»   » ಬೆಳ್ಳಿಪರದೆ ಮೇಲೆ ನೋಡಿ ಸಚಿನ್ ಜತೆ ವೆಂಕಿ ಬ್ಯಾಟಿಂಗ್

ಬೆಳ್ಳಿಪರದೆ ಮೇಲೆ ನೋಡಿ ಸಚಿನ್ ಜತೆ ವೆಂಕಿ ಬ್ಯಾಟಿಂಗ್

Posted By:
Subscribe to Filmibeat Kannada

ಸಚಿನ್ ಹಾಗೂ ವೆಂಕಟೇಶ್ ಪ್ರಸಾದ್ ಬ್ಯಾಟ್ ಹಿಡಿದು ಮತ್ತೆ ಗ್ರೌಂಡಿಗೆ ಇಳಿಯುತ್ತಿದ್ದಾರೆ. ಇಬ್ಬರೂ ಮತ್ತೆ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ. ಶುಕ್ರವಾರದಿಂದಲೇ (ಜು.11) ಇವರಿಬ್ಬರ ಆಟವನ್ನು ಬೃಹತ್ ಪರದೆ ಮೇಲೆ ನೋಡಿ ಆನಂದಿಸಬಹುದು.

ಅಂದಹಾಗೆ ಈ ಸಚಿನ್ ತೆಂಡೂಲ್ಕರ್ ಅಲ್ಲ. ಆದರೆ ವೆಂಕಟೇಶ್ ಪ್ರಸಾದ್ ಮಾತ್ರ ವೆಂಕಟೇಶ್ ಪ್ರಸಾದ್ ಅವರೆ. ಚಿತ್ರದ ಹೆಸರೇ 'ಸಚಿನ್ ತೆಂಡೂಲ್ಕರ್ ಅಲ್ಲ'. ದ್ವಿಭಾಷಾ ಚಿತ್ರವಾಗಿರುವ ಈ ಸಿನಿಮಾ ಏಕಕಾಲಕ್ಕೆ ಕನ್ನಡ, ತೆಲುಗಿನಲ್ಲಿ ನಿರ್ಮಾಣವಾಗಿದೆ.

ವೆಂಕಟೇಶ್ ಪ್ರಸಾದ್ ಅವರ ಜನಪ್ರಿಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಬಣ್ಣಹಚ್ಚಿಲ್ಲ. ಚಿತ್ರಕಥೆಗೆ ಪೂರಕವಾಗಿರುವ ಕಾರಣ ಅವರನ್ನು ಬಳಸಿಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕರು.

Sachin Tendulkar Alla releases on 11th July

ಇನ್ನು ಚಿತ್ರದ ಕಥೆಯೂ ಇಂಟರೆಸ್ಟಿಂಗ್ ಆಗಿದೆ. ಅದೇನೆಂದರೆ...ಸಚಿನ್ ತೆಂಡೂಲ್ಕರ್ ಅವರಂತೆ ತಾನೂ ಒಬ್ಬ ಮಹಾನ್ ಕ್ರಿಕೆಟಿಗನಾಗಬೇಕೆಂದು ಕನಸು ಕಾಣುವ ಹುಡುಗನೊಬ್ಬನ ಕಥೆ ಇದು. ಈ ಚಿತ್ರದಲ್ಲಿ ವೆಂಕಟೇಶ್ ಪ್ರಸಾದ್ ಕೋಚ್ ಆಗಿ ಕಾಣಿಸಲಿದ್ದಾರೆ.

ಮೋಹನ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಅವರು ಒಳ್ಳೆಯ ಸಂದೇಶ ನೀಡಲು ಹೊರಟಿದ್ದಾರೆ. ಹಾಗಾಗಿ ಚಿತ್ರದಲ್ಲಿ ಬಣ್ಣ ಹಚ್ಚಲು ಒಪ್ಪಿಕೊಂಡೆ ಎನ್ನುತ್ತಾರೆ ವೆಂಕಿ.

ಇನ್ನು ಚಿತ್ರದಲ್ಲಿ ಸುಧಾರಾಣಿ ಅವರು ಪ್ರಿನ್ಸಿಪಾಲ್ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಚಿತ್ರ ಕೇವಲ ಮಕ್ಕಳಿಗಷ್ಟೇ ಅಲ್ಲ. ದೊಡ್ಡವರು ನೋಡಬಹುದು. ಇದು ಮಕ್ಕಳ ಚಿತ್ರ ಎಂದುಕೊಂಡರೆ ತಪ್ಪಾಗುತ್ತದೆ ಎನ್ನುತ್ತಾರೆ ಸುಧಾರಾಣಿ.

ಎ.ಎನ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಎನ್.ಗಂಗಾಧರ್ ಅವರು ನಿರ್ಮಿಸಿರುವ 'ಸಚಿನ್' (ತೆಂಡುಲ್ಕರ್ ಅಲ್ಲ) ಚಿತ್ರ ಇದಾಗಿದೆ. ಎಸ್.ಮೋಹನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪ್ರಸಾದ್ ಬಾಬು ಅವರ ಛಾಯಾಗ್ರಹಣವಿದೆ.

ಶಿವು ಸಂಕಲನ, ರಾಜೇಶ್‍ರಾಮನಾಥ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಎಸ್.ಮೋಹನ್, ನಾಗೇಂದ್ರಪ್ರಸಾದ್, ಆನಂದ್ ಬರೆದಿದ್ದಾರೆ. ಖ್ಯಾತ ನಟಿ ಸುಹಾಸಿನಿ, ಸುಧಾರಾಣಿ, ಪದ್ಮವಾಸಂತಿ, ಮಾಸ್ಟರ್ ಸ್ನೇಹಿತ್, ಶೈಲಜಾಜೋಶಿ, ಶ್ರೀನಿವಾಸಪ್ರಭು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Team India former cricketer Venkatesh Prasad, who is making his cinematic debut in upcoming Kannada-Telugu bilingual 'Sachin...Tendulkar Alla' releases on 11th July all over Karnataka. Venki will be essaying an important role of a coach, says its director S. Mohan.
Please Wait while comments are loading...