»   » ಶ್ರೀನಿವಾಸ್ ಕೈಹಿಡಿದ ಎಸ್ ನಾರಾಯಣ್ ಪುತ್ರಿ ವಿದ್ಯಾಶ್ರೀ

ಶ್ರೀನಿವಾಸ್ ಕೈಹಿಡಿದ ಎಸ್ ನಾರಾಯಣ್ ಪುತ್ರಿ ವಿದ್ಯಾಶ್ರೀ

Posted By:
Subscribe to Filmibeat Kannada

ಕನ್ನಡ ಕೌಟುಂಬಿಕ ಚಿತ್ರಗಳ ಸರದಾರ, ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಹಿರಿಯ ಮಗಳು ವಿದ್ಯಾಶ್ರೀ ಸೋಮವಾರ (ಫೆ.9) ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಅವರ ಮದುವೆಗೆ ಕನ್ನಡ ಚಿತ್ರರಂಗದ ಬಹಳಷ್ಟು ಗಣ್ಯರು ಆಗಮಿಸಿ ಹೊಸ ಜೋಡಿಗೆ ಶುಭಕೋರಿದರು.

ನಟಸಾರ್ವಭೌಮ ಡಾ.ರಾಜ್ ಕುಮಾರ್, ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಡಾವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳಿದ ನಿರ್ದೇಶಕರು ಎಸ್ ನಾರಾಯಣ್. ಅವರ ಹಿರಿಮಗಳ ಮದುವೆ ಎಂದರೆ ಹೇಗಿರಬೇಡ. [ಹೊಸ ಬಾಳಿನ ಹೊಸಿಲಲಿ ಎಸ್ ನಾರಾಯಣ್ ಪುತ್ರಿ]

ಕುಣಿಗಲ್ ನಲ್ಲಿ ವಿದ್ಯಾ ಸಂಸ್ಥೆಯೊಂದನ್ನು ನಡೆಸುತ್ತಿರುವ ಶ್ರೀನಿವಸ್ ಅವರನ್ನು ವರಿಸಿದರು ವಿದ್ಯಾಶ್ರೀ. ಇವರ ವಿವಾಹ ಮಹೋತ್ಸವ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಆ ಸಂಭ್ರಮದ ಕ್ಷಣಗಳನ್ನು ನೋಡೋಣ ಬನ್ನಿ.

ಪುಸ್ತಕ ರೂಪದಲ್ಲಿ ಮದುವೆ ಅನುಭಗಳು

ತಮ್ಮ ಮಗಳ ಮದುವೆಗಾಗಿ ಮೂರು ತಿಂಗಳಿಂದ ತಯಾರಿ ನಡೆಸಿದ್ದರು ನಾರಾಯಣ್. ಇದರಿಂದ ಅವರಿಗೆ ಸಮೃದ್ಧ ಅನುಭವವೇ ಆಗಿದೆಯಂತೆ. ಆ ಅನುಭವಗಳನ್ನು ಪುಸ್ತಕ ರೂಪದಲ್ಲಿ ತರುವುದಾಗಿಯೂ ಹೇಳಿದ್ದಾರೆ ಕಲಾಸಾಮ್ರಾಟ್.

ದೊಡ್ಡ ಮಗಳೆಂದರೆ ಸ್ವಲ್ಪ ಪ್ರೀತಿ ಜಾಸ್ತಿ

ನನಗೆ ಮಕ್ಕಳೆಂದರೆ ಬಲು ಪ್ರೀತಿ. ಅದರಲ್ಲೂ ದೊಡ್ಡ ಮಗಳ ಮೇಲೆ ಸ್ವಲ್ಪ ಹೆಚ್ಚಾಗಿಯೇ ಪ್ರೀತಿ ಇದೆ. ನಮ್ಮ ಮನೆಯಲ್ಲಿ ನಡೆಯುತ್ತಿರುವ ಮೊದಲ ಸಂಭ್ರಮಾಚರಣೆ ಇದು. ಹಾಗಾಗಿ ಅದ್ದೂರಿಯಾಗಿಯೇ ಮಾಡಿದ್ದೇವೆ ಎನ್ನುತ್ತಾರೆ ನಾರಾಯಣ್.

