»   » ಪ್ರೇಕ್ಷಕರ ಮನಸ್ಸಿನ ಜೊತೆ ಆಟ ಆಡಲು ಬರುತ್ತಿದ್ದಾನೆ 'ಪಂಟ'

ಪ್ರೇಕ್ಷಕರ ಮನಸ್ಸಿನ ಜೊತೆ ಆಟ ಆಡಲು ಬರುತ್ತಿದ್ದಾನೆ 'ಪಂಟ'

Posted By:
Subscribe to Filmibeat Kannada

'ಲಕ್ಷ್ಮಣ' ಚಿತ್ರದ ಖ್ಯಾತಿಯ ನಟ ಅನೂಪ್ ರೇವಣ್ಣ ಮತ್ತು ನಿರ್ದೇಶಕ ಎಸ್ ನಾರಾಯಣ್ ಅವರಿಬ್ಬರ ಕಾಂಬಿನೇಷನ್ ನಲ್ಲಿ 'ಪಂಟ' ಎಂಬ ಸಿನಿಮಾ ಮೂಡಿಬರುತ್ತಿದೆ ಅಂತ ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೇ.

ಇದೀಗ ಚಿತ್ರದ ಮುಹೂರ್ತ ಸಮಾರಂಭ ಗುರುವಾರ, ಜೂನ್ 9 ರಂದು ನೆರವೇರಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.[ಎಸ್ ನಾರಾಯಣ್-ಅನೂಪ್ ರೇವಣ್ಣ ಚಿತ್ರದ ಮುಹೂರ್ತ ಯಾವಾಗ?]

S.Narayan's Kannada Movie 'Panta' launched

ಸುಮಾರು ಎರಡು ವರ್ಷಗಳ ಬಳಿಕ ನಿರ್ದೇಶನದ ಕಡೆ ಒಲವು ತೋರಿರುವ ನಿರ್ದೇಶಕ ಎಸ್ ನಾರಾಯಣ್ ಅವರು 'ಪಂಟ' ಎಂಬ ಹೊಸ ಕಾನ್ಸೆಪ್ಟ್ ಮೂಲಕ ಮತ್ತೆ ಗಾಂಧಿನಗರದತ್ತ ಮುಖ ಮಾಡಿದ್ದಾರೆ.

ಇನ್ನು ಕಳೆದ ಎರಡೂವರೆ ವರ್ಷಗಳಿಂದ ಕನ್ನಡ ಚಿತ್ರರಂಗದ ನಾಡಿ ಮಿಡಿತವನ್ನು ಅರಿತಿರುವ ನಿರ್ದೇಶಕ ಎಸ್ ನಾರಾಯಣ್ ಅವರು ಇತ್ತೀಚಿನ ಟ್ರೆಂಡ್ ಗೆ ಒಗ್ಗುವಂತಹ ವಿಭಿನ್ನ ಸಿನಿಮಾವನ್ನು ಹೊರತರುತ್ತಿದ್ದಾರಂತೆ.

"ಮೈಂಡ್ ಗೇಮ್ ಕಾನ್ಸೆಪ್ಟ್ ಇರೋ 'ಪಂಟ' ಎಂಬ ಸಿನಿಮಾದಲ್ಲಿ ನಾಯಕ ಫೈಟ್ ಮಾಡುತ್ತಿಲ್ಲವಂತೆ, ಬದಲಾಗಿ ತನ್ನ ಮೆದುಳನ್ನೇ ವೆಪನ್ ಆಗಿ ಇಟ್ಟುಕೊಂಡು ಎಲ್ಲರನ್ನೂ ಆಟ ಆಡಿಸುತ್ತಾನೆ' ಎಂದು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ಕೆಲವು ಕುತೂಹಲಕಾರಿ ಸಂಗತಿಗಳನ್ನು ಎಸ್ ನಾರಾಯಣ್ ಬಿಚ್ಚಿಟ್ಟಿದ್ದಾರೆ.[ವೆಂಕಟ್ ಜೊತೆ 'ಡಿಕ್ಟೇಟರ್' ಬಿಟ್ಟ ಎಸ್ ನಾರಾಯಣ್ ಮಾಡಿದ್ದೇನು?]

