For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಈಗ ನಿರ್ದೇಶಕ

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಎರಡನೇ ಪುತ್ರ ಪವನ್ ನಾರಾಯಣ್ ನಿರ್ದೇಶಕರಾಗಿದ್ದಾರೆ. ಕಳೆದ ವರ್ಷದ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಪವನ್ ಈಗ ನಿರ್ದೇಶನದ ಕ್ಯಾಪ್ ಧರಿಸಿದ್ದಾರೆ.

  ಕಳೆದ ವರ್ಷ ಮುತ್ತು ರತ್ನ ಸಿನಿಮಾ ಮೂಲಕ ಪವನ್ ಹೀರೋ ಆಗಿ ಬಣ್ಣಹಚ್ಚಿದ್ದರು. ಈ ಸಿನಿಮಾ ಈಗಾಗಲೇ ಸಂಪೂರ್ಣವಾಗಿದ್ದು, ಇನ್ನೇನು ರಿಲೀಸ್ ಆಗಬೇಕಿದೆ. ಈ ಮಧ್ಯೆ ಪವನ್ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡಿದ್ದರು, ನವಮಿ 9.9.1991 ಎಂಬ ಹಾರರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ವಿಶೇಷ ಅಂದರೆ ಈಗ ನವಮಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಎಸ್ ನಾರಾಯಣ್, ಶಶಾಂಕ್, ರವಿ ಶ್ರೀವತ್ಸ, ಸಿಂಪಲ್ ಸುನಿ ಪವನ್ ಒಡೆಯರ್, ಎಪಿ ಅರ್ಜುನ್ ಸೇರಿದಂತೆ ಅನೇಕರು ನಿರ್ದೇಶಕರು ಪವನ್ ಹೊಸ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

  ದಸರಾ ಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ನಾಯಕನಾಗಿ ಯಶಸ್ ಕಾಣಿಸಿಕೊಂಡಿದ್ದಾರೆ. ಈ ಮೊದಲು ಯಶಸ್ ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್ ಹಾಗೂ ಕ್ರಿಟಿಕಲ್ ಕೀರ್ತನೆಗಳು ಚಿತ್ರಗಳಲ್ಲಿ ನಟಿಸಿದ್ದರು.

  ಮತ್ತೆ ಶಾಲೆಗೆ ಸೇರಿದ ರಶ್ಮಿಕಾ ಮಂದಣ್ಣ | Pushpa | Allu Arjun | Filmibeat Kannada

  ಅಂದ್ಹಾಗೆ ನವಮಿ 9.9.1991 ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆಯಂತೆ. ಚಿತ್ರದಲ್ಲಿ ನಾಯಕಿಯಾಗಿ ನಂದಿನಿ ಗೌಡ ಕಾಣಿಸಿಕೊಂಡಿದ್ದಾರೆ. ಪುತ್ರನ ಸಿನಿಮಾದಲ್ಲಿ ಎಸ್ ನಾರಾಯಣ್ ಸಹ ಬಣ್ಣಹಚ್ಚಿದ್ದಾರೆ. ಇನ್ನು ಉಳಿದಂತೆ ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

  English summary
  Kannada Director S.Narayan second son Pavan turns to Director.First movie poster released on occasion of Dasara

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X