twitter
    For Quick Alerts
    ALLOW NOTIFICATIONS  
    For Daily Alerts

    RRR ಪ್ರೀ ರಿಲೀಸ್‌ನಲ್ಲಿ ಬೌನ್ಸರ್‌ಗಳ ಅನಾಗರೀಕ ವರ್ತನೆ: ಅಭಿಮಾನಿಗಳ ಮೇಲೆ ಹಲ್ಲೆ

    |

    ತೆಲುಗಿನ ಬಹು ನಿರೀಕ್ಷಿತ ಸಿನಿಮಾ RRR ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ (ಮಾರ್ಚ್ 19) ಸಂಜೆ ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿಯಾಗಿ ನೆರವೇರಿತು.

    Recommended Video

    Ram Charan | RRR ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಈಗಲೇ ಶುವರುವಾಯ್ತು ಲೆಕ್ಕಾಚಾರ!

    ಹೆಚ್ಚು ಜನ ಕಾರ್ಯಕ್ರಮಕ್ಕೆ ಆಗಮಿಸಲೆಂದೇ ಕಾರ್ಯಕ್ರಮವನ್ನು ಆಂಧ್ರ-ತಮಿಳುನಾಡು ಗಡಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಚಿತ್ರತಂಡ ಆಯೋಜಿಸಿತ್ತು. ಚಿತ್ರತಂಡದ ನಿರೀಕ್ಷೆಯಂತೆಯೇ ಸಾವಿರಾರು ಮಂದಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

    RRR ಶೂಟಿಂಗ್‌ಗೆ ಒಂದು ದಿನಕ್ಕೆ ಆಗುತ್ತಿದ್ದ ಖರ್ಚೆಷ್ಟು?RRR ಶೂಟಿಂಗ್‌ಗೆ ಒಂದು ದಿನಕ್ಕೆ ಆಗುತ್ತಿದ್ದ ಖರ್ಚೆಷ್ಟು?

    ಸಾಗರೋಪಾದಿಯಲ್ಲಿ ಕಾರ್ಯಕ್ರಮಕ್ಕೆ ಜನ ಆಗಮಿಸಿದರು. ಅವರನ್ನು ನಿಯಂತ್ರಿಸಲು ನೂರಾರು ಸಂಖ್ಯೆಯ ಪೊಲೀಸರು ಇದ್ದರು. ಅದರ ಜೊತೆಗೆ ಕಾರ್ಯಕ್ರಮದ ಆಯೋಜಕರು ರಾಕ್ಷಸ ಮಾದರಿಯ ದೇಹದಾರ್ಡ್ಯ ಹೊಂದಿದ್ದ ಬೌನ್ಸರ್‌ಗಳನ್ನು ಸಹ ನೇಮಿಸಿಕೊಂಡಿದ್ದರು. ಜನರನ್ನು ನಿಯಂತ್ರಿಸಬೇಕಾಗಿದ್ದ ಬೌನ್ಸರ್‌ಗಳು ಜನರ ಮೇಲೆ ದೌರ್ಜನ್ಯ ನಡೆಸಿದ ಘಟನೆ ನಿನ್ನೆ ರಾತ್ರಿ RRR ಇವೆಂಟ್‌ನಲ್ಲಿ ನಡೆಯಿತು.

    RRR: ರಾಜಮೌಳಿ ಬಳಿ ವಿಶೇಷ ಬೇಡಿಕೆ ಇಟ್ಟ ಶಿವಣ್ಣ: ಜಕ್ಕಣ್ಣ ಹೇಳಿದ್ದೇನು? RRR: ರಾಜಮೌಳಿ ಬಳಿ ವಿಶೇಷ ಬೇಡಿಕೆ ಇಟ್ಟ ಶಿವಣ್ಣ: ಜಕ್ಕಣ್ಣ ಹೇಳಿದ್ದೇನು?

    ಅಭಿಮಾನಿಗಳಿಗೆ ಮಾಹಿತಿ ಇರಲಿಲ್ಲ

    ಅಭಿಮಾನಿಗಳಿಗೆ ಮಾಹಿತಿ ಇರಲಿಲ್ಲ

    ಭಾರಿ ಸಂಖ್ಯೆಯ ಜನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಜನರಿಗೆ 'ಗೋಲ್ಡ್' 'ಸಿಲ್ವರ್' ಇನ್ನಿತರೆ ಮಾದರಿಯ ಟಿಕೆಟ್ ನೀಡಿ ಆಯಾ ದ್ವಾರದ ಮೂಲಕ ಮಾತ್ರವೇ ಅವರಿಗೆ ಪ್ರವೇಶ ನಿಗದಿಪಡಿಸಲಾಗಿತ್ತು. ಆದರೆ ಯಾವ ಟಿಕೆಟ್ ಹೊಂದಿದವರು ಎಲ್ಲಿಂದ ಪ್ರವೇಶ ಮಾಡಬೇಕು ಎಂಬ ಬಗ್ಗೆ ಅಭಿಮಾನಿಗಳಿಗೆ ಪೂರ್ವ ಮಾಹಿತಿ ಇರಲಿಲ್ಲವಾದ್ದರಿಂದ ಎಲ್ಲಾ ದ್ವಾರಗಳ ಮುಂದೆಯೂ ಟಿಕೆಟ್ ಹೊಂದಿದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.

    ಕೋಲುಗಳನ್ನು ತೆಗೆದುಕೊಂಡು ಹಲ್ಲೆ ಮಾಡಿದ ಬೌನ್ಸರ್‌ಗಳು

    ಕೋಲುಗಳನ್ನು ತೆಗೆದುಕೊಂಡು ಹಲ್ಲೆ ಮಾಡಿದ ಬೌನ್ಸರ್‌ಗಳು

    ಮುಖ್ಯ ವೇದಿಕೆ ಪಕ್ಕದಲ್ಲಿ ಮೀಡಿಯಾದವರ ಪ್ರವೇಶಕ್ಕೆಂದು ವಿಶೇಷ ದ್ವಾರವೊಂದನ್ನು ಮಾಡಲಾಗಿತ್ತು. ವೇದಿಕೆಯ ಇನ್ನೊಂದು ಪಕ್ಕದಲ್ಲಿ ವಿವಿಐಪಿಗಳ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಧ್ಯಮದವರ ಪ್ರವೇಶಕ್ಕೆ ಮಾಡಲಾಗಿದ್ದ ದ್ವಾರದ ಬಳಿ ಒಮ್ಮೆಲೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಆಗ ಸುಮಾರು ಆರೇಳು ಮಂದಿ ಬೌನ್ಸರ್‌ಗಳು ಒಮ್ಮೆಲೇ ಕೋಲುಗಳನ್ನು ತೆಗೆದುಕೊಂಡು ಅಭಿಮಾನಿಗಳ ಮೇಲೆ ಹಲ್ಲೆ ಆರಂಭಿಸಿದರು. ಇದರಿಂದ ನೂಕಾಟ-ತಳ್ಳಾಟ ಆರಂಭವಾಗಿ ಮಹಿಳೆಯರು ಸೇರಿದಂತೆ ಹಲವರು ಕೆಳಗೆ ಬಿದ್ದರು. ಆದರೂ ಬಿಡದೆ ಬೌನ್ಸರ್‌ಗಳು ಪ್ರಹಾರ ಮುಂದುವರೆಸಿದರು.

    ಪೊಲೀಸರು ಪ್ರಶ್ನೆ ಮಾಡಲಿಲ್ಲ

    ಪೊಲೀಸರು ಪ್ರಶ್ನೆ ಮಾಡಲಿಲ್ಲ

    ಅಲ್ಲಿಯೇ ಇದ್ದ ಪೊಲೀಸರು ಸುಮ್ಮನೇ ಇದ್ದರು, ಬೌನ್ಸರ್‌ಗಳು ಜನರನ್ನು ಹೊಡೆಯುತ್ತಿದ್ದರೂ ಅವರು ಪ್ರಶ್ನೆ ಮಾಡಲಿಲ್ಲ. 'ಏಕೆ ಹೊಡೆಯುತ್ತೀರಿ ನೀವೇನು ಪೊಲೀಸರೇ' ಎಂದು ಕೆಲವರು ಪ್ರಶ್ನೆ ಮಾಡಿದ್ದಕ್ಕೆ ಅವರ ಆರ್ಭಟ ಇನ್ನೂ ಹೆಚ್ಚಾಗಿ ಅಭಿಮಾನಿಗಳನ್ನು ಅವಾಚ್ಯ ಶಬ್ದಗಳಿಂದ ಬೈಯ್ಯಲು ಆರಂಭಿಸಿದರು. ಹಿಂದೆ ತಳ್ಳಲು ಆರಂಭಿಸಿದರು. ಕೊನೆಗೇ ಅದರಲ್ಲೇ ಒಬ್ಬ ವ್ಯಕ್ತಿ. ಮಹಿಳೆಯರು ಕೆಳಗೆ ಬಿದ್ದು ಹೈರಾಣಾಗಿ ತೊಂದರೆಗೊಳಗಾಗುತ್ತಿರುವುದನ್ನು ಗಮನಿಸಿ ಅವರನ್ನು ಒಳಗೆ ಬಿಟ್ಟ, ಅದರ ಬೆನ್ನಲ್ಲೆ ಹಲವರು ಅದೇ ದ್ವಾರದಿಂದ ಒಳಗೆ ಬಂದರು. ವ್ಯವಸ್ಥಿತವಾಗಿ ಬ್ಯಾರಿಕೇಡ್‌ಗಳನ್ನು ಅಥವಾ ಗೇಟ್‌ಗಳನ್ನು ಹಾಕಿ ತಡೆಯುವ ಬದಲಿಗೆ ಹಲ್ಲೆ ಮಾಡಿ ಅಭಿಮಾನಿಗಳನ್ನು ತಡೆದ ಬೌನ್ಸರ್‌ಗಳ ರೀತಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯ್ತು.

