For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಸೂಸೈಡ್ ಸುದ್ದಿಯ ಹಿಂದೆ ಯಾರ್ಯಾರ ಷಡ್ಯಂತ್ರ?

  By Harshitha
  |

  ''ಏನು...ನವರಸ ನಾಯಕ ಜಗ್ಗೇಶ್ ಆತ್ಮಹತ್ಯೆ ಮಾಡಿಕೊಂಡ್ರಾ?''....ಹೀಗಂತ ನಿನ್ನೆ ಗಾಂಧಿನಗರದ ಹಲವರು ಗಾಬರಿಯಿಂದ ಕೇಳಿದ್ರೆ, ಇನ್ನೂ ಕೆಲವರು 'ಏನಾಯ್ತು? ಏನಾಗುತ್ತಿದೆ? ಏನು ಮಾಡಬೇಕು' ಅನ್ನೋದೇ ಗೊತ್ತಾಗದಂತೆ ಚಡಪಡಿಸುತ್ತಿದ್ದರು.

  ಇನ್ನೂ ಕೆಲವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಜಗ್ಗೇಶ್ ರವರ ಫೋನ್ ನಂಬರ್ ಗೆ ಸೀದಾ ಡಯಲ್ ಮಾಡಿದರು. ಆ ಕಡೆಯಿಂದ ಜಗ್ಗೇಶ್ ಫೋನ್ ರಿಸೀವ್ ಮಾಡಿದ್ಮೇಲೆ 'ಇದು ಶುದ್ಧ ಗಾಸಿಪ್' ಅಂತ ಕನ್ಫರ್ಮ್ ಆಗಿದ್ದು.!

  ಮೊನ್ನೆಮೊನ್ನೆಯಷ್ಟೇ ನಟ ಜಗ್ಗೇಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಶುಭ ಸಂದರ್ಭದಲ್ಲಿ ತಮ್ಮ ಜೀವನದ ಕೆಲ ಕಹಿ ಘಟನೆಗಳನ್ನ ವಾಹಿನಿಯೊಂದರಲ್ಲಿ ಜಗ್ಗೇಶ್ ಹಂಚಿಕೊಂಡಿದ್ದರು. [ಜಗ್ಗೇಶ್'ರ ನಡೆ ಅವರ ಬಂಧುಗಳಿಗೆ ಹೇಸಿಗೆ ಉಂಟುಮಾಡಿತ್ತಂತೆ]

  ಅದನ್ನೇ ನೆಪವಾಗಿ ಬಳಸಿಕೊಂಡ ಕೆಲ ಕಿಡಿಗೇಡಿಗಳು ''ಜಗ್ಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ'' ಅಂತ ವದಂತಿ ಹಬ್ಬಿಸಿದರು. ಮುಂದೆ ಓದಿ.....

  ಜಗ್ಗೇಶ್...? ಆತ್ಮಹತ್ಯೆ..?

  ಜಗ್ಗೇಶ್...? ಆತ್ಮಹತ್ಯೆ..?

  ನಟ ಜಗ್ಗೇಶ್ ಆತ್ಮಹತ್ಯೆ ಗೆ ಯತ್ನಿಸಿದ್ದು ನಿಜ. ಆದ್ರೆ, ನಿನ್ನೆ ಅಲ್ಲ. ವರ್ಷಗಳ ಹಿಂದೆ...! 1993 ರಲ್ಲಿ ಆಗಿದ್ದ ಘಟನೆ ಬಗ್ಗೆ ನಿನ್ನೆ ಹೊಸದಾಗಿ ಗಾಸಿಪ್ ಹರಿದಾಡಿದೆ. ಅಷ್ಟಕ್ಕೂ ಜಗ್ಗೇಶ್ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಅಂತ ಹೇಳ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

  ಜಗ್ಗೇಶ್ ಬದುಕ್ಕಲ್ಲಿ ನಡೆದ ಕಹಿ ಘಟನೆ

  ಜಗ್ಗೇಶ್ ಬದುಕ್ಕಲ್ಲಿ ನಡೆದ ಕಹಿ ಘಟನೆ

  ಟ್ರಾವೆಲ್ ಏಜೆನ್ಸಿ ಸಮಸ್ಯೆಯಿಂದ ಹೊರ ಬರುವುದಕ್ಕೆ ಆತ್ನಹತ್ಯೆ ಒಂದೇ ದಾರಿ ಎಂದುಕೊಂಡು ಮನೆಯಲ್ಲೇ ವಿಷ ಕುಡಿದಿದ್ದರಂತೆ ನಟ ಜಗ್ಗೇಶ್. [ತಮ್ಮ 'ರಿಯಲ್ ಲವ್ ಸ್ಟೋರಿ' ಬಯಲು ಮಾಡಿದ ನಟ ಜಗ್ಗೇಶ್!]

