»   » ಕೆಎಫ್‌ಸಿಸಿ'ಗೆ ಮತ್ತೊಂದು ವರ್ಷ ಸಾ.ರಾ.ಗೋವಿಂದು ಅಧ್ಯಕ್ಷ

ಕೆಎಫ್‌ಸಿಸಿ'ಗೆ ಮತ್ತೊಂದು ವರ್ಷ ಸಾ.ರಾ.ಗೋವಿಂದು ಅಧ್ಯಕ್ಷ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಸಾ.ರಾ.ಗೋವಿಂದು ಅವರೇ ಇನ್ನೊಂದು ವರ್ಷದ ಅವಧಿಗೆ ಮುಂದುವರೆಯಲಿ ಎಂದು ಚಿತ್ರರಂಗದ ಪ್ರಮುಖರ ಗುಂಪು ತೀರ್ಮಾನ ಕೈಗೊಂಡಿದೆ.

ಒಂದು ವರ್ಷ ಕಳೆದರು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ ಎಂಬ ಕಾರಣದಿಂದ ನಿರ್ಮಾಪಕ ಭಾಮಾ ಹರೀಶ್ ಮತ್ತು ಅವರ ತಂಡ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಸಾ.ರಾ.ಗೋವಿಂದು ರವರ ಅಧಿಕಾರ ಅವಧಿ ಮುಗಿದರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ(ಮೇ 26) ರಾಕ್ ಲೈನ್ ವೆಂಕಟೇಶ್, ಕೆ ಮಂಜು, ಜಯಣ್ಣ, ನಟ ಜಗ್ಗೇಶ್ ಸೇರಿದಂತೆ ಹಲವರು ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ಸಭೆ ನಡೆಸಿ ಸಾ.ರಾ.ಗೋವಿಂದು ಅವರೇ ಇನ್ನೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯಲು ಎಂಬ ನಿರ್ಣಯ ತೆಗೆದುಕೊಂಡಿದ್ದಾರೆ.

sa-ra-govindu-to-continue-as-president-of-kfcc-for-another-one-year

ಸಭೆಯ ನಂತರ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, 'ಸಾ.ರಾ.ಗೋವಿಂದು ರವರ ಅಧ್ಯಕ್ಷತೆಯಲ್ಲಿ ಸಾಕಷ್ಟು ಉತ್ತಮ ಕೆಲಸಗಳು ಆಗಿವೆ. ಅವರಿಂದ ಇಂತಹ ಮತ್ತಷ್ಟು ಉತ್ತಮ ಕೆಲಸಗಳು ಆಗಬೇಕಿದೆ. ಆದ್ದರಿಂದ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿ' ಎಂದು ಹೇಳಿ ಚಿತ್ರರಂಗದ ವತಿಯಿಂದ ಸಾ.ರಾ.ಗೋವಿಂದು ಅವರೇ ಅಧ್ಯಕ್ಷರಾಗಿ ಮುಂದುವರೆಯಬೇಕಾಗಿದೆ ಎಂದು ಮನವಿ ಪತ್ರ ಸಲ್ಲಿಸಿದರು.

sa-ra-govindu-to-continue-as-president-of-kfcc-for-another-one-year

ಚಿತ್ರಕೃಪೆ:ಚಿತ್ರಲೋಕ.ಕಾಂ

ಚಲನಚಿತ್ರ ವಾಣಿಜ್ಯ ಮಂಡಳಿಯ ಇತರೆ ಅಂಗ ಸಂಸ್ಥೆಗಳು ಸಾ.ರಾ.ಗೋವಿಂದು ಅವರೇ ಅಧ್ಯಕ್ಷರಾಗಿ ಮುಂದುವರೆಯಲು ಬೆಂಬಲ ಸೂಚಿಸಿವೆ. ಆದರೇ ಜೂನ್ 16 ರಂದು ಸರ್ವ ಸದಸ್ಯರ ಸಭೆ ನಡೆಯಲಿದ್ದು ಅಂದು ಏನು ತೀರ್ಮಾನ ಕೈಗೊಳ್ಳಲಾಗುತ್ತದೋ ಅದರ ಆಧಾರದ ಮೇಲೆ ಸಾ.ರಾ.ಗೋವಿಂದು ರವರು ಅಧ್ಯಕ್ಷರಾಗಿ ಉಳಿಯುತ್ತಾರೋ ಇಲ್ಲವೋ ಎಂಬುದು ನಿರ್ಧಾರವಾಗಲಿದೆ.

English summary
Top film personalities requested Sa Ra Govindu to continue as President Of KFCC for another one year. Yesterday(may 26) Rockline Venkatesh urged Sa Ra Govindu to retain his post and said "the other opposed members are also a part of this KFCC family and requested Sa Ra Govindu to continue as President."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada