For Quick Alerts
  ALLOW NOTIFICATIONS  
  For Daily Alerts

  'ಐ ಲವ್ ಯೂ' ಹಾದಿ ಸುಗಮ : ಮುಂದಕ್ಕೆ ಹೋದ 'ರುಸ್ತುಂ'

  |
  I Love You Kannada Movie: ರುಸ್ತುಂ ಬಿಡುಗಡೆಗೆ ಗ್ರಾಫಿಕ್ಸ್ ಅಡ್ಡಿ | FILMIBEAT KANNADA

  ಜೂನ್ ತಿಂಗಳಿನಲ್ಲಿ ಎರಡು ಬಿಗ್ ಸ್ಟಾರ್ ಗಳ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಉಪೇಂದ್ರ ನಟನೆಯ 'ಐ ಲವ್ ಯೂ' ಹಾಗೂ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಇದೇ ತಿಂಗಳು ತೆರೆಗೆ ಬರುತ್ತಿವೆ.

  'ಐ ಲವ್ ಯೂ' ಚಿತ್ರ ಜೂನ್ 14 ರಂದು ಬಿಡುಗಡೆಯಾಗಲಿದ್ದು, ಅದೇ ದಿನ 'ರುಸ್ತಂ' ಚಿತ್ರ ಕೂಡ ರಿಲೀಸ್ ಆಗುತ್ತದೆ ಎನ್ನುವ ಸುದ್ದಿ ಇತ್ತು. ಆದರೆ, ಈಗ ಚಿತ್ರದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

  'ರುಸ್ತುಂ' ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ

  'ರುಸ್ತಂ' ಸಿನಿಮಾ ಜೂನ್ 14ರ ಬದಲಿಗೆ ಜೂನ್ 28 ರಂದು ರಿಲೀಸ್ ಆಗಲಿದೆ. ಸಿನಿಮಾದ ಗ್ರಾಫಿಕ್ಸ್ ಕೆಲಸಗಳು ಬಾಕಿ ಇದ್ದು, ಸೆನ್ಸಾರ್ ಕೂಡ ಆಗಿಲ್ಲ. ಹೀಗಾಗಿ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

  'ರುಸ್ತಂ' ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದ್ದು, 'ಐ ಲವ್ ಯೂ' ಚಿತ್ರದ ಹಾದಿ ಸುಗಮವಾಗಿದೆ. ಯಾವುದೇ ದೊಡ್ಡ ಪೈಪೋಟಿ ಇಲ್ಲದೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

  ವಿಡಿಯೋ : ಪೊಲೀಸ್ ಬೇಬಿ ಬಳಿಕ 'ರುಸ್ತುಂ' ಎರಡನೇ ಹಾಡು ರಿಲೀಸ್

  ಅಂದಹಾಗೆ, 'ರುಸ್ತುಂ' ನಲ್ಲಿ ಶಿವರಾಜ್ ಕುಮಾರ್, ವಿವೇಕ್ ಒಬೆರಾಯ್, ಶ್ರದ್ಧಾ ಶ್ರೀನಾಥ್, ಮಯೂರಿ, ರಚಿತಾ ರಾಮ್ ನಟಿಸಿದ್ದಾರೆ. ರವಿವರ್ಮ ನಿರ್ದೇಶನ ಮತ್ತು ಜಯಣ್ಣ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದೆ.

  English summary
  Actor Shiva Rajkumar and Shraddha Srinath's 'Rustum' kannada movie will be releasing on june 28th. The movie is directed by Ravi Varma producing by Jayanna combines.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X