ಚಿತ್ರರಂಗ ನನ್ನ ಕುಟುಂಬವಿದ್ದಂತೆ: ನಾರಾಯಣ್

ಚಿತ್ರರಂಗ ನನ್ನ ಕುಟುಂಬವಿದ್ದಂತೆ. ಅವರೆಲ್ಲರೂ ನನ್ನ ಕುಟುಂಬದ ಅವಿಭಾಜ್ಯ ಅಂಗ. ಅವರೆಲ್ಲರ ನಡುವೆ ಈ ಕಾರ್ಯಕ್ರಮ ನಡೆದಿರುವುದು ನನಗೆ ಹೆಚ್ಚು ಖುಷಿ ಕೊಟ್ಟಿದೆ ಎಂದು ತಮ್ಮ ಮಗಳ ಮದುವೆ ಬಗ್ಗೆ ನಾರಾಯಣ್ ಸಂತಸ ಹಂಚಿಕೊಂಡರು.

ಅಕ್ಟೋಬರ್ 30ರಲ್ಲಿ ನಿಶ್ಚಿತಾರ್ಥ ನಡೆದಿತ್ತು

ಅಕ್ಟೋಬರ್ 30, 2014ರಂದು ನಿಶ್ಚಿತಾರ್ಥ ನಡೆದಿತ್ತು. ಆಗ ಉಂಗುರ ಬದಲಾಯಿಸಿಕೊಂಡಿದ್ದ ಜೋಡಿ ಈಗ ಸಪ್ತಪದಿ ತುಳಿದಿದೆ. ವಿದ್ಯಾಶ್ರೀ ಅವರು ಎಂ.ಎ ಮುಗಿಸಿ ಐಎಎಸ್ ಕೋಚಿಂಗ್ ಪಡೆದಿದ್ದಾರೆ. ನಾಗರೀಕ ಸೇವಾ ಪರೀಕ್ಷೆಗಳನು ಬರೀಬೇಕಾಗಿದೆ. ಮುಂದೆ ಐಎಎಸ್ ಆಗಬೇಕೆಂಬ ಕನಸು ಕಂಡಿದ್ದಾರೆ.

ಹುಡುಗನ ಆಯ್ಕೆ ನನಗೆ ಬಿಟ್ಟಿದ್ದಳು

"ಅಪ್ಪಾ ನಾನು ಚೆನ್ನಾಗಿ ಓದಬೇಕು, ಆದರೆ ಮದುವೆ ಅಂತ ಬಂದಾಗ ಗಂಡನ ಆಯ್ಕೆ ನಿಮಗೆ ಬಿಡ್ತೀನಿ ಎಂದಿದ್ದರು. ನನಗೆ ಯಾರು ಸೂಕ್ತ ಎಂಬುದು ನಿಮಗೆ ಚೆನ್ನಾಗಿ ಗೊತ್ತಿರುತ್ತದೆ" ಎಂದಿದ್ದರಂತೆ ವಿದ್ಯಾಶ್ರೀ.

ಎರಡು ವರ್ಷಗಳ ಕಾಲ ವರಾನ್ವೇಷಣೆ

ಅದರಂತೆ ನಾರಾಯಣ್ ಅವರು ವರಾನ್ವೇಷಣೆಗೆ ತೆಗೆದುಕೊಂಡ ಸಮಯ ಸುಮಾರು ಎರಡು ವರ್ಷಗಳ ಕಾಲ. ಕಡೆಗೂ ತಮ್ಮ ಮಗಳ ಅಭಿರುಚಿ, ವ್ಯಕ್ತಿತ್ವಕ್ಕೆ ತಕ್ಕಂತಹ ಅಳಿಯನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