  ಅಂದು ಬದುಕಿಸಿದ್ದು ಡಾ.ರಾಜ್!

  ಅಂದು ಬದುಕಿಸಿದ್ದು ಡಾ.ರಾಜ್!

  ಹಾಗೆ ವಿಷ ಕುಡಿದು ಪ್ರಜ್ಞೆ ತಪ್ಪಿ ಬಿದಿದ್ದ ನಟ ಜಗ್ಗೇಶ್ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದರು. ಡಾ.ರಾಜ್ ಕುಮಾರ್ ಅವರು ಜಗ್ಗೇಶ್ ತಲೆ ಪಕ್ಕದಲ್ಲೇ ಕೂತು 'ಈ ಹುಡುಗ ಬದುಕಬೇಕು' ಅಂತ ಅಲ್ಲಿನ ವೈದ್ಯರಿಗೆ ಹೇಳಿ ಹೋಗಿದ್ದರಂತೆ.

  ಘಟನೆ ಬಗ್ಗೆ ಜಗ್ಗೇಶ್ ಟ್ವೀಟ್.!

  1993ರಲ್ಲಿ ನಡೆದಿದ್ದ ಆತ್ಮಹತ್ಯೆ ಘಟನೆ ಬಗ್ಗೆ ಕನ್ನಡಪ್ರಭ ನೀಡಿದ್ದ ವರದಿ ಹಾಗೂ ನಿನ್ನೆ ಹಬ್ಬಿದ್ದ ಗಾಸಿಪ್ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  ಗಾಸಿಪ್ ಬಗ್ಗೆ ಜಗ್ಗೇಶ್ ಸಿಡಿಮಿಡಿ

  1993 ರಲ್ಲಿ ಆದ ಆತ್ಮಹತ್ಯೆ ಘಟನೆಯನ್ನ ಇಟ್ಕೊಂಡು ಇದೀಗ ಗಾಸಿಪ್ ಹಬ್ಬಿಸಿರುವವರ ಮೇಲೆ ಸಿಡಿಮಿಡಿಗೊಂಡು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  ತಪ್ಪು ನಿರ್ಧಾರ ಮಾಡಲ್ಲ!

  ''ಇನ್ನೊಬ್ಬರಿಗೆ ಸಾಂತ್ವನ ಹೇಳುತ್ತೇನೆ, ತಪ್ಪು ನಿರ್ಧಾರ ಮಾಡುವ ಸ್ಥಿತಿ ನಿರ್ಮಾಣ ಮಾಡಲ್ಲ'' ಅಂತಲೂ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  ಷಡ್ಯಂತ್ರದ ಹಿಂದಿನ ಕಾರಣ?

  ಸುಖಾಸುಮ್ಮನೆ ಗಾಸಿಪ್ ಹಬ್ಬಿರುವುದಕ್ಕೆ ನಟ ಜಗ್ಗೇಶ್ ಬೇಸರಗೊಂಡಿದ್ದಾರೆ ಎನ್ನುವುದಕ್ಕೆ ಈ ಟ್ವೀಟ್ ಸಾಕ್ಷಿ.

  ಆಯಸ್ಸು ಹೆಚ್ಚಾಗೋದು ಇಂತಹ ಸುದ್ದಿಯಿಂದ ಅಲ್ಲ!

  'ಸುಳ್ಳು ಸುದ್ದಿಯಿಂದ ನನ್ನ ಆಯಸ್ಸು ಹೆಚ್ಚಾಗೋಲ್ಲ. ಕನ್ನಡಿಗರ ಪ್ರೀತಿಯಿಂದ ಹೆಚ್ಚಾಗುತ್ತದೆ' ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  English summary
  Kannada Actor Jaggesh has taken his twitter account to clarify the rumors on his suicide incident. Check out the tweets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X