»   » ರೋಜಾ ಖ್ಯಾತಿಯ ಮಧುಬಾಲಾ ಸೆಕೆಂಡ್ ಇನ್ನಿಂಗ್ಸ್

ರೋಜಾ ಖ್ಯಾತಿಯ ಮಧುಬಾಲಾ ಸೆಕೆಂಡ್ ಇನ್ನಿಂಗ್ಸ್

By: ಅನಂತರಾಮು, ಹೈದರಾಬಾದ್
Subscribe to Filmibeat Kannada
Actress Madhu Bala
ಖ್ಯಾತ ನಿರ್ದೇಶಕ ಮಣಿರತ್ನಂ ಅವರ 'ರೋಜಾ' ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಅರವಿಂದ ಸ್ವಾಮಿ ಜೊತೆ ಅಮೋಘ ಅಭಿನಯ ನೀಡಿದ್ದ 'ಮಧು ಬಾಲಾ' ಸೆಕೆಂಡ್ ಇನ್ನಿಂಗ್ಸ್ ಗೆ ಸಜ್ಜಾಗಿದ್ದಾರೆ. ಸುದೀರ್ಘ ಸಮಯ ಅವರು ಬೆಳ್ಳಿಪರದೆಯಿಂದ ನಾಪತ್ತೆಯಾಗಿದ್ದರು.

ತೆಲುಗಿನ ಗಣೇಶ್ ಎಂಬ ಚಿತ್ರದಲ್ಲಿ ಮಧು ಬಾಲಾ 1998ರಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಹಿಂದಿಯ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಈಗ ಮತ್ತೊಂದು ತೆಲುಗು ಚಿತ್ರದ ಮೂಲಕ ಅಅವರು ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ.

1999ರಲ್ಲಿ ಆನಂದ್ ಶಾ ಎಂಬುವವರ ಜೊತೆ ಮಧೂ (ಅವರ ಹ್ರಸ್ವ ನಾಮ) ಅವರ ವಿವಾಹವಾಯಿತು. ಅವರ ಸಾರ್ಥಕ ದಾಂಪತ್ಯ ಜೀವನದ ಫಲವಾಗಿ ಇಬ್ಬರು ಮಕ್ಕಳಿದ್ದಾರೆ. ಈಗ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೇಮಾ ಮಾಲಿನಿ ಅವರ ಸೋದರ ಸೊಸೆ ಈಕೆ. ಮಣಿರತ್ನಂ ಅವರ ರೋಜಾ ಹಾಗೂ ಶಂಕರ್ ಅವರ ಜಂಟಲ್ ಮೆನ್ ಚಿತ್ರಗಳು ಮಧೂ ಅವರ ವೃತ್ತಿಜೀವನದಲ್ಲಿ ಹೊಸ ತಿರುವು ನೀಡಿದ ಚಿತ್ರಗಳು.

ಬಳಿಕ ಈಕೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡರಾದರೂ ಯಾವ ಚಿತ್ರಗಳೂ ಅಷ್ಟಾಗಿ ಹೆಸರು ತಂದುಕೊಡಲಿಲ್ಲ. ಅಂದಹಾಗೆ ಕನ್ನಡದ ಅಣ್ಣಯ್ಯ ಹಾಗೂ ಟೈಂ ಬಾಂಬ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
Mani Ratnam's 'Roja' heroine Madhu Bala is all set to feature in Telugu films again after a long time. She has last seen in Telugu film 'Ganesh' in 1998, however the actress did a few roles in Hindi cinema but she is returning to Telugu films after a long gap.
Please Wait while comments are loading...