For Quick Alerts
  ALLOW NOTIFICATIONS  
  For Daily Alerts

  ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಸಚಿನ್ ತೆಂಡೂಲ್ಕರ್ ಚಾಲನೆ

  By Rajendra
  |

  ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹಲವು ವಿಶೇಷಗಳಿಂದ ಕೂಡಿದೆ. ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ನಾಲ್ಕನೇ ಆವೃತ್ತಿಯನ್ನು ಇನ್ನಷ್ಟು ವರ್ಣರಂಜಿತವಾಗಿ ನಡೆಸಲು ಉದ್ದೇಶಿಸಲಾಗಿದೆ. ನಾಲ್ಕನೆ ಆವೃತ್ತಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶುಕ್ರವಾರ (ಡಿಸೆಂಬರ್ 20) ಚಾಲನೆ ನೀಡಿದರು.

  ಈ ವರ್ಣರಂಜಿತ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ವಿವಿಧ ಭಾಷೆಯ ಚಿತ್ರರಂಗದ 200ಕ್ಕೂ ಹೆಚ್ಚು ಕಲಾವಿದರು ಉಪಸ್ಥಿತರಿದ್ದರು. ಮುಂಬೈನ ಗ್ರ್ಯಾಂಡ್ ಹ್ಯಾತ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮಕ್ಕೆ ಹಲವಾರು ತಾರೆಗಳು ಇನ್ನಷ್ಟು ಬಣ್ಣ ತುಂಬಿದರು.

  ತಮಿಳು ನಟ ಧನುಷ್ ಸೇರಿದಂತೆ ಕಿಚ್ಚ ಸುದೀಪ್, ಸೋನು ಸೂದ್, ಜೆನಿಲಿಯಾ ಹಾಗೂ ಅವರ ಪತಿ ರಿತೇಶ್ ದೇಶ್ ಮುಖ್, ಸುನಿಲ್ ಶೆಟ್ಟಿ, ಮೇಘನಾ ನಾಯ್ಡು, ಚಾರ್ಮಿ ಕೌರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  'ಕಾಮಿಡಿ ನೈಟ್ಸ್' ಕಾರ್ಯಕ್ರಮದ ಕಪಿಲ್ ಶರ್ಮಾ ಹಾಗೂ ಗಾಯಕಿ ಉಷಾ ಉಥುಪ್ ಕಾರ್ಯಕ್ರವನ್ನು ನಿರೂಪಿಸಿದರು. ಈ ಬಾರಿಯೂ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಸುದೀಪ್ ನಾಯಕತ್ವ ವಹಿಸುತ್ತಿದ್ದಾರೆ.

  ಎಲ್ಲವೂ ಸುಸೂತ್ರವಾಗಿ ನಡೆದರೆ 2014ರ ಜನವರಿ ಕೊನೆಗೆ ಆಟ ಶುರುವಾಗಲಿದೆ. ಫೈನಲ್ ಮ್ಯಾಚ್ ಫೆಬ್ರವರಿ ಕೊನೆಗೆ ನಡೆಯಲಿದೆ. ಇದೊಂದು ನಾನ್ ಪ್ರೊಫೆಷನಲ್ ಪುರುಷರ ಕ್ರಿಕೆಟ್ ಮ್ಯಾಚ್ ಅನ್ನಿಸಿಕೊಂಡಿದ್ದರೂ, ನಾವೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ತಾರೆಗಳು ಆಡಿದ್ದಾರೆ. ಪಕ್ಕಾ ಪ್ರೊಫೆಷನಲ್ ಆಟ ಅಲ್ಲದಿದ್ದರೂ ಒಂದು ಮಟ್ಟಕ್ಕೆ ಅಭಿಮಾನಿಗಳನ್ನು ರಂಜಿಸಿದ್ದಾರೆ.

  2011ರಲ್ಲಿ ಆರಂಭವಾದ ಸಿಸಿಎಲ್ ಲೀಗ್ ಗಳು ಬರುಬರುತ್ತಾ ಜನಪ್ರಿಯತೆ ಗಳಿಸಿಕೊಂಡವು. ಐಸಿಸಿ ಕ್ರಿಕೆಟ್ ಮ್ಯಾಚ್ ಗಳಿಗೂ ಇದರಿಂದ ಕೊಂಚ ಹೊಡೆತಬಿತ್ತು. ಸಿಸಿಎಲ್ ಮ್ಯಾಚ್ ಗಳಿಗೆ ಮಾಧ್ಯಮಗಳು ಸಾಕಷ್ಟು ಪ್ರಚಾರ ಕೊಡುವ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಿತು.

  ಇದುವರೆಗೂ ನಡೆದ ಮೂರು ಆವೃತ್ತಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಫೈನಲ್ ಹಂತ ತಲುಪಿರುವುದು ವಿಶೇಷ. 2013ರಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಮಣ್ಣುಮುಕ್ಕಿಸಿ ಸಿಸಿಎಲ್ ಕಪ್ ತನ್ನದಾಗಿಸಿಕೊಂಡಿದೆ. (ಒನ್ಇಂಡಿಯಾ ಕನ್ನಡ)

  English summary
  Celebrity Cricket League is getting bigger and better with every edition. The event is getting ready for the fourth season in 2014. The cricket tournament was officially flagged off by none other than legend Sachin Tendulkar on Friday evening (December 20).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X