For Quick Alerts
  ALLOW NOTIFICATIONS  
  For Daily Alerts

  ಸುವರ್ಣ ಸೂಪರ್ ಜೋಡಿಗೆ ರು.5 ಲಕ್ಷ ಚೆಕ್

  By Rajendra
  |

  ಕರ್ನಾಟಕದ ಹೆಮ್ಮೆಯ ನಂ.1 ಸ್ಥಾನದ ಸುವರ್ಣ ವಾಹಿನಿಯು ಕಳೆದ ಭಾನುವಾರ (ಆ.4) ಸಂಜೆ 5 ಗಂಟೆಗೆ ಸುವರ್ಣ ಸೂಪರ್ ಜೋಡಿಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಪ್ರಸಾರ ಮಾಡಿತು.

  ಕರ್ನಾಟಕದ ಮನೆ ಮಂದಿಗೆಲ್ಲಾ ಅಚ್ಚು ಮೆಚ್ಚಾದ 'ಸುವರ್ಣ ಸೂಪರ್ ಜೋಡಿ'ಯ ಗ್ರ್ಯಾಂಡ್ ಫಿನಾಲೆಯಲ್ಲಿ ಯಾರು ಸೂಪರ್ ಜೋಡಿಯ ಪಟ್ಟ ಮುಡಿಗೇರಿಸಿಕೊಳ್ಳುತ್ತಾರೆ ಎನ್ನೋ ಕುತೂಹಲಕ್ಕೆ ಉತ್ತರ ದೊರೆತದ್ದು ಕಳೆದ ಭಾನುವಾರ (ದಿನಾಂಕ 04.08.2013) ಸಂಜೆ 5 ಗಂಟೆಗೆ.

  ಕಾರ್ಯಕ್ರಮದ ಸಾರಥಿ, ತೀರ್ಪುಗಾರ ಸಿಹಿಕಹಿ ಚಂದ್ರು ನೀಡಿದ ತೀರ್ಪಿನಲ್ಲಿ ಸೂಪರ್ ಜೋಡಿ ಮುಕುಟ ಪಡೆದದ್ದು 'ಪಂಚರಂಗಿ ಪೋಂ ಪೋಂ' ಧಾರಾವಾಹಿಯ ರೇಣುಕಾ ಮೈಲಾರಿ ಜೋಡಿ. ಕರ್ನಾಟಕದ ಸೂಪರ್ ಜೋಡಿಗೆ ಬರೋಬ್ಬರಿ ಸಂದ ಪ್ರಶಸ್ತಿ ಮೊತ್ತ ರು.5 ಲಕ್ಷ. ಇನ್ನುಳಿದ ಎಲ್ಲಾ ಸ್ಪರ್ಧಿಗಳನ್ನು ರನ್ನರ್ ಅಪ್ ಎಂದು ಘೋಷಿಸಿ ಪ್ರತಿ ತಂಡಕ್ಕೆ ರು.1ಲಕ್ಷ ನಗದು ಬಹುಮಾನವನ್ನು ನೀಡಲಾಯಿತು.

  ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ, ಅಜಯ್ ರಾವ್, ಶರಣ್, ಐಂದ್ರಿತಾ ರೇ, ಶ್ವೇತಾ ಶ್ರೀವತ್ಸ ಇವರೆಲ್ಲಾ ಸೆಲೆಬ್ರಿಟಿಗಳು ಗ್ರ್ಯಾಂಡ್ ಫಿನಾಲೆಗೆ ಆಗಮಿಸಿದ್ದರು. ಅಲ್ಲದೇ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ತಾರಾಗಣ, ತಾಂತ್ರಿಕ ವರ್ಗದವರು ಪಾಲ್ಗೊಂಡಿದ್ದರು.

  ಅಜಯ್ ರಾವ್ ಹೊಸ ಚಿತ್ರ 'ಜೈ ಭಜರಂಗಬಲಿ'ಯ ಹಾಡಿಗೆ ಡ್ಯುಯಟ್ ಹಾಡಿದ್ದು, ಅಮೃತವರ್ಷಿಣಿ ಧಾರಾವಾಹಿಗಳ ಅಮೃತಳೊಂದಿಗೆ ಚಂದಿರ ತಂದ ಹುಣ್ಣಿಮೆ ರಾತ್ರಿ ಹಾಡಿಗೆ ಹೆಜ್ಜೆ ಹಾಕಿದ್ದು, ಐಂದ್ರಿತಾ ರೇ ಹಾಗೂ ಶ್ರೀನಗರ ಕಿಟ್ಟಿ ಅವರ ನೃತ್ಯ ನೆರೆದ ಪ್ರೇಕ್ಷಕರನ್ನು ರಂಜಿಸಿದವು. ವಿಶೇಷವಾಗಿ ನಮ್ಮ ಸೂಪರ್ ಜೋಡಿಯ ಸೂಪರ್ ಸ್ಪರ್ಧಿಗಳ ಡಾನ್ಸ್ ಸುಂದರವಾಗಿದ್ದು ನೆರೆದವರನ್ನು ನಾಚಿಸುವಂತಿತ್ತು. (ಒನ್ಇಂಡಿಯಾ ಕನ್ನಡ)

  English summary
  Suvarna Super Jodi grand finale held on 4th August 2013 at 5 pm on Suvarna channel. 'Pancharangi Pom Pom' Renuka Mylari pair won the title and gets Rs.5 lakh cash prize. This reality show invites like-minded couples, who go through the toughest challenges to test their strengths, weaknesses, and emotional bond.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X