For Quick Alerts
  ALLOW NOTIFICATIONS  
  For Daily Alerts

  ಯಾರ ತಲೆ ತೆಗಿಯೋಕು ಆಗಲ್ಲ; ಉಮಾಪತಿ ತಿರುಗೇಟು

  By ಫಿಲ್ಮಿ ಬೀಟ್ ಡೆಸ್ಕ್
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಹೆಸರಿನಲ್ಲಿ 25 ಕೋಟಿ ವಂಚನೆ ಯತ್ನ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ದರ್ಶನ್ ಸ್ನೇಹಿತ ಹರ್ಷ ವಿಲಾಂಟ ಹೆಸರಿನಲ್ಲಿ ಬ್ಯಾಂಕ್ ಲೋನ್ ಪಡೆಯುವ ವಿಚಾರವಾಗಿ ನಟ ದರ್ಶನ್ ಮತ್ತು ಉಮಾಪತಿ ಶೂರಿಟಿ ವಿಚಾರವಾಗಿ ಆರೋಪಿ ಅರುಣಾ ಕುಮಾರಿ ಫೋನ್ ಕಾಲ್ ನಿಂದ ಪ್ರಾರಂಭವಾದ ಗೊಂದಲ ಈಗ ದೊಡ್ಡ ವಿವಾದ ಸೃಷ್ಟಿಸಿದೆ.

  ಈ ಬಗ್ಗೆ ದರ್ಶನ್ ಮತ್ತು ಸ್ನೇಹಿತರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಕೂಡ ಪತ್ರಿಕಾಗೋಷ್ಠಿ ನಡೆಸಿ ದರ್ಶನ್ ಸ್ನೇಹಿತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಇಂದು ಮತ್ತೆ ಪತ್ರಿಕಾಗೋಷ್ಠಿ ನಡೆದ ಉಮಾಪತಿ, "ಯಾರ ತಲೆ ತೆಗಿಯೋಕು ಆಗಲ್ಲ, ನಾನು ಏನಂದು ಸಾಬೀತು ಪಡಿಸೋಕೆ ಮಾತ್ರ ಹೊರಟಿದ್ದೇನೆ. ತಲೆ ತಗಿತಾರೆ ಎನ್ನುವ ಭಯದಲ್ಲಿ ನಾನು ಬಂದಿಲ್ಲ" ಎಂದು ದರ್ಶನ್ ಮಾತಿಗೆ ಟಕ್ಕರ್ ಕೊಟ್ಟಿದ್ದಾರೆ.

  '3 ಪಾಯಿಂಟ್ ಹೇಳಿದ್ರೆ ಮಂಡ್ಯಗಿಂತ ವೈಬ್ರೆಷನ್ ಜಾಸ್ತಿ ಆಗುತ್ತೆ''3 ಪಾಯಿಂಟ್ ಹೇಳಿದ್ರೆ ಮಂಡ್ಯಗಿಂತ ವೈಬ್ರೆಷನ್ ಜಾಸ್ತಿ ಆಗುತ್ತೆ'

  ನಿನ್ನೆ (ಜುಲೈ 12) ಪತ್ರಿಕಾಗೋಷ್ಠಿಯಲ್ಲಿ ನಟ ದರ್ಶನ್ ಮಾತನಾಡಿ, ಈ ವಿಚಾರದಲ್ಲಿ ಯಾರು ಆಟ ಆಡುತ್ತಿದ್ದಾರೆ ಎನ್ನುವುದು ಗೊತ್ತಾದರೆ ಅವರ ತಲೆ ತೆಗೆಯೋದು ಪಕ್ಕಾ ಎಂದು ಹೇಳಿದ್ದರು. ದರ್ಶನ್ ಮಾತಿಗೆ ಪ್ರತಿಯಾಗಿ ನಿರ್ಮಾಪಕ ಉಮಾಪತಿ ಮಾತನಾಡಿ, ಯಾರ ತಲೆ ತೆಗಿಯೋಕು ಆಗಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

  ಮುಂದಿನ ಜೀವನ ನೆನೆಸಿಕೊಂಡ್ರೆ ಭಯ ಆಗ್ತಿದೆ! | Darshan | Aruna Kumari | Umapathy | Filmibeat Kannada

  "ಇಲ್ಲಿ ನನ್ನ ಮರ್ಯಾದೆ ಕಳೆಯುವ ಪ್ರಯತ್ನ ನಡೆಯುತ್ತಿದೆ ಅಷ್ಟೆ. ದರ್ಶನ್ ಮುಗ್ದತೆ ಉಪಯೋಗಿಸಿಕೊಂಡು ಹೀಗೆಲ್ಲ ಮಾಡುತ್ತಿದ್ದಾರೆ" ಎಂದು ಉಮಾಪತಿ ಆರೋಪ ಮಾಡಿದ್ದಾರೆ.

  "ಅರುಣಾ ಕುಮಾರಿ ಹೇಳಿದ ಮಾತ್ರಕ್ಕೆ ಎಲ್ಲವೂ ನಿಜವಾಗುವುದಿಲ್ಲ. ಆಕೆಗೆ ಯಾರೋ ಹೇಳಿಕೊಡುತ್ತಿದ್ದಾರೆ. ಪೊಲೀಸರ ಶೈಲಿಯಲ್ಲಿ ವಿಚಾರಣೆ ನಡೆದರೆ ಸತ್ಯ ಗೊತ್ತಾಗುತ್ತೆ. ಇಲ್ಲಿ ಫೇಕ್ ದಾಖಲೆ ಸೃಷ್ಟಿ ಮಾಡಿ ಆಟ ಆಡುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.

  "ವಿಚಾರಣೆ ನಡೆಯಲಿ ತನಿಖೆ ಬಳಿಕ ಎಲ್ಲಾ ಸತ್ಯ ಗೊತ್ತಾಗುತ್ತೆ ಬಳಿಕ ನಾನು ಮಾತನಾಡುತ್ತೇನೆ" ಎಂದು ಉಮಾಪತಿ ಪ್ರತಿಕ್ರಿಯೆ ಹೇಳಿದ್ದಾರೆ.

  English summary
  Rs 25 Crore Fraud Case: Umapathy Srinivasa Gowda reaction to Darshan Statement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X