ಒಳ್ಳೆ ಅಳಿಮಯ್ಯ ಸಿಕ್ಕಿದ್ದಾನೆ, ಎಸ್ ನಾರಾಯಣ್

ಸೂಕ್ತ ಹುಡುಗನನ್ನು ಹುಡುಕುವ ಪ್ರಯತ್ನ ಮಾಡಿದೆ. ನನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ನನ್ನ ಮಗಳನ್ನು ಬೆಳೆಸಿದ್ದೇನೆ. ಅವಳ ವ್ಯಕ್ತಿತ್ವಕ್ಕೆ ತಕ್ಕಂತೆ ಗಂಡನ್ನು ಹುಡುಕಬೇಕಾಗಿತ್ತು. ಕುಟುಂಬ ಸಂಸ್ಕಾರವಂತರಾಗಿರಬೇಕು ಎಂದು ಆಸೆಪಟ್ಟೆ. ಅದರಂತೆ ಒಳ್ಳೆಯ ಹಿನ್ನೆಲೆಯುಳ್ಳ ಹುಡುಗ ಸಿಕ್ಕಿದ್ದಾನೆ. ಅವರ ಕುಟುಂಬ ಹುಡುಗನನ್ನು ನೋಡಿದರೆ ಹೆಮ್ಮೆ ಆಗುತ್ತದೆ ಎನ್ನುತ್ತಾರೆ ನಾರಾಯಣ್.

ತುಂಬಾ ಹೆಮ್ಮೆ ಅನ್ನಿಸುತ್ತಿದೆ: ಶ್ರೀನಿವಾಸ್

ಇನ್ನು ಶ್ರೀನಿವಾಸ್ ಎಂಬಿಎ ಮುಗಿಸಿ ವಿದ್ಯಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರಿಯನ್ನು ವಿವಾಹವಾಗುತ್ತಿರುವುದಕ್ಕೆ ತುಂಬಾ ಹೆಮ್ಮೆ ಅನ್ನಿಸುತ್ತಿದೆ ಎನ್ನುತ್ತಾರೆ ಅವರು.

ಕುಣಿಗಲ್ ವ್ಯಾಲಿ ಸ್ಕೂಲನ್ನು ನಡೆಸುತ್ತಿದ್ದಾರೆ ಶ್ರೀನಿವಾಸ್

ಡಿಪ್ಲೊಮೋ, ಬಿ.ಟೆಕ್ ಮಾಡಿ ಬಳಿಕ ಎಂಬಿಎ ಮಾಡಿದ್ದಾರೆ. ಕುಣಿಗಲ್ ವ್ಯಾಲಿ ಸ್ಕೂಲನ್ನು ನಡೆಸುತ್ತಿದ್ದಾರೆ ಶ್ರೀನಿವಾಸ್. ಅಪ್ಪಟ ಹಿಂದೂ ಸಂಪ್ರದಾಯದಂತೆ ನಡೆದ ಮದುವೆ ಕಾರ್ಯಕ್ರಮವಿದು.

ಸ್ಯಾಂಡಲ್ ವುಡ್ ಚಿತ್ರರಂಗವೇ ಅಲ್ಲಿ ನೆರೆದಿತ್ತು

ಎಸ್ ನಾರಾಯಣ್ ಅವರ ಪುತ್ರಿಯ ಮದುವೆ ಎಂದರೆ ಕೇಳಬೇಕೆ, ಇಡೀ ಸ್ಯಾಂಡಲ್ ವುಡ್ ಚಿತ್ರರಂಗವೇ ಅಲ್ಲಿ ನೆರೆದಿತ್ತು. ಎಲ್ಲರೂ ನೂತನ ದಂಪತಿಗಳನ್ನು ಹಾರೈಸಿದರು.

English summary
Kannada actor, director, writer, producer, lyricist and music composer S Narayan's daughter Vidyasri & Srinivas Wedding Reception held at Palace ground, Bengaluru on 09th Februay, 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada