Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೌತಮ್ ಜತೆ ಏಳುಹೆಜ್ಜೆ ಹಾಕಿದ ರೂಪಾ ಅಯ್ಯರ್
ನಟಿ, ನಿರ್ದೇಶಕಿ ಹಾಗೂ ಲೇಖಕಿ ರೂಪಾ ಅಯ್ಯರ್ ಅವರ ಮದುವೆ ವಿಜೃಂಭಣೆಯಿಂದ ಶ್ರಾವಣ ಬುಧವಾರ (ಆ.6) ಬೆಳಗ್ಗೆ ನೆರವೇರಿತು. ಬೆಂಗಳೂರು ಜಯನಗರದ ಪೂರ್ಣಿಮಾ ಕನ್ವೆನ್ ಷನ್ ಸೆಂಟರ್ ನಲ್ಲಿ ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರ ಕೈಹಿಡಿದರು ರೂಪಾ ಅಯ್ಯರ್.
ನೂತನ ದಾಂಪತ್ಯಕ್ಕೆ ಅಡಿಯಿಟ್ಟ ರೂಪಾ ಅಯ್ಯರ್ ಹಾಗೂ ಗೌತಮ್ ಅವರನ್ನು ಚಿತ್ರರಂಗದ ಹಲವು ಗಣ್ಯರು ಶುಭ ಹಾರೈಸಿದರು. ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಈ ಮದುವೆಗೆ ಬಂಧು ಬಳಗ, ಹಿತೈಷಿಗಳು ಆಗಮಿಸಿ ಶುಭ ಕೋರಿದರು. [ಶಿವಣ್ಣ ಪುತ್ರಿ ನಿರುಪಮಾ ನಿಶ್ಚಿತಾರ್ಥ ಚಿತ್ರ ಸೌರಭ]
ಗೌತಮ್ ಶ್ರೀವತ್ಸ ಅವರು ಸಂಗೀತ ನಿರ್ದೇಶಕರಾಗಿದ್ದು, ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಚಿತ್ರಕ್ಕೆ ಅವರೇ ಸಂಗೀತ ನೀಡಿದ್ದರು. ಚಿತ್ರದ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದವು. ಈಗ ಇಬ್ಬರೂ ಮದುವೆ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಬನ್ನಿ ಸ್ಲೈಡ್ ನಲ್ಲಿ ನೋಡೋಣ ಮದುವೆಯ ಕಲರ್ ಫುಲ್ ಚಿತ್ರಗಳು.

ಮದುವೆಗೆ ಸಂಪ್ರದಾಯಿಕ ಸಿಂಗಾರ
ಮದುವೆಗೆ ನೂತನ ದಂಪತಿಗಳು ಸಾಂಪ್ರದಾಯಿಕವಾಗಿ ಸಿಂಗಾರಗೊಂಡು ಎಲ್ಲರ ಕಣ್ಮನ ಸೆಳೆದರು.

ತಾಳಿಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನಮಾಲೆ
ಈ ಫೋಟೋ ನೋಡುತ್ತಿದ್ದರೆ ಈ ಹಾಡು ನೆನಪಾಗದೆ ಇರದು.

ಈಗ ತಾಳಿಕಟ್ಟುವ ಸಮಯ...ಗಟ್ಟಿಮೇಳ ಗಟ್ಟಿಮೇಳ
ಈಗ ತಾಳಿಕಟ್ಟುವ ಸಮಯ...ಗಟ್ಟಿಮೇಳ ಗಟ್ಟಿಮೇಳ

ಇಬ್ಬರದ್ದೂ ಹೇಳಿ ಮಾಡಿಸಿದ ಜೋಡಿ
ಇಬ್ಬರನ್ನೂ ನೋಡುತ್ತಿದ್ದರೆ ಹೇಳಿ ಮಾಡಿಸಿದ ಜೋಡಿ ಎಂದು ಎಲ್ಲರಿಗೂ ಅನ್ನಿಸುತ್ತದೆ.

ಹಿರಿಯ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ
ರೂಪಾ ಅಯ್ಯರ್ ಮತ್ತು ಗೌತಮ್ ಶ್ರೀವತ್ಸ ಅವರ ಮದುವೆಗೆ ಉಭಯ ಕುಟುಂಬದ ಹಿರಿಯರು ಒಪ್ಪಿಗೆ ನೀಡಿದ್ದು, ವಿವಾಹ ಕಾರ್ಯಕ್ರಮ ನೇರವೇರಿತು.

ಚಂದ್ರ ನಿರ್ಮಾಣ ವೇಳೆಯಲ್ಲೇ ಪ್ರೇಮಾಂಕುರ
ಚಂದ್ರ ಚಿತ್ರ ನಿರ್ಮಾಣ ವೇಳೆಯಲ್ಲಿಯೇ ಇಬ್ಬರ ನಡುವೆ ಪ್ರೀತಿ ಅಂಕುರವಾಯ್ತು ಎನ್ನಲಾಗಿದೆ. ಇದೀಗ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ವಿವಾಹ ನೆರವೇರಿತು.

