»   » ಡಾ.ರಾಜ್ ಹುಟ್ಟುಹಬ್ಬದಂದು 'ದಕ್ಷ' ಬೆಳ್ಳಿತೆರೆಗೆ

ಡಾ.ರಾಜ್ ಹುಟ್ಟುಹಬ್ಬದಂದು 'ದಕ್ಷ' ಬೆಳ್ಳಿತೆರೆಗೆ

Posted By:
Subscribe to Filmibeat Kannada

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅಂದ್ರೆ ಕಲಾಸಾಮ್ರಾಟ್ ಎಸ್.ನಾರಾಯಣ್ ಗೆ ಎಲ್ಲಿಲ್ಲದ ಅಭಿಮಾನ. 'ಶಬ್ಧವೇಧಿ' ಚಿತ್ರದ ಮೂಲಕ ಅಣ್ಣಾವ್ರಿಗೆ ಆಕ್ಷನ್ ಕಟ್ ಹೇಳಿರುವ ಎಸ್.ನಾರಾಯಣ್, ಇದೀಗ ಅಪ್ಪಾಜಿಯ ಹುಟ್ಟುಹಬ್ಬದಂದು ಸಿನಿ ಪ್ರಿಯರಿಗೆ ಸ್ಪೆಷಲ್ ಗಿಫ್ಟ್ ಕೊಡುತ್ತಿದ್ದಾರೆ. ಅದೇ 'ದಕ್ಷ' ಸಿನಿಮಾ.

ಎರಡು ಗಂಟೆ ಇಪತ್ತು ನಿಮಿಷದಲ್ಲಿ, ಒಂದೇ ಟೇಕ್ ನಲ್ಲಿ ರೆಡಿಯಾಗಿರುವ 'ದಕ್ಷ' ಸಿನಿಮಾ ಏಪ್ರಿಲ್ 24 ರಂದು ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ದಿನ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿರುವ 'ದಕ್ಷ' ಗಿನ್ನಿಸ್ ದಾಖಲೆಗೂ ಅಣಿಯಾಗುತ್ತಿದೆ. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]


S.Narayan directorial 'Daksha' all set to release on Dr.Rajkumar's Birthday

ಕಳೆದ ವರ್ಷ ಏಪ್ರಿಲ್ 17 ರಂದು ರಾತ್ರಿ 9.10 ರಿಂದ 11.30 ಸಮಯದಲ್ಲಿ 'ದಕ್ಷ' ಚಿತ್ರೀಕರಣ ನಡೆಸಲಾಗಿತ್ತು. ನಾಯಕ ದುನಿಯಾ ವಿಜಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ದಕ್ಷ' ಚಿತ್ರದಲ್ಲಿ ಸಾಹಸದ ಜೊತೆಗೆ ಮನಮಿಡಿಯುವ ಸನ್ನಿವೇಶಗಳು, ಕೊಂಚ ಕಾಮಿಡಿ ಜೊತೆಗೆ ಸಾಮಾಜಿಕ ಕಳಕಳಿ ಕೂಡ ಇದೆ.


ಪಂಕಜ್ ನಾರಾಯಣ್, ನೇಹಾ ಪಾಟೀಲ್, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ಶೋಭರಾಜ್, ಉದಯ್, ಅಭಿಜಿತ್, ಬುಲ್ಲೆಟ್ ಪ್ರಕಾಶ್ ಮತ್ತು ಪದ್ಮಜಾ ರಾವ್ ತಾರಾಗಣದಲ್ಲಿದ್ದಾರೆ. 'ದಕ್ಷ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಮಾಡಿರುವುದು ಎಸ್.ನಾರಾಯಣ್. [ಗಿನ್ನಿಸ್ ಜಾಗತಿಕ ದಾಖಲೆಗೆ ಎಸ್ ನಾರಾಯಣ್ ಚಿತ್ರ]


S.Narayan directorial 'Daksha' all set to release on Dr.Rajkumar's Birthday

ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಮಾಡಿರುವ 'ದಕ್ಷ' ಸಿನಿಮಾ ಮೇರು ನಟ ಡಾ.ರಾಜ್ ಕುಮಾರ್ ಹುಟ್ಟುಹಬ್ಬದಂದೇ ರಿಲೀಸ್ ಆಗುತ್ತಿದೆ. ಅದನ್ನ ಕಣ್ತುಂಬಿಕೊಳ್ಳೋಕೆ ನೀವೂ ರೆಡಿಯಾಗಿ. (ಫಿಲ್ಮಿಬೀಟ್ ಕನ್ನಡ)

English summary
S.Narayan Directorial 'Daksha' movie is all set to release on Dr.Rajkumar's Birthday (April 24th). Duniya Vijay, Neha Patil, Pankaj starrer 'Daksha' was shot in one take and is gearing up to enter Guinness World Record.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada