twitter
    For Quick Alerts
    ALLOW NOTIFICATIONS  
    For Daily Alerts

    ವಿವಾದಕ್ಕೆ ಕಾರಣವಾಯ್ತು ನೂತನ ಫಿಲ್ಮ್ ಚೇಂಬರ್ ಅಧ್ಯಕ್ಷರ ನಿಲುವು.!

    By Bharath Kumar
    |

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಎಸ್.ಎ ಚಿನ್ನೇಗೌಡ ವಿವಾದಕ್ಕೆ ಸಿಲುಕಿದ್ದಾರೆ.

    ''ನಾನು ಡಬ್ಬಿಂಗ್ ವಿರೋಧಿ, ಹೀಗಾಗಿ ಪ್ರೇಕ್ಷಕರು ಸಿನಿಮಾಗಳನ್ನು ಅವರವರ ಮೂಲ ಭಾಷೆಗಳಲ್ಲಿಯೇ ನೋಡಬೇಕು'' ಎಂಬ ಹೇಳಿಕೆ ನೀಡಿದ್ದ ಚಿನ್ನೇಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಯುತ್ತಿದೆ. ಡಬ್ಬಿಂಗ್ ಪರ ಇರುವ ಜನ ಚಿನ್ನೇಗೌಡರ ಈ ಹೇಳಿಕೆಯನ್ನ ಖಂಡಿಸಿದ್ದಾರೆ.

    ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷರಾದ ಪಾರ್ವತಮ್ಮ ಸಹೋದರ ಚಿನ್ನೇಗೌಡಫಿಲ್ಮ್ ಚೇಂಬರ್ ನೂತನ ಅಧ್ಯಕ್ಷರಾದ ಪಾರ್ವತಮ್ಮ ಸಹೋದರ ಚಿನ್ನೇಗೌಡ

    ಅದರಲ್ಲೂ, ಡಬ್ಬಿಂಗ್ ಬೇಕು ಎಂದು ಹೋರಾಟ ಮಾಡುತ್ತಿರುವ ಕನ್ನಡ ಗ್ರಾಹಕರ ಕೂಟದ ಕಾರ್ಯಕರ್ತರು ಟ್ವೀಟ್ ವಾರ್ ಮಾಡುತ್ತಿದ್ದಾರೆ. #ಕೆಎಫ್ಐಕನ್ನಡ ದ್ರೋಹ #ಡಬ್ಬಿಂಗ್ ಬೇಕು ಮುಂತಾದ ಹ್ಯಾಷ್ ಟ್ಯಾಹ್ ಬಳಸಿ ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

    S A Chinne Gowda has landed in a Dubbing controversy

    ಈಗಾಗಲೇ ಡಬ್ಬಿಂಗ್ ಗೆ ಅವಕಾಶ ಕೋರಿ ಕನ್ನಡ ಗ್ರಾಹಕರ ಕೂಟ ಸುಪ್ರಿಂಕೋರ್ಟ್ ನಲ್ಲಿ ಮನವಿ ಸಲ್ಲಿಸಿದೆ ಎಂದು ಕನ್ನಡ ಗ್ರಾಹಕರ ಕೂಟದ ಅಧ್ಯಕ್ಷ ಗಣೇಶ್ ಚೇತನ್ ಹೇಳಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಡಬ್ಬಿಂಗ್ ವಿಷಯ ಚರ್ಚೆಯಾಗುತ್ತಿದೆ. ಮತ್ತೊಂದೆಡೆ ಕಲಾವಿದರ ಸಂಘ ಮತ್ತು ನಿರ್ಮಾಪಕರ ಸಂಘ ಇದನ್ನು ವಿರೋಧಿಸುತ್ತಿದೆ. ಸಿಟಿಜನ್ ರೈಟ್ ಗ್ರೂಪ್ ಇದರ ವಿರುದ್ಧ ಹೋರಾಡುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಸಾಮಾನ್ಯ ವ್ಯಕ್ತಿಯೂ ಕೂಡ ಪ್ರಕರಣದ ಪರವಾಗಿ ನಿಲ್ಲಬೇಕಿದೆ. ಭಾಷಾ ಹಕ್ಕು ಜನ ತಮಗೆ ಯಾವ ಭಾಷೆ ಬೇಕೋ ಅದರಲ್ಲಿ ತಮಗಿಷ್ಟವಾದ ಮನರಂಜನೆ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಗಣೇಶ್ ಚೇತನ್ ಹೇಳಿದ್ದಾರೆ.

    English summary
    The newly-elected chief President of Karnataka Film Chamber of Commerce, S A Chinne Gowda has landed in a Dubbing controversy.
    Friday, June 29, 2018, 12:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X