For Quick Alerts
  ALLOW NOTIFICATIONS  
  For Daily Alerts

  ಶ್ರೀಗಳ ಹುಟ್ಟುಹಬ್ಬಕ್ಕಾದರೂ ಭಾರತ ರತ್ನ ನೀಡಿ - ಲಿಂಗದೇವರು

  |

  ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ಪ್ರಶಸ್ತಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.

  ಇದೀಗ ನಿರ್ದೇಶಕ ಲಿಂಗದೇವರು ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ''ಶ್ರೀಗಳ ಹುಟ್ಟುಹಬ್ಬಕ್ಕಾದರು ಭಾರತ ರತ್ನ ನೀಡಿ, ಅನಾಹುತ ಸರಿಪಡಿಸಿ'' ಎಂದು ಮನವಿ ಮಾಡಿದ್ದಾರೆ.

  ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ : ಬೆಂಬಲ ಸೂಚಿಸಿದ ಕಿಚ್ಚ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ : ಬೆಂಬಲ ಸೂಚಿಸಿದ ಕಿಚ್ಚ

  ''ಒಂದು ಸಮಿತಿಯಿಂದ ಪ್ರಶಸ್ತಿಗೆ ಅರ್ಹರನ್ನ ಆಯ್ಕೆ ಮಾಡಿದ ನಂತರ ಸರ್ಕಾರ ಆ ಪ್ರಶಸ್ತಿ ಘೋಷಣೆ ಮಾಡುವುದು ಪರಂಪರೆ. ನಂತರ ಆ ಪ್ರಶಸ್ತಿ ಪಡೆದವರ ಬಗ್ಗೆ ಮತ್ತು ಪ್ರಕ್ರಿಯೆಯ ಬಗ್ಗೆ ಮಾತನಾಡುವುದು ಚರ್ಚೆಗೆ ಯೋಗ್ಯವಲ್ಲದ ಮಾತು. ಈ ಹಿನ್ನಲೆಯಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರ ಹೋಲಿಕೆಗೆ ಮೀರಿದ ವ್ಯಕ್ತಿತ್ವ ನಮ್ಮ ಶ್ರೀಗಳು. ಏಪ್ರಿಲ್ ಒಂದನೇ ತಾರೀಖು ಶ್ರೀಗಳ ಹುಟ್ಟು ಹಬ್ಬದ ಪ್ರಯುಕ್ತ ಅವರ ನೆನಪಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಿ ಎನ್ನುವ ಒತ್ತಾಯ ಮಾಡೋಣ. ಆಗ ಮಾತ್ರ ಈಗ ಆಗಿರುವ ಅನಾಹುತ ತಪ್ಪಿಸಲು ಸಾಧ್ಯ'' ಎಂದು ಲಿಂಗದೇವರು ಬರೆದುಕೊಂಡಿದ್ದಾರೆ.

  'ದೊಡ್ಮನೆ' ನಟರ ಮೇಲಿತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ 'ದೊಡ್ಮನೆ' ನಟರ ಮೇಲಿತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ

  'ನಾನು ಅವನಲ್ಲ ಅವಳು' ಸಿನಿಮಾದ ಖ್ಯಾತಿಯ ನಿರ್ದೇಶಕ ಲಿಂಗದೇವರು ತಮ್ಮ ಫೇಸ್ ಬುಕ್ ಖಾತೆಯ ಮೂಲಕ ವಿವಾದದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀಗಳ ಹುಟ್ಟುಹಬ್ಬ ಏಪ್ರಿಲ್ 1 ರಂದು ಇದ್ದು, ಆ ದಿನವಾದರೂ ಭಾರತ ರತ್ನ ಸಿಗುತ್ತದೆಯೇ ಎನ್ನುವ ಆಸೆ ಅನೇಕರಲ್ಲಿ ಇದೆ.

  English summary
  Kannada director B S Lingadevaru gave his suggestion about Bharat Ratna award controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X