»   » ಹಾಡು ನಿಲ್ಲಿಸಲಿದ್ದಾರೆ ಎಸ್.ಜಾನಕಿ : ಮೈಸೂರಿನಲ್ಲಿ ನಡೆಯಲಿದೆ ಕೊನೆಯ ಕಾರ್ಯಕ್ರಮ

ಹಾಡು ನಿಲ್ಲಿಸಲಿದ್ದಾರೆ ಎಸ್.ಜಾನಕಿ : ಮೈಸೂರಿನಲ್ಲಿ ನಡೆಯಲಿದೆ ಕೊನೆಯ ಕಾರ್ಯಕ್ರಮ

Posted By:
Subscribe to Filmibeat Kannada

ಗಾನ ಕೋಗಿಲೆ, ದಕ್ಷಿಣ ಭಾರತದ ಹೆಮ್ಮೆಯ ಗಾಯಕಿ ಎಸ್.ಜಾನಕಿ ಇದೀಗ ಹಾಡುವುದನ್ನು ನಿಲ್ಲಿಸುವ ನಿರ್ಧಾರ ಮಾಡಿದ್ದಾರೆ. ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದೊಂದಿಗೆ ತಮ್ಮ ಸುದೀರ್ಘ ಆರು ದಶಕದ ಸಂಗೀತ ಯಾನವನ್ನು ಕೊನೆಗೊಳಿಸಲಿದ್ದಾರೆ.

''ವಯಸ್ಸಾದ ಹಿನ್ನೆಲೆಯಲ್ಲಿ ಗಾಯನದಿಂದ ಹಿಂದೆ ಸರಿಯುತ್ತಿದ್ದೇನೆ'' ಎಂದಿರುವ ಎಸ್.ಜಾನಕಿ ''ಈಗ ಹಾಡುವವರು ಅನೇಕ ಮಂದಿ ಇದ್ದಾರೆ. ಇಂದಿನ ಮಕ್ಕಳು ಅದ್ಭುತವಾಗಿ ಹಾಡುತ್ತಿದ್ದಾರೆ'' ಎಂದು ಹೇಳಿದ್ದಾರೆ. ಎಸ್.ಜಾನಕಿ ಅವರ ಕೊನೆಯ ಕಾರ್ಯಕ್ರಮ ಅ.28 ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ತಮಿಳುನಾಡು, ಆಂಧ್ರ ಮತ್ತು ಕೇರಳದಿಂದಲೂ ಅನೇಕ ಅಭಿಮಾನಿಗಳು ಬರುವ ನಿರೀಕ್ಷೆ ಇದೆ.

S Janaki will be ended her singing journey on october 28th in mysuru.

1952ರಲ್ಲಿ ಜಿ.ಕೆ.ವೆಂಕಟೇಶ್ ಅವರು ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಎಸ್.ಜಾನಕಿ ಹಾಡಿದ್ದರು. ಇದರ ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿ ಕೂಡ ಬಂದಿತ್ತು. ಆದರೆ ಇದೀಗ ಮೈಸೂರಿನಲ್ಲಿಯೇ ಅವರ ಕೊನೆಯ ಕಾರ್ಯಕ್ರಮ ನಡೆಯಲಿರುವುದು ಮತ್ತೊಂದು ವಿಶೇಷ.

ಅಂದಹಾಗೆ, ಮೈಸೂರಿನ ಕಾರ್ಯಕ್ರಮದ ನಂತರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಹಾಗೂ ಟಿವಿ, ಪತ್ರಿಕೆಗಳಿಗೆ ಸಂದರ್ಶನವನ್ನು ನೀಡುವುದಿಲ್ಲ ಎಂದು ಎಸ್.ಜಾನಕಿ ಸ್ಪಷ್ಟ ಪಡಿಸಿದ್ದಾರೆ. ಎಸ್.ಜಾನಕಿ ಅವರಿಗೆ 80 ವರ್ಷ ವಯಸ್ಸಾಗಿದ್ದು, ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

English summary
Popular Singer S Janaki will be ended her singing journey on Oct 28th in Mysuru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X