»   » ಕೊನೆಗೂ ಒಂದಾದ್ರು 'ಬಾಹುಬಲಿ' ಜೋಡಿ ಪ್ರಭಾಸ್-ಅನುಷ್ಕಾ ಶೆಟ್ಟಿ

ಕೊನೆಗೂ ಒಂದಾದ್ರು 'ಬಾಹುಬಲಿ' ಜೋಡಿ ಪ್ರಭಾಸ್-ಅನುಷ್ಕಾ ಶೆಟ್ಟಿ

Posted By:
Subscribe to Filmibeat Kannada

'ಬಾಹುಬಲಿ- 2' ಚಿತ್ರದಲ್ಲಿ ಮೈನವಿರೇಳಿಸುವ ಯುದ್ಧ ದೃಶ್ಯಗಳು ಮತ್ತು ಮನಮೋಹಕವಾದ ರೊಮ್ಯಾನ್ಸ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಟಾಲಿವುಡ್ ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ದೇಶದಾದ್ಯಂತದ ಸಿನಿ ಪ್ರಿಯರ ಮನಗೆದ್ದಿದ್ದಾರೆ. ಸಿನಿಮಾದಲ್ಲಿ ಈ ಜೋಡಿಯನ್ನು ನೋಡಿದ ಹಲವು ಮಂದಿ ನಿಜ ಜೀವನದಲ್ಲೂ ಜೋಡಿಯಾದ್ರೆ ಎಷ್ಟೊಂದು ಚೆನ್ನಾಗಿರುತ್ತದೆ ಅಂದುಕೊಂಡವರು ಇದ್ದಾರೆ.

ಪ್ರಭಾಸ್ ಜೊತೆ ಮದುವೆ ಸುದ್ದಿ ಹಬ್ಬಿಸಿದವನಿಗೆ ಅನುಷ್ಕಾ ಫುಲ್ ಕ್ಲಾಸ್.!

ಅಂದಹಾಗೆ 'ಬಾಹುಬಲಿ' ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಬಗೆಗಿನ ಲೇಟೆಸ್ಟ್ ಸುದ್ದಿ ಏನಂದ್ರೆ ಈ ಜೋಡಿ ಮತ್ತೆ ತೆರೆಮೇಲೆ ಒಂದಾಗುತ್ತಿದೆಯಂತೆ. ಈಗಾಗಲೇ ದೇಶದಾದ್ಯಂತ ಸೆನ್ಷೇಷನ್ ಕ್ರಿಯೇಟ್ ಮಾಡಿರುವ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರೇ ನಾಯಕಿ ಆಗಿ ನಟಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ.

Saaho: After Baahubali, Prabhas and Anushka Shetty team up once again

ಈ ಹಿಂದೆ 'ಸಾಹೋ' ಚಿತ್ರದಲ್ಲಿ ಪ್ರಭಾಸ್ ಗೆ ಜೊತೆಯಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್, ದಿಶಾ ಪಟಾನಿ, ಶ್ರದ್ಧಾ ಕಪೂರ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಎಲ್ಲಾ ಅಂತೆ ಕಂತೆಗಳಿಗೆ ಈಗ ಬ್ರೇಕ್ ಬಿದ್ದಿದೆ. ಅಲ್ಲದೇ ಅನುಷ್ಕಾ ಶೆಟ್ಟಿ ರವರೇ ಈ ಚಿತ್ರಕ್ಕೂ ಪ್ರಭಾಸ್ ಗೆ ಜೊತೆಯಾಗಲಿದ್ದಾರೆ ಎಂಬುದು ತಿಳಿದಿದೆ. ಆದರೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿಯೊಂದೆ ಹೊರಬೀಳಬೇಕಿದೆ.

150 ಕೋಟಿ ರೂಗಿಂತ ಅಧಿಕ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿರುವ 'ಸಾಹೋ' ಚಿತ್ರ ಈಗಾಗಲೇ ಹೈ ವೋಲ್ಟೇಜ್ ಕ್ರಿಯೇಟ್ ಮಾಡಿದ್ದು, ತೆಲಗು, ತಮಿಳು, ಹಿಂದಿಯಲ್ಲಿಯೂ ನಿರ್ಮಾಣ ಆಗುತ್ತಿದೆ. ಈ ಚಿತ್ರಕ್ಕೆ ಸೂಜಿತ್ ನಿರ್ದೇಶನವಿದೆ. ಚಿತ್ರದಲ್ಲಿ ಖಳನಾಯಕನಾಗಿ ಬಾಲಿವುಡ್ ನ ನೀಲ್ ನಿತಿನ್ ಮುಕೇಶ್ ಬಣ್ಣ ಹಚ್ಚಲಿದ್ದಾರೆ.

English summary
Baahubali pair Prabhas and Anushka Shetty are reuniting for Saaho.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada