»   » ಕಂಡು ಕೇಳರಿಯದ ಬಜೆಟ್ ನಲ್ಲಿ ಎಚ್ಡಿಕೆ ಪುತ್ರನ ಚಿತ್ರ

ಕಂಡು ಕೇಳರಿಯದ ಬಜೆಟ್ ನಲ್ಲಿ ಎಚ್ಡಿಕೆ ಪುತ್ರನ ಚಿತ್ರ

By: ಉದಯರವಿ
Subscribe to Filmibeat Kannada

ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಸ್ಯಾಂಡಲ್ ವುಡ್ ಚಿತ್ರಗಳ ನಿರ್ಮಾಪಕ ಎಚ್ ಡಿ ಕುಮಾರಸ್ವಾಮಿ ಅವರು ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಈ ಬಾರಿ ಅವರು ದೊಡ್ಡಮಟ್ಟದಲ್ಲಿ ಕೈಹಾಕಿರುವುದು ವಿಶೇಷ. ತಮ್ಮ ಸುಪುತ್ರ ನಿಖಿಲ್ ಗೌಡ ಅವರನ್ನು ಬೆಳ್ಳಿಪರದೆಗೆ ಪರಿಚಯಿಸುವ ಸಾಹಸಕ್ಕೆ ಅವರು ಮುಂದಾಗಿದ್ದಾರೆ.

ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ತೆಲುಗಿನ ಯಶಸ್ವಿ ಚಿತ್ರಗಳ ಸರದಾರ ಪುರಿ ಜಗನ್ನಾಥ್ ಅವರ ಹೆಗಲಿಗೆ ಹೊರಿಸಿದ್ದಾರೆ. ಪುನೀತ್ ರಾಜ್ ಕುಮಾರ್ (ಅಪ್ಪು) ಹಾಗೂ ಚಿರಂಜೀವಿ ಪುತ್ರ ರಾಮ್ ಚರಣ್ ಅವರ ಚೊಚ್ಚಲ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಪುರಿ ಅವರದು. [ಪುರಿ ಜಗನ್ನಾಥ್ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್]

Rs 60-crore budget for HD Kumaraswamy's son Nikhil movie

ಸ್ಯಾಂಡಲ್ ವುಡ್ ನಲ್ಲೇ ಅತ್ಯಧಿಕ ಬಜೆಟ್ ಚಿತ್ರ ಇದು ಎನ್ನಲಾಗಿದೆ. ಮೂಲಗಳ ಪ್ರಕಾರ ರು.60 ಕೋಟಿ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಸದ್ಯಕ್ಕೆ ಪುರಿ ಜಗನ್ನಾಥ್ ಅವರು ಕಥೆ ಹೆಣೆಯುವಲ್ಲಿ ಬಿಜಿಯಾಗಿದ್ದು, ಆಗಸ್ಟ್ ವೇಳೆಗೆ ಚಿತ್ರ ಸೆಟ್ಟೇರಲಿದೆ ಎಂದಿದ್ದಾರೆ.

ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ತೆಲುಗಿನಲ್ಲೂ ಈ ಚಿತ್ರ ತೆರೆಕಾಣಲಿದೆ. ಸದ್ಯಕ್ಕೆ ನಿಖಿಲ್ ಗೌಡ ಅವರು ತಮ್ಮ ಚಿತ್ರಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ನಿತ್ಯ ನಟನೆ, ಡಾನ್ಸ್ ಪ್ರಾಕ್ಟೀಸ್ ನಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

Rs 60-crore budget for HD Kumaraswamy's son Nikhil movie

ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕರಾದ ಎಸ್ ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ, ಬೋಯಪಾಟಿ ಸೀನು, ಶ್ರೀನು ವೈಟ್ಲ ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ ಅಂತಿಮವಾಗಿ ಪುರಿ ಜಗನ್ನಾಥ್ ಅವರ ಕೈಗೆ ಈ ಮೆಗಾ ಬಜೆಟ್ ಸಿನಿಮಾವನ್ನು ಹಸ್ತಾಂತರಿಸಿದ್ದಾರೆ ಎಚ್ಡಿಕೆ.

ಸಾಮಾನ್ಯವಾಗಿ ಕನ್ನಡದಲ್ಲಿ ರು.5 ಕೋಟಿ ಎಂದರೇನೇ ಬಿಗ್ ಬಜೆಟ್ ಚಿತ್ರ ಎನ್ನುತ್ತಾರೆ. ಇನ್ನು ದೊಡ್ಡ ತಾರೆಗಳಾದರೆ ಅಬ್ಬಬ್ಬಾ ಎಂದರೆ ರು.10 ಕೋಟಿ ಬಜೆಟ್. ಎರಡು ವರ್ಷಗಳ ಹಿಂದೆ ನಿರ್ಮಾಣವಾದ ದರ್ಶನ್ ಅವರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ರು.20 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿತ್ತು.

Rs 60-crore budget for HD Kumaraswamy's son Nikhil movie

ಈ ಚಿತ್ರಕ್ಕಾಗಿ ನಿಖಿಲ್ ಅವರು ವಿಯಟ್ನಾಂನಲ್ಲಿ ಡಾನ್ಸ್, ಕಿಕ್ ಬಾಕ್ಸಿಂಗ್ ತರಬೇತಿಯನ್ನೂ ಪಡೆಯಲಿದ್ದಾರಂತೆ. ಚಿತ್ರ ಆರಂಭಕ್ಕೂ ಮುನ್ನವೇ ತಮ್ಮ ಪುತ್ರನಿಗಾಗಿ ಎಚ್ಡಿಕೆ ರು.1 ಕೋಟಿ ಖರ್ಚು ಮಾಡಿದ್ದಾರೆ. ಹೀರೋಯಿನ್ ಹುಡುಕಾಟವೂ ನಡೆದಿದೆ. ಇನ್ನೇನಿದ್ದರೂ ತಮ್ಮ ಪುತ್ರನನ್ನು ಬೆಳ್ಳಿತೆರೆಗೆ ಪರಿಚಯಿಸುವುದೊಂದೇ ಬಾಕಿ ಉಳಿದಿದೆ.

English summary
HD Kumaraswamy is all set to launch his son Nikhil Gowda grandly. The sources says, Nikhil Gowda will make his film debut in a Rs 60-crore extravaganza.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada