»   » ನಾರಾಯಣ್ ಮುಂದಿನ ಚಿತ್ರದ ಹೆಸರೇನು ಗೊತ್ತೆ?

ನಾರಾಯಣ್ ಮುಂದಿನ ಚಿತ್ರದ ಹೆಸರೇನು ಗೊತ್ತೆ?

Posted By:
Subscribe to Filmibeat Kannada
S Narayan
ಕಡೆಗೂ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ತಮ್ಮ ಹೊಸ ಚಿತ್ರಕ್ಕೆ ಸೂಕ್ತ ಹೆಸರಿಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು ಎರಡು ತಿಂಗಳಷ್ಟು ಸಮಯ ತೆಗೆದುಕೊಂಡಿದ್ದರು. ತಮ್ಮ ಚಿತ್ರಕ್ಕೆ ಸೂಕ್ತ ಶೀರ್ಷಿಕೆ ಸೂಚಿಸಿ ಎಂದು ನಾರಾಯಣ್ ಕರೆ ಕೊಟ್ಟಿದ್ದರು.

ಇದಕ್ಕಾಗಿ ನಾಡಿನ ಮೂಲೆ ಮೂಲೆಯಿಂದ 60 ಸಾವಿರದಷ್ಟು ಪತ್ರಗಳು, ಇ-ಮೇಲ್, ಎಸ್ಎಂಎಸ್ ಗಳು ಹರಿದುಬಂದಿವೆ. ಅವುಗಳಲ್ಲಿ ಬೆಂಗಳೂರಿನ ವಾದಿರಾಜ್ ಅವರು ಸೂಚಿಸಿದ ಟೈಟಲ್ ಆಯ್ಕೆಯಾಗಿದೆ. ವಾದಿರಾಜ್ ಅವರಿಗೆ ಹೀರೋ ಮೋಟರ್ ಬೈಕ್ ಬಹುಮಾನವಾಗಿ ನೀಡಲಾಗಿದೆ.

ಇಷ್ಟಕ್ಕೂ ವರದರಾಜ್ ಸೂಚಿಸಿದ ಹೆಸರೇನು ಗೊತ್ತೆ? 'ಛತ್ರಿಗಳು ಸಾರ್ ಛತ್ರಿಗಳು'! ಈ ಚಿತ್ರದಲ್ಲಿ ನಾರಾಯಣ್ ಜೊತೆ ಮೋಹನ್, ರಮೇಶ್ ಅರವಿಂದ್ ಅವರು ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರವನ್ನು ಪದ್ಮಸುಂದರಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿದೆ.

ಮಾನಸಿ, ಸನಾತನಿ, ಪವಿತ್ರಾ ಗೌಡ ಹಾಗೂ ಸುಷ್ಮಾ ರಾಜ್ ಚಿತ್ರದ ನಾಯಕಿಯರು. ಈ ಹಿಂದೆ ಎಸ್ ನಾರಾಯಣ್ ಅವರು ಕುರಿಗಳು ಸಾರ್ ಕುರಿಗಳು ಹಾಗೂ ಕೋತಿಗಳು ಸಾರ್ ಕೋತಿಗಳು ಎಂಬ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿದ್ದರು. ಈಗ 'ಛತ್ರಿಗಳು ಸಾರ್ ಛತ್ರಿಗಳು' ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಚಿತ್ರದ ಪಾತ್ರವರ್ಗದಲ್ಲಿ ಸಾಧು ಕೋಕಿಲ, ಸುಂದರ ರಾಜ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಶಿವರಾಂ ಮುಂತಾದ ಹಾಸ್ಯ ನಟರ ಬಳಗವೇ ಚಿತ್ರದಲ್ಲಿದೆ. ಮಾಲೂರು ಶ್ರೀನಿವಾಸ್ ಅವರ ನೃತ್ಯ ಸಂಯೋಜನೆ ಚಿತ್ರಕ್ಕಿದೆ. (ಏಜೆನ್ಸೀಸ್)

English summary
Director S Narayan's upcoming film titled as Chatrigalu Saar Chatrigalu. Actors Ramesh Arvind and Mohan are also plays in this film. Arjun Janya scoring the music.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X