S.Narayan's Kannada Movie 'Panta' launched

ಈ ಚಿತ್ರದಲ್ಲಿ ಅದ್ಭುತ ಪಾತ್ರ ವಹಿಸುತ್ತಿರುವ ನಾಯಕ ಅನೂಪ್ ರೇವಣ್ಣ ಅವರು ಎಸ್ ನಾರಾಯಣ್ ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗಿದ್ದಾರೆ.

'ನನ್ನ ಮೊದಲ ಸಿನಿಮಾ 'ಲಕ್ಷ್ಮಣ' ದಂತೆ 'ಪಂಟ' ಸಿನಿಮಾದಲ್ಲಿ ಆಕ್ಷನ್ ಇಲ್ಲ. ಪಕ್ಕಾ ಮೈಂಡ್ ಗೇಮ್ ಆಗಿರೋ ಈ ಸಿನಿಮಾದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಹಾಗೂ ಹಲವಾರು ಟರ್ನಿಂಗ್ ಪಾಯಿಂಟ್ ಇದೆ'. ಸಿನಿಮಾ ನೋಡುವ ಪ್ರೇಕ್ಷಕರು ಖಂಡಿತ ಕನ್ ಫ್ಯೂಸ್ ಆಗುತ್ತಾರೆ' ಎನ್ನುತ್ತಾರೆ ನಟ ಅನೂಪ್ ರೇವಣ್ಣ ಅವರು.

ತಮಿಳಿನ ಹಮೀದ್ ಎಂಬುವವರು ಹೆಣೆದಿರುವ ಕಥೆಗೆ ಎಸ್ ನಾರಾಯಣ್ ಅವರು ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಿರ್ಮಾಪಕ ಕಡಿಯಾಲ ಸುಬ್ರಮಣ್ಯಮ್ ಎಂಬುವವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. (ಚಿತ್ರದ ಮುಹೂರ್ತ ಸಮಾರಂಭದ ಫೋಟೋ ಗ್ಯಾಲರಿ ನೋಡಿ ಸ್ಲೈಡುಗಳಲ್ಲಿ...)

