Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೂಪಾ ಅಯ್ಯರ್ ಆಲ್ ರೌಂಡರ್ ಇದ್ದಂತೆ, ಪ್ರೇಮ್
*
ಶ್ರಿಯಾ
ಸರನ್
ಜೊತೆಗಿನ
ಅನುಭವ
ಹೇಗಿದೆ?
ಅವರನ್ನು
ಆರಾಧಿಸುವ
ಅಭಿಮಾನಿಗಳಲ್ಲಿ
ನಾನೂ
ಒಬ್ಬ.
ಅವರ
ಅಭಿನಯದ
ಎಲ್ಲ
ಚಿತ್ರಗಳನ್ನು
ನೋಡುತ್ತಿದ್ದೆ.
ಚಿತ್ರದ
ನಾಯಕಿ
ಯಾರು
ಎಂಬುದನ್ನು
ಕೊನೆಯ
ತನಕ
ಗೊತ್ತಿರಲಿಲ್ಲ.
ಆದರೆ
ಚಿತ್ರದ
ಮುಹೂರ್ತದ
ದಿನ
ನನಗೆ
ಅಚ್ಚರಿ
ಕಾದಿತ್ತು.
ಚಿತ್ರದ
ನಾಯಕಿ
ಶ್ರಿಯಾ
ಸರನ್
ಎಂಬುದು
ಗೊತ್ತಾಗುತ್ತಿದ್ದಂತೆ
ಥ್ರಿಲ್
ಆದೆ.
ಅವರೊಂದಿಗೆ
ಅಭಿನಯಿಸಿದ್ದು
ನಿಜಕ್ಕೂ
ಮರೆಯಲಾಗದ
ಅನುಭವ
ನೀಡಿದೆ.
*
ತೆರೆಯ
ಮೇಲೆ
ನಿಮ್ಮಿಬ್ಬರ
ಕೆಮಿಸ್ಟ್ರಿ
ಹೇಗೆ
ವರ್ಕ್
ಔಟ್
ಆಗಿದೆ?
'ಚಂದ್ರ'
ಚಿತ್ರದ
ಪ್ರಮುಖ
ಆಕರ್ಷಣೆಯೇ
ನಮ್ಮಿಬ್ಬರ
ಆನ್
ಸ್ಕ್ರೀನ್
ಕೆಮಿಸ್ಟ್ರಿ.
ತೆರೆಯ
ಮೇಲೆ
ಅದ್ಭುತವಾಗಿ
ಮೂಡಿ
ಬಂದಿವೆ.
ಇದರ
ಎಲ್ಲಾ
ಶ್ರೇಯಸ್ಸು
ನಿರ್ದೇಶಕರಿಗೆ
ಸಲ್ಲಬೇಕು.
ಚಿತ್ರದಲ್ಲಿನ
ಪ್ರಣಯಭರಿತ
ಸನ್ನಿವೇಶಗಳ
ಬಗ್ಗೆ
ಮೊದಲೇ
ರೂಪಾ
ತಿಳಿಸಿದ್ದರು.
ಈ
ದೃಶ್ಯಗಳು
ಆದಷ್ಟು
ನೈಜವಾಗಿ
ಮೂಡಿಬರುವಂತೆ
ಹೇಳಿದ್ದರು.
ಇದಕ್ಕಿಂತಲೂ ಮುಖ್ಯವಾಗಿ ಶ್ರೀಯಾ ಅವರು ಪ್ರೊಫೆಷನಲ್ ನಟಿ. ಅವರ ಫ್ರೆಂಡ್ಲಿ ನೇಚರ್, ಲವಲವಿಕೆ ಅಭಿನಯ ಈ ದೃಶ್ಯಗಳು ಇನ್ನಷ್ಟು ಸೊಗಸಾಗಿ ಮೂಡಿಬರಲು ಸಾಧ್ಯವಾಯಿತು. ತೆರೆಯ ಮೇಲಿನ ನಮ್ಮಿಬ್ಬರ ಕೆಮಿಸ್ಟ್ರಿ ಖಂಡಿತವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
ಆ ರೀತಿ ಏನೂ ಇಲ್ಲ. ನಾನು ಚಿತ್ರದ ನಾಯಕ. ಆಕೆ ನಾಯಕಿ. ನಾವು ನಮ್ಮ ಪಾತ್ರಗಳನ್ನು ಮಾಡುತ್ತಿದ್ದೇವಷ್ಟೆ. ನಾವು ಹೆಚ್ಚು ತೊಡಗಿಕೊಂಡಷ್ಟು ಉತ್ತಮವಾಗಿ ಮೂಡಿಬರುತ್ತದೆ. ನಾವೇ ಕೆಟ್ಟದಾಗಿ ಫೀಲ್ ಮಾಡಿಕೊಂಡರೆ ಅದು ತೆರೆಯ ಮೇಲೆ ಇನ್ನೂ ಕೆಟ್ಟದಾಗಿರುತ್ತದೆ.
*
ಚಂದ್ರ
ಚಿತ್ರದ
ಸಂಗೀತದ
ಬಗ್ಗೆ
ಏನು
ಹೇಳುತ್ತೀರಿ?
ಈ
ಚಿತ್ರದ
ಇನ್ನೊಂದು
ಪ್ರಮುಖ
ಬಲ
ಸಂಗೀತ.
ಗೌತಮ್
ಶ್ರೀವಾತ್ಸವ್
ಅವರ
ಸಂಗೀತದ
ಪ್ರಾಸ್ತಾವಿಕ
ಹಾಡು
ಕೇಳಿದಾಗ
ಬಹುಶಃ
ಇಳಯರಾಜಾ
ಅಥವಾ
ಹಂಸಲೇಖ
ಅವರ
ಸಂಗೀತ
ಸಂಯೋಜನೆ
ಇರಬೇಕು
ಎಂದುಕೊಂಡೆ.
ಅವರ
ಧ್ವನಿಯಲ್ಲಿನ
ನಿಖರತೆಯನ್ನು
ಕೇಳಿದಾಗ
ಬಹುಶಃ
ಗೌತಮ್
ಅವರ
ಸಂಗೀತ
ಸಂಯೋಜನೆ
ಅಲ್ಲ
ಎನ್ನಿಸಿತು.
ಬಳಿಕ
ರೂಪಾ
ಅವರು
ಗೌತಮ್
ಬಗ್ಗೆ
ಹೇಳಿ
ಅವರ
ಪ್ರತಿಭೆ
ಬಗ್ಗೆ
ಹೇಳಿದಾಗಲೇ
ನನಗೆ
ನಂಬಿಕೆ
ಬಂದಿದ್ದು.
*
ಈ
ಚಿತ್ರದಲ್ಲಿ
ನಿಮಗೆ
ಇಷ್ಟವಾದ
ಹಾಡು
ಯಾವುದು?
ಎಲ್ಲ
ಹಾಡುಗಳು
ನನಗೆ
ಇಷ್ಟ.
ಈ
ಹಾಡು
ಇಷ್ಟ
ಎಂದು
ಬೆರಳು
ಮಾಡಿ
ತೋರಿಸಲು
ನನಗೆ
ಆಗುತ್ತಿಲ್ಲ.
ಕೆಲವು
ಹಾಡುಗಳು
ಅತ್ಯುತ್ತಮ
ಧ್ವನಿಯಿಂದಾಗಿ
ಹಿಡಿಸಿವೆ.
ಇನ್ನೂ
ಕೆಲವು
ಹಾಡುಗಳ
ದೃಶ್ಯವೈಭವದಿಂದಾಗಿ
ಸೊಗಸಾಗಿವೆ.
ಆದರೆ
ಶಾಸ್ತ್ರೀಯ
ಧಾಟಿಯಲ್ಲಿರುವ
ಹಾಡುಗಳಂತೂ
ಸಂಗೀತ
ಪ್ರಿಯರಿಗೆ
ತುಂಬಾ
ಇಷ್ಟವಾಗಿವೆ.
ಅವರಿಂದ
ಬರುತ್ತಿರುವ
ಪ್ರತಿಕ್ರಿಯೆಯೇ
ಇದಕ್ಕೆ
ಸಾಕ್ಷಿ.
*
ಚಿತ್ರದಲ್ಲಿನ
ತಮ್ಮ
ಮೈಕಟ್ಟಿನ
ರಹಸ್ಯವೇನು?
'ಶತ್ರು'
ಚಿತ್ರಕ್ಕಾಗಿ
ಸಾಕಷ್ಟು
ಕಸರತ್ತು,
ಡಯಟ್
ಮಾಡಿದ್ದೆ.
ಎಂಟು
ತಿಂಗಳ
ಕಾಲ
ಬೆವರರಿಸಿದ
ಪರಿಣಾಮ
ಇದು.
ಚಂದ್ರ
ಚಿತ್ರಕ್ಕಾಗಿ
ಇನ್ನೂ
ಮೂರುವರೆ
ತಿಂಗಳು
ಇದನ್ನು
ಮುಂದುವರಿಸಿದೆ.
ಚಿತ್ರದಲ್ಲಿ
ಹುರಿಗಟ್ಟಿದ
ದೇಹ
ಪ್ರದರ್ಶನಕ್ಕೆ
ಅನುಕೂಲವೂ
ಆಯಿತು.
*
ಒಂದು
ವರ್ಷದ
ಹಿಂದೆ
ಸೆಟ್ಟೇರಿದ
ಶತ್ರು
ಚಿತ್ರ
ಯಾಕೆ
ತಡವಾಗುತ್ತಿದೆ?
ಶತ್ರು
ಚಿತ್ರದ
ಚಿತ್ರೀಕರಣ
ಹಾಗೂ
ನಿರ್ಮಾಣ
ನಂತರದ
ಕೆಲಸಗಳು
ಮುಗಿದಿವೆ.
ನಾನಾ
ಕಾರಣಗಳಿಂದ
ಚಿತ್ರ
ತಡವಾಗುತ್ತಿದೆ.
ಇದರಲ್ಲಿ
ಹಣಕಾಸು
ಸಮಸ್ಯೆಯೂ
ಒಂದು.
*
ತಮ್ಮ
ಮುಂದಿನ
ಚಿತ್ರಗಳ
ಬಗ್ಗೆ
ಹೇಳಿ?
ಸದ್ಯಕ್ಕೆ
ಕೈಯಲ್ಲಿ
ಎರಡು
ಚಿತ್ರಗಳಿವೆ.
ಆರ್
ಚಂದ್ರು
ಜೊತೆಗೆ
'ಮಳೆ'
ಎಂಬ
ಮತ್ತೊಂದು
ಚಿತ್ರದಲ್ಲಿ
ಅಭಿನಯಿಸಲಿದ್ದೇನೆ.
ಪ್ರೀತಂ
ಗುಬ್ಬಿ
ಮುಂದಿನ
ನಿರ್ದೇಶನದ
ಚಿತ್ರದಲ್ಲೂ
ಅಭಿನಯಿಸಲಿದ್ದೇನೆ.