For Quick Alerts
  ALLOW NOTIFICATIONS  
  For Daily Alerts

  ಗೋವಾದ ನಡುರಸ್ತೆಯಲ್ಲಿ ಯಶ್ ಸುತ್ತುವರೆದ ರಾಕಿಂಗ್ ಫ್ಯಾನ್ಸ್

  |

  ನಟ ರಾಕಿಂಗ್‌ ಸ್ಟಾರ್ ಯಶ್‌ ಏನೇ ಮಾಡಿದ್ದರು ಸಿಕ್ಕಾಪಟ್ಟೆ ಸುದ್ದಿ ಆಗುತ್ತೆ. ಇತ್ತೀಚಿಗೆ ಯಶ್ ಪತ್ನಿ ರಾಧಿಕಾ ಪಂಡಿತ್‌ ಜೊತೆಗೆ ದುಬೈನಲ್ಲಿ ಪ್ರತ್ಯಕ್ಷ ಆಗಿದ್ದರು. ಈಗ ಯಶ್ ಗೋವಾದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್‌ ಆಗಾಗ ಅಭಿಮಾನಿಗಳ ಜೊತೆಗೆ ಬೆರೆತು ಬಿಡುತ್ತಾರೆ. ರಸ್ತೆಗೆ ಇಳಿದು ಅಭಿಮಾನಿಗಳ ಜೊತೆ ಸಮಯ ಕಳೆಯುತ್ತಾರೆ. ಸದ್ಯ ಯಶ್ ಗೋವಾದಲ್ಲಿ ಅಭಿಮಾನಿಗಳೊಂದಿಗೆ ಪ್ರತ್ಯಕ್ಷ ಆಗಿದ್ದಾರೆ.

  ಯಶ್‌ ಗೋವಾಗೆ ಭೇಟಿ ನೀಡಿದ್ದಾರೆ. ಹಲವು ದಿನಗಳ ಬಳಿಕ ಯಶ್ ಗೋವಾ ಪ್ರವಾಸ ಕೈಗೊಂಡಿದ್ದಾರೆ. ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಯಶ್ ಗೋವಾ ಟ್ರಿಪ್ ಹೋಗಿದ್ದಾರೆ. ನಟ ಯಶ್ ಬಂದಿರುವ ಸುದ್ದಿ ಕೇಳಿ ಅಲ್ಲಿ ಅಭಿಮಾನಿ ದಂಡೇ ನೆರೆದಿತ್ತು. ಯಶ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದಿದ್ದಾರೆ. ಅಭಿಮಾನಿಗಳಿಗೆ ನಿರಾಸೆ ಮಾಡದೆ ಯಶ್ ಫೋಟೊ ಕ್ಲಿಕ್ಕಿಸಿ ಕೊಂಡಿದ್ದಾರೆ. ಯಶ್ ರಸ್ತೆ ಮಧ್ಯೆ ಕಾರು ನಿಲ್ಲಿಸಿ ಅಭಿಮಾನಿಗಳೊಂದಿಗೆ ಸಮಯ ಕಳೆದಿದ್ದಾರೆ. ಯಶ್‌ ಅಭಿಮಾನಿಗಳೊಂದಿಗಿನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

  Rocking Yash is in Goa Trip with Family

  ಯಶ್ ಇತ್ತೀಚೆಗಷ್ಟೇ ತಮ್ಮ ಕೆಜಿಎಫ್ ಚಿತ್ರದ ಲುಕ್ ಬದಲಾಯಿಸಿ ಕೊಂಡಿದ್ದಾರೆ. ಹೇರ್ ಸ್ಟೈಲ್ ಬದಲಾಯಿಸಿಕೊಂಡ ಬಳಿಕ ಯಶ್ ಮೊದಲ ಬಾರಿಗೆ ತಮ್ಮ ಅಭಿಮಾನಿಗಳನ್ನ ಭೇಟಿ ಆಗಿದ್ದಾರೆ. ಯಶ್ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಅಗಿದ್ದಾರೆ. ಕೆಜಿಎಫ್ ಸಿನಿಮಾದ ಸಲುವಾಗಿ ಯಶ್ ವರ್ಷಗಟ್ಟಲೇ ಒಂದೇ ಹೇರ್ ಸ್ಟೈಲ್‌ನಲ್ಲಿ ಇದ್ದರು. ಜೊತೆಗೆ ಗಡ್ಡ ಬಿಟ್ಟು ಹೊಸ ಟ್ರೆಂಡ್ ಹುಟ್ಟು ಹಾಕಿದ್ದರು. ಈಗ ಕೆಜಿಎಫ್ 2 ಚಿತ್ರೀಕರಣ ಮುಗಿದ ಬಳಿಕ ಲುಕ್ ಬದಲಾಯಿಸಿ ಕೊಂಡಿದ್ದಾರೆ.

  Rocking Yash is in Goa Trip with Family

  ಸದ್ಯಕ್ಕೆ ಯಶ್ ಅಂದ ಕೂಡಲೇ ಎಲ್ಲರಿಗೂ ನೆನಪಾಗೋದೆ ಕೆಜಿಎಫ್ 2 ಸಿನಿಮಾ. ಕೆಜಿಎಫ್ 2 ಸಿನಿಮಾ ಮುಂದಿನ ವರ್ಷ 2022ರ ಏಪ್ರಿಲ್ 14ಕ್ಕೆ ರಿಲೀಸ್‌ ದಿನಾಂಕವನ್ನ ನಿಗದಿ ಮಾಡಿಕೊಂಡಿದೆ. ಕೆಜಿಎಫ್ ಚಿತ್ರಕ್ಕೆ ವಿಶ್ವಾದ್ಯಂತ ಪ್ರೇಕ್ಷಕರು ಇದ್ದಾರೆ. ಕೆಜಿಎಫ್2 ಚಿತ್ರದ ಮೇಲಿನ ನಿರೀಕ್ಷೆಯಷ್ಟೇ ಯಶ್ ಮುಂದಿನ ಸಿನಿಮಾದ ಮೇಲು ನಿರೀಕ್ಷೆ ಇದೆ. ಅದ್ರೆ ಕೆಜಿಎಫ್2 ರಿಲೀಸ್ ಬಳಿಕ ಯಶ್ ಮುಂದಿನ ನಡೆ ಬಗ್ಗೆ ಸ್ಪಷ್ಟ ಉತ್ತರ ಸಿಗಲಿದೆ.

  English summary
  KGF Star Yash is in Goa trip with family and friends. He me fans at Goa. Here are the photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X