»   » ಡಬ್ಬಿಂಗ್ ಬೇಡ ಅಂತಾರೆ, ಪರಭಾಷೆ ಸಿನಿಮಾ ಬೆಂಬಲಿಸ್ತಾರೆ: ಇದು ಕನ್ನಡ ದ್ರೋಹ ಅಲ್ಲವೇ?

ಡಬ್ಬಿಂಗ್ ಬೇಡ ಅಂತಾರೆ, ಪರಭಾಷೆ ಸಿನಿಮಾ ಬೆಂಬಲಿಸ್ತಾರೆ: ಇದು ಕನ್ನಡ ದ್ರೋಹ ಅಲ್ಲವೇ?

Posted By:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಡ.! ಡಬ್ಬಿಂಗ್ ಬರುವುದರಿಂದ ಕನ್ನಡ ಸಿನಿಮಾಗಳಿಗೆ ಮಾರಕ.! ಕನ್ನಡ ಚಿತ್ರರಂಗ ಉಳಿಯಬೇಕು.! ಕನ್ನಡ ಸಿನಿಮಾಗಳನ್ನ ಬೆಳೆಸಬೇಕು... ಎಂದು ಹೋದಲ್ಲಿ, ಬಂದಲ್ಲೆಲ್ಲಾ ಭಾಷಣ ಮಾಡ್ತಾರೆ.

ಹಾಗೆ ಭಾಷಣ ಮಾಡುವವರ ಪೈಕಿ ಕೆಲವರು ಪರಭಾಷೆ ಸಿನಿಮಾಗಳನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದೆ ನಿಲ್ತಾರೆ, ವಿತರಣೆ ಹಕ್ಕು ಪಡೆಯುತ್ತಾರೆ, ಪ್ರಚಾರಕ್ಕೂ ಬರ್ತಾರೆ. ಇದು ಕನ್ನಡ ಅಭಿಮಾನವೇ? ಇದರಿಂದ ಕನ್ನಡ ಚಿತ್ರಗಳಿಗೆ ಅನ್ಯಾಯ ಆಗುತ್ತಿಲ್ಲವೇ.? ಇದು ಕನ್ನಡಕ್ಕೆ ಮಾಡುತ್ತಿರುವ ದ್ರೋಹ ಅಲ್ಲವೇ.? ಎಂದು ಡಬ್ಬಿಂಗ್ ಪರ ಹೋರಾಟಗಾರರು ಇದೀಗ ಟ್ವಿಟ್ಟರ್ ನಲ್ಲಿ ಛೀಮಾರಿ ಹಾಕುತ್ತಿದ್ದಾರೆ.

ಇಂತಹ ಬೆಳವಣಿಗೆಗೆ ಈಗ ನೇರವಾಗಿ ಕಾರಣವಾಗಿರುವುದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಹೌದು, ಡಬ್ಬಿಂಗ್ ವಿರೋಧಿಸುವ ರಾಕ್ ಲೈನ್, ತೆಲುಗು ನಟ ಮಹೇಶ್ ಬಾಬು ಅವರ 'ಸ್ಪೈಡರ್' ಚಿತ್ರಕ್ಕೆ ಬೆಂಬಲ ಕೊಟ್ಟಿರುವುದು ಡಬ್ಬಿಂಗ್ ಪರ ಹೋರಾಟಗಾರರನ್ನ ಕೆರಳಿಸಿದೆ. ಮುಂದೆ ಓದಿ.....

'ಸ್ಪೈಡರ್' ಚಿತ್ರಕ್ಕೆ ರಾಕ್ ಲೈನ್ ಬೆಂಬಲ

ಮಹೇಶ್ ಬಾಬು ಅಭಿನಯದಲ್ಲಿ ತಯಾರಾಗಿರುವ 'ಸ್ಪೈಡರ್' ಚಿತ್ರ ಇದೇ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಮಹೇಶ್ ಬಾಬು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಕನ್ನಡದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ 'ಸ್ಪೈಡರ್' ಚಿತ್ರಕ್ಕೆ ಬೆಂಬಲ ಕೊಟ್ಟಿರುವುದು ಈಗ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ.

'ಡಬ್ಬಿಂಗ್' ವಿರುದ್ಧ ಮತ್ತೊಂದು ಮಹಾಯುದ್ಧಕ್ಕೆ ಕಾರಣವಾಗುತ್ತಾ 'ಧೀರ'.!

ಡಬ್ಬಿಂಗ್ ಬೇಡ, ಪರಭಾಷೆ ಸಿನಿಮಾ ಬೇಕು

ಈ ಹಿಂದೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಡಬ್ಬಿಂಗ್ ಬೇಡವೆಂದು ಹೋರಾಟದಲ್ಲಿ ಭಾಗವಹಿಸಿದ್ರು. ಪ್ರತಿಭಟನೆ ಮಾಡಿದ್ರು. ಆದ್ರೆ, ಈಗ ಪರಭಾಷೆ ಚಿತ್ರಗಳಿಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಇದರಿಂದ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗಲ್ವ? ಎಂಬ ಚರ್ಚೆ ಟ್ವಿಟ್ಟರ್ ನಲ್ಲಿ ನಡೆಯುತ್ತಿದೆ.

'ಡಬ್ಬಿಂಗ್, ರೀಮೇಕ್ ಬ್ಯಾನ್ ಮಾಡಿ' ಎಂದ ನಟ ಅನಂತ್ ನಾಗ್

'ಸ್ಪೈಡರ್' ಚಿತ್ರವನ್ನ ಕನ್ನಡದಲ್ಲಿ ಡಬ್ ಮಾಡಿ

ಈ ರೀತಿ ನೇರವಾಗಿ ತೆಲುಗು ಸಿನಿಮಾ ಬಿಡುಗಡೆಯಾಗುವ ಬದಲು, ಕನ್ನಡಕ್ಕೆ ಡಬ್ ಆಗಿ ಬರಲಿ. ಇದರಿಂದ ಕನ್ನಡನಾದ್ರೂ ಉಳಿಯತ್ತಿತ್ತು. ಜನರು ಕನ್ನಡದಲ್ಲೇ ಸಿನಿಮಾ ನೋಡುತ್ತಿದ್ದರು ಎಂಬ ಅಭಿಪ್ರಾಯ ಇವರದ್ದು.

ಸದ್ದಿಲ್ಲದೇ ಕನ್ನಡಕ್ಕೆ ಡಬ್ ಆಗಿದೆ ಹಿಂದಿಯ 'ಮೆಗಾ ಸೀರಿಯಲ್'.!

ಡಬ್ಬಿಂಗ್ ಸಿನಿಮಾ ಬಂದಾಗ ಹೋರಾಟ ಮಾಡ್ತೀರಾ?

ಡಬ್ಬಿಂಗ್ ಸಿನಿಮಾ ಕೇವಲ 40 ರಿಂದ 50 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆಗ ಹೋರಾಟ, ಪ್ರತಿಭಟನೆ ಮಾಡಿದ್ರಿ. ಈಗ 'ಸ್ಪೈಡರ್' ಸಿನಿಮಾ ಕರ್ನಾಟಕದಲ್ಲಿ ಸುಮಾರು 250 ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ. ಈಗ ಏನ್ಮಾಡ್ತಿದ್ದೀರಾ? ಎಂದು ಡಬ್ಬಿಂಗ್ ಪರ ಹೋರಾಟಗಾರರು ಪ್ರಶ್ನಿಸುತ್ತಿದ್ದಾರೆ.

ಡಬ್ಬಿಂಗ್ ಜನರಿಗೆ ಬೇಕಂದ್ರೆ ತಡೆಯಲು ನಾನ್ಯಾರು: ಶಿವಣ್ಣ

English summary
Kannada Producer Rockline Venkatesh supports Telugu Film 'Spyder': Pro dubbing activists starts campaign against KFCC.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada