»   » ಫೇಸ್ ಬುಕ್ ನಲ್ಲಿ ರಾಜಮೌಳಿ ಹೊಸ ದಾಖಲೆ

ಫೇಸ್ ಬುಕ್ ನಲ್ಲಿ ರಾಜಮೌಳಿ ಹೊಸ ದಾಖಲೆ

Posted By:
Subscribe to Filmibeat Kannada

ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ಕರ್ನಾಟಕ ಮೂಲಕ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಫೇಸ್ ಬುಕ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ರಾಜಮೌಳಿ ಅವರ ಅಧಿಕೃತ ಫೇಸ್ ಬುಕ್ ಫ್ಯಾನ್ ಪೇಜ್ ಗೆ 5,00,000ಕ್ಕೂ ಅಧಿಕ ಲೈಕ್ಸ್ ಸಿಕ್ಕಿವೆ.

ನಮ್ಮ ದೇಶದ ಯಾವುದೇ ಭಾಷೆಯ ನಿರ್ದೇಶಕನಿಗೂ ಇದುವರೆಗೂ ಈ ಭಾಗ್ಯ ಸಿಕ್ಕಿಲ್ಲ, ಅಂದರೆ ಇಷ್ಟೊಂದು ಲೈಕ್ಸ್ ದಕ್ಕಿಲ್ಲ. ಈ ಫ್ಯಾನ್ ಪೇಜ್ ನಲ್ಲಿ ಏನಿದೆಯಪ್ಪಾ ಅಂತಹಾ ವಿಶೇಷ ಎಂದರೆ, ರಾಜಮೌಳಿ ಅವರ ಚಿತ್ರಕ್ಕೆ ಸಂಬಂಧಿಸಿದ ಲೇಟೆಸ್ಟ್ ಮಾಹಿತಿ, ಫೋಟೋಗಳು ಆಗಿಂದಾಗ್ಗೆ ಅಪ್ ಡೇಟ್ ಆಗುತ್ತಿರುತ್ತವೆ.

SS Rajamouli

ತಮ್ಮ ಲೇಟೆಸ್ಟ್ ಚಿತ್ರದ ಬಗ್ಗೆ ತಾಜಾ ಸುದ್ದಿಗಳನ್ನು ಈ ಪೇಜ್ ನಲ್ಲಿ ನೋಡಬಹುದು. ಬಹುಶಃ ಹಾಗಾಗಿಯೇ ಈ ಪೇಜ್ ಸಾಕಷ್ಟು ಜನಪ್ರಿಯವಾಗಿದೆ. ಪ್ರಸ್ತುತ ರಾಜಮೌಳಿ ಅವರು 'ಬಾಹುಬಲಿ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಅಭಿನಯಿಸಿರುವುದು ಗೊತ್ತೇ ಇದೆ.

ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಕಲೆ ಕೇವಲ ಕೆಲವರಿಗಷ್ಟೇ ಸಿದ್ಧಿಸಿದೆ. ಅದರಲ್ಲೂ ರಾಜಮೌಳಿ ಅವರಂತಹ ಪ್ರತಿಭಾನ್ವಿತ ನಿರ್ದೇಶಕರು ಸದಾ ಒಂದು ಹೆಜ್ಜೆ ಮುಂದೆ ಇರುವುದರಿಂದ ಇನ್ನಷ್ಟು ಎತ್ತರಕ್ಕೆ ಏರುತ್ತಲೇ ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Ace director S.S.Rajamouli has managed to achieve a new and unique distinction now. Rajamouli’s official FB page has crossed the 500,000 mark, making him the most popular Indian director on Facebook. Rajamouli is currently busy with the shooting of ‘Baahubali’. The movie has Prabhas and Rana in the lead roles. Anushka will be seen as the heroine.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada