»   » ನಿರ್ದೇಶಕ ಎಸ್.ನಾರಾಯಣ್ ಮುಂದಿನ ಚಿತ್ರ ಯಾವ್ದು?

ನಿರ್ದೇಶಕ ಎಸ್.ನಾರಾಯಣ್ ಮುಂದಿನ ಚಿತ್ರ ಯಾವ್ದು?

Posted By:
Subscribe to Filmibeat Kannada

ಇತ್ತೀಚೆಗೆ ಗಾಂಧಿನಗರದ ಕಡೆ ನಿರ್ದೇಶಕ ಎಸ್.ನಾರಾಯಣ್ ತುಂಬಾ ವಿರಳವಾಗಿದ್ದಾರೆ. ದುನಿಯಾ ವಿಜಯ್ ಗಾಗಿ 'ದಕ್ಷ' ಚಿತ್ರ ನಿರ್ದೇಶನ ಮಾಡಿದ ನಂತ್ರ ಬೇರೆ ಯಾವ ಚಿತ್ರವನ್ನೂ ಕಲಾಸಾಮ್ರಾಟ್ ಎಸ್.ನಾರಾಯಣ್ ಅನೌನ್ಸ್ ಮಾಡಿರಲಿಲ್ಲ.

ಮಗಳ ಮದುವೆಯಲ್ಲಿ ಬಿಜಿಯಾಗಿದ್ದ ಎಸ್.ನಾರಾಯಣ್ ಇದೀಗ ಹೊಸ ಪ್ರತಿಭೆಗಳಿಗೆ ಮಣೆ ಹಾಕುವುದಕ್ಕೆ ಮುಂದಾಗಿದ್ದಾರೆ. ವರದಿಗಳ ಪ್ರಕಾರ, ಹಿಟ್ ಸಿನಿಮಾ 'ಗೆಜ್ಜೆನಾದ' ಚಿತ್ರದ ನಿರ್ದೇಶಕ ವಿಜಯ್ ಕುಮಾರ್ ಪುತ್ರನನ್ನ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ತಯಾರಿಯಲ್ಲಿ ತೊಡಗಿದ್ದಾರೆ ಎಸ್.ನಾರಾಯಣ್. [ಬೆಂಗಳೂರಲ್ಲಿ 3 ಲಕ್ಷ ಹಣ ಕಳೆದುಕೊಂಡ ಎಸ್.ನಾರಾಯಣ್]

S.Narayan to launch Director Vijay Kumar's son

ಇದೇ ತಿಂಗಳ ಕೊನೆಗೆ ಎಸ್.ನಾರಾಯಣ್ ನಿರ್ದೇಶನದ ಹೊಸ ಚಿತ್ರದ ಮುಹೂರ್ತ ನಡೆಯಲಿದ್ದು, ನಿರ್ದೇಶಕ ವಿಜಯ್ ಕುಮಾರ್ ಪುತ್ರನ ಪರಿಚಯ ಅಂದೇ ಆಗಲಿದೆ. [ತಮಿಳು 'ಪುಲಿ' ಬಾಲ ಹಿಡಿದು ನಿಂತ ಕಲಾ ಸಾಮ್ರಾಟ್]

'ಚೈತ್ರದ ಪ್ರೇಮಾಂಜಲಿ' ಖ್ಯಾತಿಯ ರಘುವೀರ್, ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ಇದೇ ಎಸ್.ನಾರಾಯಣ್ ರವರ ಸಿನಿಮಾದಿಂದ. ಎಸ್.ನಾರಾಯಣ್ ನಿರ್ದೇಶನದ ಹೊಸ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
According to the reports, Kannada Director S.Narayan is all set to launch Vijay Kumar's son to Kannada Film Industry. The muhoortha ceremony of the film will be held by this month end.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada