»   » ಪುನೀತ್ ಒಲ್ಲೆ ಅಂದ 'ಭಜರಂಗಿ ಭಾಯ್ ಜಾನ್' ಸಲ್ಲು ಪಾಲಾಯ್ತು!

ಪುನೀತ್ ಒಲ್ಲೆ ಅಂದ 'ಭಜರಂಗಿ ಭಾಯ್ ಜಾನ್' ಸಲ್ಲು ಪಾಲಾಯ್ತು!

Posted By:
Subscribe to Filmibeat Kannada

ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯ್ ಜಾನ್' ಭಾರತದಾದ್ಯಂತ ಹುಟ್ಟಿಸಿರುವ ಸೆನ್ಸೇಷನ್ ಎಂಥದ್ದು ಅನ್ನೋದು ನಿಮಗೆ ಗೊತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸುತ್ತಿರುವ ಈ ಸಿನಿಮಾ ಸಲ್ಮಾನ್ ವೃತ್ತಿ ಬದುಕಿನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ. [ಭಜರಂಗಿ 'ಭಾಯಿ' ಕೈವಶವಾದ 10 ದಾಖಲೆಗಳು]

ಇಂತಹ 'ಭಜರಂಗಿ ಭಾಯ್ ಜಾನ್' ಸಿನಿಮಾ ಮೊದಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾಲಾಗಿತ್ತು ಅಂದ್ರೆ ನೀವು ನಂಬಲೇಬೇಕು. ಕನ್ನಡ ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ 'ಭಜರಂಗಿ ಭಾಯ್ ಜಾನ್' ಕಥೆ ಹೊತ್ತು ಮೊದಲು ಭೇಟಿ ಮಾಡಿದ್ದು ಅಣ್ಣಾವ್ರ ಮಗ ಅಪ್ಪುರನ್ನ.!

ಹಾಗಿದ್ಮೇಲೆ ಪುನೀತ್ ರಾಜ್ ಕುಮಾರ್ ಈ ಸಿನಿಮಾ ಮಾಡದೇ ಇರುವುದಕ್ಕೆ ಕಾರಣವೇನು? ಅದನ್ನ ಖುದ್ದು ರಾಕ್ ಲೈನ್ ವೆಂಕಟೇಶ್ ಅವರೇ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿ.....

ರಾಕ್ ಲೈನ್ ವೆಂಕಟೇಶ್ ಗೆ ಸಿಕ್ಕ ಕಥೆ

ಎಸ್.ಎಸ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ರಚಿಸಿದ್ದ 'ಭಜರಂಗಿ ಭಾಯ್ ಜಾನ್' ಕಥೆ ಕೇಳಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಥ್ರಿಲ್ ಆದರು. ಅದನ್ನ ಕನ್ನಡದಲ್ಲಿ ಮಾಡಬೇಕು ಅಂತ ನಿರ್ಧರಿಸಿ ಬೆಂಗಳೂರಿಗೆ ಓಡಿ ಬಂದರು.

ಪುನೀತ್ ರಾಜ್ ಕುಮಾರ್ ಭೇಟಿ ಮಾಡಿದ ರಾಕ್ ಲೈನ್

'ಭಜರಂಗಿ ಭಾಯ್ ಜಾನ್' ಕಥೆ ಕೇಳಿ ಇದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೂಕ್ತ ಅಂತ ಅಭಿಪ್ರಾಯ ಪಟ್ಟ ರಾಕ್ ಲೈನ್ ವೆಂಕಟೇಶ್ ಅಪ್ಪು ರನ್ನ ಭೇಟಿ ಮಾಡಿ ಅವರಿಗೆ ಕಥೆ ಹೇಳಿದರು. ['ಭಜರಂಗಿ ಭಾಯ್ ಜಾನ್' ನೋಡಿ ಕಣ್ಣೀರಿಟ್ಟ ಅಮೀರ್ ಖಾನ್]

ಒಲ್ಲೆ ಅಂದ ಪುನೀತ್ ರಾಜ್ ಕುಮಾರ್

ಕಥೆ ಕೇಳಿದ್ಮೇಲೆ ಕನ್ನಡದ ನೇಟಿವಿಟಿಗೆ ಕಷ್ಟ ಅಂತ ಅಭಿಪ್ರಾಯ ಪಟ್ಟ ಪುನೀತ್ ರಾಜ್ ಕುಮಾರ್ ಬಿಲ್ ಕುಲ್ ನೋ ಅಂದುಬಿಟ್ಟರು. ಬಂದ ದಾರಿಗೆ ಸುಂಕವಿಲ್ಲ ಅಂತ ರಾಕ್ ಲೈನ್ ಕೂಡ ತೆರಳಿದರು.

ಸಲ್ಮಾನ್ ಜೊತೆ ಸಿನಿಮಾ ಮಾಡೋ ಆಸೆ

ಬಹಳ ವರ್ಷಗಳಿಂದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಗೆ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುವ ಆಸೆ ಇತ್ತು. ಸ್ನೇಹಿತರ ಮುಖಾಂತರ ಸಲ್ಮಾನ್ ರನ್ನ ಮೀಟ್ ಮಾಡಿದ ರಾಕ್ ಲೈನ್ ಈ ಕಥೆಯನ್ನ ಅವರಿಗೆ ಹೇಳಿದರು.

ನಿರ್ಮಾಣ ಮಾಡೋಕೆ ನಿಂತ ಸಲ್ಮಾನ್!

'ಭಜರಂಗಿ ಭಾಯ್ ಜಾನ್' ಕಥೆ ಕೇಳಿ ಇಂಪ್ರೆಸ್ ಆದ ಸಲ್ಮಾನ್ ಖಾನ್ ತಾವೇ ಖುದ್ದು ನಿರ್ಮಾಣ ಮಾಡುವುದಾಗಿ ಹೇಳಿದರು. ಆಗ ಸಲ್ಮಾನ್ ಖಾನ್ ಜೊತೆ ರಾಕ್ ಲೈನ್ ಕೂಡ 'ಭಜರಂಗಿ ಭಾಯ್ ಜಾನ್' ಚಿತ್ರಕ್ಕೆ ಪಾರ್ಟ್ನರ್ ಆದರು. ['ಭಜರಂಗಿ ಭಾಯ್ ಜಾನ್' ವಿಮರ್ಶೆ: ಹಿಂದೆಂದೂ ಕಂಡಿರದ 'ಸಲ್ಮಾನ್' ಚಿತ್ರ]

ಪುನೀತ್ ಬಿಟ್ಟದ್ದು ಸಲ್ಲುಗೆ ಲಾಭ

ಪುನೀತ್ ಗೆ ಇಷ್ಟವಾಗದ ಕಥೆ ಸಲ್ಲುಗೆ ರುಚಿಸಿತು. ಪುನೀತ್ ಮಾಡಲ್ಲ ಅಂದ ಸಿನಿಮಾ ಸಲ್ಮಾನ್ ಪಾಲಾಯ್ತು. ಇಂದು ಎಲ್ರು ಅಚ್ಚರಿ ಪಡುವಷ್ಟು ಕಲೆಕ್ಷನ್ ಮಾಡಿದೆ 'ಭಜರಂಗಿ ಭಾಯ್ ಜಾನ್'. ಲಕ್ ಅನ್ನೋದು ಇದಕ್ಕೆ ಇರಬಹುದಾ?

    English summary
    Multilingual Film Producer Rockline Venkatesh has revelead that 'Bajrangi Bhaijaan' story was first told to Kannada Actor Puneeth Rajkumar and he rejected it.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada