For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ-ಪ್ರಭುದೇವ ಜೊತೆ ಪ್ಯಾನ್ ಇಂಡಿಯಾಗೆ ಕೈ ಹಾಕುತ್ತಿದ್ದಾರಾ ಭಟ್ರು?

  |

  ಯೋಗರಾಜ್ ಭಟ್ ಪ್ರಸ್ತುತ 'ಗಾಳಿಪಟ 2' ಸಿನಿಮಾದ ಬಿಡುಗಡೆಯ ಬಗ್ಗೆ ತಲೆ ಕೆಡೆಸಿಕೊಂಡಿದ್ದಾರೆ. ಅದರ ಜೊತೆಗೆ 'ಗರಡಿ' ಹೆಸರಿನ ಸಿನಿಮಾ ಸಹ ಚಿತ್ರೀಕರಣ ಮಾಡುತ್ತಿದ್ದಾರೆ. ಇದರ ಬಳಿಕ ಒಂದು ದೊಡ್ಡ ಪ್ರಾಜೆಕ್ಟ್‌ಗೆ ಯೋಗರಾಜ್ ಭಟ್ಟರು ಕೈ ಹಾಕಿದ್ದಾರೆ.

  'ಗರಡಿ' ಸಿನಿಮಾದ ಬಳಿಕ ಯೋಗರಾಜ್ ಭಟ್ರು ಶಿವರಾಜ್ ಕುಮಾರ್‌ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣನ ಜೊತೆ ಪ್ರಭುದೇವಾ ಸಹ ಇರಲಿದ್ದಾರೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾದರಿಯಲ್ಲಿ ದೊಡ್ಡದಾಗಿ ನಿರ್ಮಾಣ ಮಾಡುವ ಸಾಧ್ಯತೆ ಇದೆ.

  ಬಾಗಲಕೋಟೆಯಲ್ಲಿ ಯೋಗರಾಜ್ ಭಟ್ಟರು, 'ಗರಡಿ' ಸೇರಿದ ಸಚಿವ ಪಾಟೀಲ್!ಬಾಗಲಕೋಟೆಯಲ್ಲಿ ಯೋಗರಾಜ್ ಭಟ್ಟರು, 'ಗರಡಿ' ಸೇರಿದ ಸಚಿವ ಪಾಟೀಲ್!

  ಶಿವರಾಜ್ ಕುಮಾರ್-ಪ್ರಭುದೇವಾ ಹಾಗೂ ಯೋಗರಾಜ್ ಭಟ್‌ ಅಂಥಹಾ ಸ್ಟಾರ್‌ಗಳ ಸಿನಿಮಾಕ್ಕೆ ಸ್ಟಾರ್ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದು, ಸಿನಿಮಾವು ದೊಡ್ಡ ಮಟ್ಟದಲ್ಲಿಯೇ ನಿರ್ಮಾಣವಾಗಲಿದೆ. ಅದೂ ಅಲ್ಲದೆ ತಮಿಳು, ಹಿಂದಿ, ತೆಲುಗುಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿರುವ ಪ್ರಭುದೇವಾ ಸಹ ಸಿನಿಮಾದಲ್ಲಿ ಇರುವ ಕಾರಣ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ.

  ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಒಟ್ಟಿಗೆ ನಟಿಸುತ್ತಿರುವ ಸಿನಿಮಾಕ್ಕೆ 'ಕುಲದಲ್ಲಿ ಕೀಳ್ಯಾವುದೊ' ಎಂದು ಹೆಸರಿಡಲಾಗಿದ್ದು, ಸಿನಿಮಾದ ಕತೆ ನಡೆಯುವುದು 1960-70ರ ದಶಕದಲ್ಲಿ. ಇದು ರಾಕ್‌ಲೈನ್ ಪ್ರೊಡಕ್ಷನ್‌ನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಲಿದೆ. ಸಿನಿಮಾದ ಮುಹೂರ್ತ ಮುಂದಿನ ತಿಂಗಳು ನಡೆಯಲಿದ್ದು, ಚಿತ್ರೀಕರಣವೂ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

  'ಗರಡಿ' ಸಿನಿಮಾದಿಂದ ಹೊರನಡೆದ ರಚಿತಾ ರಾಮ್ ಜಾಗಕ್ಕೆ ಬಂದ್ರು ಮತ್ತೋರ್ವ ನಟಿ!'ಗರಡಿ' ಸಿನಿಮಾದಿಂದ ಹೊರನಡೆದ ರಚಿತಾ ರಾಮ್ ಜಾಗಕ್ಕೆ ಬಂದ್ರು ಮತ್ತೋರ್ವ ನಟಿ!

  ರಾಕ್‌ಲೈನ್ ವೆಂಕಟೇಶ್, ತಮಿಳಿನ ಸೂಪರ್ ಹಿಟ್ ಸಿನಿಮಾ 'ವಿಸಾರನೈ'ನ ರೀಮೇಕ್‌ ಹಕ್ಕುಗಳನ್ನು ಪಡೆದುಕೊಂಡಿದ್ದು, ಹಿಂದಿಯಲ್ಲಿ ಆ ಸಿನಿಮಾವನ್ನು ರೀಮೇಕ್ ಮಾಡುವ ಯೋಚನೆಯಲ್ಲಿದ್ದಾರೆ. ಇದರ ಜೊತೆಗೆ ವಿಜಯ್ ದೇವರಕೊಂಡ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಸಹ ಪ್ಲಾನ್ ಮಾಡಿದ್ದಾರೆ. ಇದರ ನಡುವೆ ಈಗ ಯೋಗರಾಜ್ ಭಟ್ಟರ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ.

  Rockline Venkatesh to produce Shivarajkumar and Prabhudheva Movie Directed by Yogaraj Bhat

  Recommended Video

  KGF 2 Making Video | Ramika Sen | ಶೂಟಿಂಗ್ ಸೆಟ್ ನಲ್ಲಿ ರಮಿಕಾ ಸೇನ್ | Raveena Tandon | Prashanth Neel

  ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ 'ಗರಡಿ' ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ. ಸಿನಿಮಾದಲ್ಲಿ ಯಶಸ್ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸೋನಲ್ ಮೊಂತಾರೊ ನಾಯಕಿ. ಸಿನಿಮಾದಲ್ಲಿ ಸಚಿವ ಬಿ.ಸಿ.ಪಾಟೀಲ್ ಸಹ ಬಣ್ಣ ಹಚ್ಚಿದ್ದಾರೆ. ಜೊತೆಗೆ ಸಚಿವ ಸೋಮಶೇಖರ್ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಬಿ.ಸಿ.ಪಾಟೀಲ್ ಪುತ್ರಿಯೇ. ಇದೇ ಸಿನಿಮಾದಲ್ಲಿ ನಟ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ಗರಡಿ ಮನೆ, ಪೈಲ್ವಾನ್‌ಗಳ ಕುರಿತ ಕತೆಯನ್ನು ಹೊಂದಿರಲಿದೆ.

  English summary
  Rockline Venkatesh to produce Shivarajkumar and Prabhudheva Movie Directed by Yogaraj Bhat. Movie named as Kuladalli Keelyavudo.
  Tuesday, April 19, 2022, 15:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X