ಹಬ್ಬ ಹಬ್ಬ ಮದುವೆ ಹಬ್ಬ
ನಗು ನಗುತಿರುವಾಗ ಮನಸಿಗೆ ಹುಮ್ಮಸ್ಸು ಬದುಕಲು ಕಲಿತಾಗ ಲೈಫೇ ಸಕ್ಸಸ್ಸು ಇದು ಒಂಟಿ ಜೀವಗಳು ಜಂಟಿಯಾಗುವ ಸಂಭ್ರಮದ ವಯಸು.

ಇದು ಹೊಸ ಜೀವನ ತಗೋ ಮಜಾನಾ
ಇದು ಹೊಸ ಜೀವನ ತಗೋ ಮಜಾನಾ...ಯಾಹಿ ಯಾಹಿ ಯಾಹಿ ಯಾಹಿ

ಬಿಡ್ರಿ ಸ್ವಾಮಿ ಟನ್ಷನ್ನು ನಡೆಸಿ ಚೆನ್ನಾಗಿ ಫಂಕ್ಷನ್ನು
ಬಿಡ್ರಿ ಸ್ವಾಮಿ ಟೆನ್ಷನ್ನು ನಡೆಸಿ ಚೆನ್ನಾಗಿ ಫಂಕ್ಷನ್ನು ಮದುವೆ ಮಂಗಳ ಕಾರ್ಯದಲಿ ತುಂಬಿದ ಮನಸು ನಿಮಗಿರಲಿ ಬಂಧು ಬಳಗ ಬಂದಾಯ್ತು...ಯಾಹಿ ಯಾಹಿ ಯಾಹಿ ಯಾಹಿ.

ಸಪ್ತಪದೀ...ಇದು ಸಪ್ತಪದೀ.... ಈ ಏಳು ಹೆಜ್ಜೆಗಳ ಈ ಸಂಬಂಧ.
ನಮ್ಮಏಳು ಜನುಮಗಳ ಅನುಬಂಧ...ನಿನ್ನೊಡನೆ ನನ್ನ ಜೀವನದಾ ಮೊದಲ ಹೆಜ್ಜೆ ಇಡುವೆ ಇದಕೆ ಹರಿಯ ಸಾಕ್ಷಿ ಎನುವೆ.

ಸ್ವರ್ಗಸಮಾನ ಸುಖವ ನೀಡೆಂದು
ಸ್ವರ್ಗಸಮಾನ ಸುಖವ ನೀಡೆಂದು ಕೈಗಳನೂ ಮುಗಿವೆ ಎರಡನೆ ಹೆಜ್ಜೆಯನು ಇಡುವೆ...

ಮೂರು ಕಾಲದಲು ಏಕ ರೀತಿಯಲಿ
ಮೂರು ಕಾಲದಲು ಏಕ ರೀತಿಯಲಿ ನಾ ಸಹಚರನಾಗಿರುವೆ ಮೂರನೆ ಹೆಜ್ಜೆಯನು ಇಡುವೆ

ಮಮತೆ ಮೋಹ ಸುಖದುಃಖದಲಿ ಜೊತೆಯಲ್ಲೇ ಇರುವೆ
ಮಮತೆ ಮೋಹ ಸುಖದುಃಖದಲಿ ಜೊತೆಯಲ್ಲೇ ಇರುವೆ ನಾಲ್ಕನೆ ಹೆಜ್ಜೆಯನು ಇಡುವೆ....

ನಾವು ಅಜ್ಞಾನದಿಂದ ಮುಕ್ತರಾಗೋಣ ಎನುತಾ ಜೊತೆಯಾಗಿ
ನಾವು ಅಜ್ಞಾನದಿಂದ ಜೊತೆಯಾಗಿ ನಾವು ಅಜ್ಞಾನದಿಂದ ಮುಕ್ತರಾಗೋಣ ಎನುತಾ ಐದನೆ ಹೆಜ್ಜೆಯನು ಇಡುವೆ...

ಆರು ಋತುಗಳಲಿ ನಲಿವ ಪ್ರಕೃತಿಯು ಸ್ವಾಗತ ನೀಡಲಿ
ಆರು ಋತುಗಳಲಿ ನಲಿವ ಪ್ರಕೃತಿಯು ಸ್ವಾಗತ ನೀಡಲಿ ಎನುವೆ ಆರನೆ ಹೆಜ್ಜೆಯನು ಇಡುವೆ

ಸಪ್ತಋಷಿಗಳಾ ಸ್ಮರಣೆ ಮಾಡುತಾ
ಸಪ್ತಋಷಿಗಳಾ ಸ್ಮರಣೆ ಮಾಡುತಾ ಹರಸಿ ನಮ್ಮನು ಎಂದು ಬೇಡುತಾ ಏಳನೆ ಹೆಜ್ಜೆ ಇಡುವೆ ನಾ ಏಳನೆ ಹೆಜ್ಜೆ ಇಡುವೆ.