    ಬೌನ್ಸರ್‌ಗಳ ವಿರುದ್ಧ ಗರಂ ಆದ ರಾಜಮೌಳಿ

    ಬೌನ್ಸರ್‌ಗಳ ವಿರುದ್ಧ ಗರಂ ಆದ ರಾಜಮೌಳಿ

    ಬೌನ್ಸರ್‌ಗಳ ಆರ್ಭಟ ಅಷ್ಟಕ್ಕೆ ನಿಲ್ಲಲಿಲ್ಲ. ವೇದಿಕೆ ಕಾರ್ಯಕ್ರಮ ಪ್ರಾರಂಭವಾದ ಮೇಲೆ ವಿವಿಐಪಿಗಳಿಗೆ ಭದ್ರತೆ ಕೊಡುವ ನೆಪದಲ್ಲಿ ಎಲ್ಲರೂ ವೇದಿಕೆ ಏರಿಬಿಟ್ಟರು. ಜೂ ಎನ್‌ಟಿಆರ್, ರಾಮ್ ಚರಣ್ ವೇದಿಕೆ ಏರಿದಾಗಲಂತೂ ದೊಡ್ಡ ಸಂಖ್ಯೆಯ ಬೌನ್ಸರ್‌ಗಳು ವೇದಿಕೆ ಏರಿದ್ದರು. ವೇದಿಕೆಯಲ್ಲಿ ಇದರಿಂದಾಗಿ ಕೆಲ ಕಾಲ ನೂಕಾಟ ತಳ್ಳಾಟಗಳು ನಡೆದವು. ಶಿವರಾಜ್ ಕುಮಾರ್ ಮಾತನಾಡಬೇಕಾದರೆ ವೇದಿಕೆ ಮೇಲೆ ಜನ ಇನ್ನಷ್ಟು ಹೆಚ್ಚಾದರು. ಇದನ್ನು ಕಂಡು ಕೋಪೋಧ್ರಿಕ್ತರಾದ ನಿರ್ದೇಶಕ ರಾಜಮೌಳಿ ಮೈಕ್ ಪಡೆದುಕೊಂಡು, ಕಪ್ಪು ಬಣ್ಣದ ದೈತ್ಯರೆಲ್ಲ ಕೆಳಗಿಳಿಯಿರಿ. ನಿಮ್ಮ ಅವಶ್ಯಕತೆ ಇಲ್ಲಿ ಇಲ್ಲ. ಇಲ್ಲಿ ಪೊಲೀಸಿನವರಿದ್ದಾರೆ, ಅವರನ್ನು ಹೊರತುಪಡಿಸಿ ಇನ್ಯಾರೂ ವೇದಿಕೆ ಮೇಲೆ ಹಾಗೂ ಮುಂದೆ ಇರಬಾರದು ಮೊದಲು ಬೌನ್ಸರ್‌ಗಳು ಕೆಳಗೆ ಇಳಿಯಿರಿ ಎಂದು ಜೋರಾಗಿ ಹೇಳಿದರು. ಕೂಡಲೇ ಬೌನ್ಸರ್‌ಗಳು ಕೆಳಗೆ ಇಳಿದರು. ರಾಜಮೌಳಿಯವರು, ಬೌನ್ಸರ್‌ಗಳಿಗೆ ಬೈದ ಕೂಡಲೇ ಜನರು ಖುಷಿಯಿಂದ ಕೂಗು ಹಾಕಿದ್ದು, ಬೌನ್ಸರ್‌ಗಳು ಜನರೊಟ್ಟಿಗೆ ಹೇಗೆ ವರ್ತಿಸಿದ್ದಾರೆಂಬುದಕ್ಕೆ ಸಾಕ್ಷಿಯಾಗಿತ್ತು.

    English summary
    RRR movie pre release event organized in Chikkaballapura on March 19. Bouncers behave inhumenly with fans near media gate.
    Sunday, March 20, 2022, 13:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X