ರಾಕಿಂಗ್ ಸ್ಟಾರ್ ಮನೆಯಲ್ಲಿ ಸಂಭ್ರಮದ ದಿನ. ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಮಗಳು ಐರಾ ಹುಟ್ಟಿದ ದಿನ. ಮಗಳ ಬರ್ತಡೇಯನ್ನು ನಟ ಯಶ್ ಕಲರ್‌ಫುಲ್ ಆಗಿ ಸೆಲೆಬ್ರೆಟ್ ಮಾಡಿದ್ದಾರೆ.
ಐರಾ ಯಶ್ ಕಂದಮ್ಮನ ಎರಡನೇ ವರ್ಷದ ಹುಟ್ಟುಹಬ್ಬವನ್ನು ರಾಕಿ ಭಾಯ್ ಆಚರಿಸಿದ್ದು, ಸಣ್ಣದೊಂದು ವಿಡಿಯೋ ಝಲಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ವರ್ಷ ಐರಾ ಯಶ್ ಹುಟ್ಟುಹಬ್ಬದಲ್ಲಿ ಇಡೀ ಸ್ಯಾಂಡಲ್ ವುಡ್ ಭಾಗಿಯಾಗಿತ್ತು. ಸ್ಟಾರ್ ನಟ, ನಟಿಯರು ಸೇರಿದಂತೆ ಗಣ್ಯರು ಭಾಗಿಯಾಗಿದ್ದರು. ಈ ಸಲ ಕೊರೊನಾ ಭೀತಿಯಿದ್ದ ಕಾರಣ ಸರಳವಾಗಿ ಕೆಲವೇ ಆಪ್ತರು ಹಾಗೂ ಕುಟುಂಬಸ್ಥರು ಬರ್ತಡೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಮಗಳ ಹುಟ್ಟುಹಬ್ಬಕ್ಕೆ ಶುಭಕೋರಿದ್ದ ರಾಧಿಕಾ ಪಂಡಿತ್ ''ಜೀವನದಲ್ಲಿ ಸಂತೋಷವನ್ನು ಹೊರತುಪಡಿಸಿ ಏನನ್ನು ನೀಡಿಲ್ಲ. ಜನ್ಮ ದಿನದ ಶುಭಾಷಯಗಳು ನಮ್ಮ ಲಿಲ್ ಏಂಜೆಲ್' ಎಂದಿದ್ದರು.
ಅಂದ್ಹಾಗೆ, ಅಕ್ಟೋಬರ್ 30ರಂದು ಯಶ್ ಮತ್ತು ರಾಧಿಕಾ ದಂಪತಿ ಎರಡನೇ ಮಗನ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಣೆ ಮಾಡಿದ್ದರು. ಸಮುದ್ರದ ಮಧ್ಯೆ ಯಥರ್ವ ಯಶ್ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ್ದರು. ಈ ಸಮಯದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬದವರು ಜೊತೆಯಲ್ಲಿದ್ದರು.


Click it and Unblock the Notifications