-ಎಸ್ ನಾರಾಯಣ್ ಗೆ ಸಿಹಿ ತಿನ್ನಿಸುತ್ತಿರುವ ಸಾರಾ ಗೋವಿಂದು

-ಎಸ್ ನಾರಾಯಣ್ ಗೆ ಸಿಹಿ ತಿನ್ನಿಸುತ್ತಿರುವ ಸಾರಾ ಗೋವಿಂದು

-ನಟ ಅನೂಪ್ ರೇವಣ್ಣ ಮತ್ತು ಎಸ್ ನಾರಾಯಣ್

-ನಟ ಅನೂಪ್ ರೇವಣ್ಣ ಮತ್ತು ಎಸ್ ನಾರಾಯಣ್

-ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಎಸ್ ನಾರಾಯಣ್

-ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಎಸ್ ನಾರಾಯಣ್

-ಎಸ್ ನಾರಾಯಣ್, ಚಿನ್ನೇಗೌಡ್ರು ಮತ್ತು ಅನೂಪ್ ರೇವಣ್ಣ

-ಎಸ್ ನಾರಾಯಣ್, ಚಿನ್ನೇಗೌಡ್ರು ಮತ್ತು ಅನೂಪ್ ರೇವಣ್ಣ

-ತಂದೆ-ತಾಯಿ ಜೊತೆ ಅನೂಪ್ ರೇವಣ್ಣ

-ತಂದೆ-ತಾಯಿ ಜೊತೆ ಅನೂಪ್ ರೇವಣ್ಣ

-ಅತಿಥಿಗಳ ಜೊತೆ ನಟ ಅನೂಪ್ ರೇವಣ್ಣ-ಎಸ್ ನಾರಾಯಣ್

-ಅತಿಥಿಗಳ ಜೊತೆ ನಟ ಅನೂಪ್ ರೇವಣ್ಣ-ಎಸ್ ನಾರಾಯಣ್

-'ಪಂಟ' ಚಿತ್ರದ ಮುಹೂರ್ತ ಸಮಾರಂಭ

-'ಪಂಟ' ಚಿತ್ರದ ಮುಹೂರ್ತ ಸಮಾರಂಭ

-ಕ್ಲ್ಯಾಪ್ ಮಾಡಿದ ಸಿದ್ದರಾಮಯ್ಯ

-ಕ್ಲ್ಯಾಪ್ ಮಾಡಿದ ಸಿದ್ದರಾಮಯ್ಯ

-ಕ್ಲ್ಯಾಪ್ ಮಾಡಿದ ಸಿದ್ದರಾಮಯ್ಯ

-ಕ್ಲ್ಯಾಪ್ ಮಾಡಿದ ಸಿದ್ದರಾಮಯ್ಯ

-ನಟ ಅನೂಪ್ ಗೆ ಸಿದ್ಧರಾಮಯ್ಯ ಶುಭ ಹಾರೈಕೆ

-ನಟ ಅನೂಪ್ ಗೆ ಸಿದ್ಧರಾಮಯ್ಯ ಶುಭ ಹಾರೈಕೆ

-ಎಸ್ ನಾರಾಯಣ್ ಗೆ ಸಿದ್ಧರಾಮಯ್ಯ ಶುಭ ಹಾರೈಕೆ

-ಎಸ್ ನಾರಾಯಣ್ ಗೆ ಸಿದ್ಧರಾಮಯ್ಯ ಶುಭ ಹಾರೈಕೆ

-ಸಿ.ಎಂ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಿದ 'ಪಂಟ' ಚಿತ್ರತಂಡ

-ಸಿ.ಎಂ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಿದ 'ಪಂಟ' ಚಿತ್ರತಂಡ

-ಸಿ.ಎಂ ಸಿದ್ಧರಾಮಯ್ಯ ಜೊತೆ ಮಾತು-ಕತೆಯಲ್ಲಿ 'ಪಂಟ' ಚಿತ್ರತಂಡ

-ಸಿ.ಎಂ ಸಿದ್ಧರಾಮಯ್ಯ ಜೊತೆ ಮಾತು-ಕತೆಯಲ್ಲಿ 'ಪಂಟ' ಚಿತ್ರತಂಡ

-ಸಿ.ಎಂ ಸಿದ್ಧರಾಮಯ್ಯ ಜೊತೆ ಪತ್ರೀಕಾಗೋಷ್ಠಿ

-ಸಿ.ಎಂ ಸಿದ್ಧರಾಮಯ್ಯ ಜೊತೆ ಪತ್ರೀಕಾಗೋಷ್ಠಿ

-ಪಂಕಜ್ ಗೆ ಶುಭ ಹಾರೈಸಿದ ಸಿ.ಎಂ ಸಿದ್ಧರಾಮಯ್ಯ

-ಪಂಕಜ್ ಗೆ ಶುಭ ಹಾರೈಸಿದ ಸಿ.ಎಂ ಸಿದ್ಧರಾಮಯ್ಯ

-ನಟ ಅನೂಪ್ ರೇವಣ್ಣ ಮತ್ತು ಸಿ.ಎಂ ಸಿದ್ಧರಾಮಯ್ಯ

-ನಟ ಅನೂಪ್ ರೇವಣ್ಣ ಮತ್ತು ಸಿ.ಎಂ ಸಿದ್ಧರಾಮಯ್ಯ

English summary
CM Siddaramaiah on Thursday (June 9th) morning launched S Narayan's new Kannada Movie 'Panta' which starrer 'Lakshmana' fame kannada actor Anup Revanna in lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada