For Quick Alerts
  ALLOW NOTIFICATIONS  
  For Daily Alerts

  ಎಲ್ಲಿಗೆ ಬಂತು ಕ್ರಾಂತಿ ಸಿನಿಮಾ ಕೆಲಸಗಳು? ಬಿಡುಗಡೆ ಯಾವಾಗ? ಸಮಾಧಾನ ಮೂಡಿಸಿತು ಸಾಧು ಕೊಟ್ಟ ಅಪ್ಡೇಟ್

  |

  ಎಲ್ಲಾ ಯೋಜನೆ ಪ್ರಕಾರವೇ ನಡೆದಿದ್ದರೆ ಈ ಸಮಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 55ನೇ ಚಿತ್ರ ಕ್ರಾಂತಿ ಚಿತ್ರಮಂದಿರಗಳಿಗೆ ಲಗ್ಗೆ ಇಡಬೇಕಿತ್ತು ಅಥವಾ ಚಿತ್ರದ ಆಡಿಯೋ ಬಿಡುಗಡೆಯಾದರೂ ನಡೆದಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಕ್ರಾಂತಿ ಬಿಡುಗಡೆ ವಿಳಂಬವಾಗುತ್ತಲೇ ಇದೆ.

  ಯಜಮಾನ ಬಳಿಕ ಮತ್ತೊಮ್ಮೆ ಹರಿಕೃಷ್ಣ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, ಈ ಬಾರಿ ದರ್ಶನ್ ಹಾಗೂ ರಚಿತಾ ರಾಮ್ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಯಜಮಾನ ಚಿತ್ರಕ್ಕೆ ಬಂಡವಾಳ ಹೂಡಿದ್ದ ಶೈಲಜಾ ನಾಗ್ ಹಾಗೂ ಬಿ ಸುರೇಶ ಕ್ರಾಂತಿ ಸಿನಿಮಾಗೂ ಸಹ ಬಂಡವಾಳ ಹೂಡಿದ್ದಾರೆ.

  ಇನ್ನು ದರ್ಶನ್ ಅಭಿನಯದ ಚಿತ್ರ ತೆರೆಕಂಡು ಒಂದೂವರೆ ವರ್ಷವೇ ಕಳೆದಿದ್ದು ಇನ್ನೂ ಸಹ ಅವರ ಮುಂದಿನ ಚಿತ್ರವಾದ ಕ್ರಾಂತಿ ಬಿಡುಗಡೆ ಕುರಿತಾದ ಯಾವುದೇ ಮಾಹಿತಿ ಸಿಗದಿದ್ದ ಕಾರಣ ದರ್ಶನ್ ಅಭಿಮಾನಿಗಳು ಭಾರಿ ನಿರಾಸೆಗೆ ಒಳಗಾಗಿದ್ದರು ಹಾಗೂ ಆಕ್ರೋಶ ಹೊರಹಾಕಿದ್ದರು. ಚಿತ್ರದ ಕುರಿತು ಯಾವುದೇ ಮಾಹಿತಿ ಲಭ್ಯವಿರದ ಸಂದರ್ಭದಲ್ಲಿ ಸದ್ಯ ಸಾಧುಕೋಕಿಲಾ ಹಂಚಿಕೊಂಡಿರುವ ಟ್ವೀಟ್ ದರ್ಶನ್ ಅಭಿಮಾನಿಗಳಲ್ಲಿ ತುಸು ಸಮಾಧಾನವನ್ನು ತಂದಿದೆ.

   ಡಬ್ಬಿಂಗ್ ಅಪ್ಡೇಟ್ ನೀಡಿದ ಸಾಧುಕೋಕಿಲಾ

  ಡಬ್ಬಿಂಗ್ ಅಪ್ಡೇಟ್ ನೀಡಿದ ಸಾಧುಕೋಕಿಲಾ

  ಇಂದು ( ಅಕ್ಟೋಬರ್ 27 ) ಮಧ್ಯಾಹ್ನ ಸಾಧುಕೋಕಿಲಾ ಕ್ರಾಂತಿ ಚಿತ್ರದ ಡಬ್ಬಿಂಗ್ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಕ್ರಾಂತಿ ಚಿತ್ರದ ಡಬ್ಬಿಂಗ್ ಮಾಡಲು ಇದೇ ಮೊದಲ ಬಾರಿಗೆ ನಟ ರವಿಚಂದ್ರನ್ ನಮ್ಮ ಸ್ಟುಡಿಯೋಗೆ ಆಗಮಿಸಿದ್ದಾರೆ ಹಾಗೂ ಅವರ ಜತೆ ಹರಿಕೃಷ್ಣ ಕೂಡ ಇದ್ದಾರೆ ಎಂದು ಬರೆದುಕೊಂಡು ಮೂವರು ಜತೆಗಿರುವ ಫೋಟೋವನ್ನು ಸಾಧುಕೋಕಿಲಾ ಹಂಚಿಕೊಂಡಿದ್ದಾರೆ.

   ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ದರ್ಶನ್ ಅಭಿಮಾನಿಗಳು

  ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ದರ್ಶನ್ ಅಭಿಮಾನಿಗಳು

  ಇನ್ನು ಕ್ರಾಂತಿ ಚಿತ್ರದ ಮಾಹಿತಿ ಹಂಚಿಕೊಳ್ಳದ ಚಿತ್ರತಂಡದ ವಿರುದ್ಧ ಗರಂ ಆಗಿದ್ದ ದರ್ಶನ್ ಅಭಿಮಾನಿಗಳು ಸಾಧುಕೋಕಿಲಾ ಡಬ್ಬಿಂಗ್ ಕುರಿತು ಚಿತ್ರವನ್ನು ಹಂಚಿಕೊಳ್ಳುತ್ತಿದ್ದಂತೆ ಪ್ರತಿಕ್ರಿಯಿಸಿದ್ದಾರೆ. ಚಿತ್ರದ ಕೆಲಸಗಳು ಎಲ್ಲಿಯವರೆಗೂ ಬಂದಿವೆ, ಚಿತ್ರ ಬಿಡುಗಡೆ ಯಾವಾಗ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಲು ಹೇಳಿ ಎಂದು ಸಾಧು ಕೋಕಿಲ ಬಳಿ ಮನವಿ ಮಾಡಿದ್ದಾರೆ. ಇನ್ನೂ ಕೆಲ ಅಭಿಮಾನಿಗಳಿಗೆ ಸಾಧುಕೋಕಿಲ ನೀಡಿರುವ ಈ ಮಾಹಿತಿ ಸಮಾಧಾನ ತಂದಿದೆ. ಚಿತ್ರದ ಡಬ್ಬಿಂಗ್ ಕೆಲಸಗಳು ಶುರುವಾಗಿದೆ ಅಂದ್ರೆ ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ಮುಕ್ತಾಯವಾಗಿದೆ ಎಂದರ್ಥ, ನಿರ್ದೇಶಕ ಹರಿಕೃಷ್ಣ ಕೂಡ ಡಬ್ಬಿಂಗ್ ಕೆಲಸಗಳಲ್ಲಿ ನಿರತರಾಗಿರುವುದರಿಂದ ಆದಷ್ಟು ಬೇಗ ಚಿತ್ರ ಬಿಡುಗಡೆಯಾಗುವುದು ಖಚಿತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

   ಚಿತ್ರದಲ್ಲಿ ಇಬ್ಬರು ನಾಯಕಿಯರು?

  ಚಿತ್ರದಲ್ಲಿ ಇಬ್ಬರು ನಾಯಕಿಯರು?

  ಇನ್ನು ಕೆಲ ದಿನಗಳ ಹಿಂದಷ್ಟೇ ಕ್ರಾಂತಿ ಚಿತ್ರದ ಚಿತ್ರೀಕರಣದ ಸ್ಥಳದ ಫೋಟೋವೊಂದು ಲೀಕ್ ಆಗಿತ್ತು. ಈ ಚಿತ್ರದಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಜೊತೆ ನಟಿ ಸಂಯುಕ್ತ ಹೊರನಾಡ್ ಕೂಡ ಇದ್ದದ್ದು ಚರ್ಚೆಗೆ ಗ್ರಾಸವಾಗಿತ್ತು. ಚಿತ್ರದಲ್ಲಿ ರಚಿತಾ ರಾಮ್ ಅಲ್ಲದೆ ಮತ್ತೋರ್ವ ನಾಯಕಿ ಇದ್ದಾರಾ ಎಂಬ ಪ್ರಶ್ನೆ ಅಭಿಮಾನಿ ವಲಯದಲ್ಲಿ ಮೂಡಿತ್ತು.

   ಈ ವರ್ಷವಿಲ್ಲ ದರ್ಶನ್ ಸಿನಿಮಾ!

  ಈ ವರ್ಷವಿಲ್ಲ ದರ್ಶನ್ ಸಿನಿಮಾ!

  ಮೊದಲೇ ಹೇಳಿದ ಹಾಗೆ ರಾಬರ್ಟ್ ಬಳಿಕ ದರ್ಶನ್ ಅಭಿನಯದ ಯಾವುದೇ ಚಿತ್ರ ಕೂಡ ತೆರೆ ಕಂಡಿಲ್ಲ. ರಾಬರ್ಟ್ ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿತ್ತು. ಸದ್ಯ ಈಗಾಗಲೇ ಒಂದೂವರೆ ವರ್ಷ ಕಳೆದಿದ್ದು, ವರ್ಷದಲ್ಲಿ ನವೆಂಬರ್ ಹಾಗೂ ಡಿಸೆಂಬರ್ 2 ತಿಂಗಳುಗಳು ಬಾಕಿ ಉಳಿದಿವೆ. ಸದ್ಯ ಕ್ರಾಂತಿ ಚಿತ್ರದ ಮತ್ತೊಂದು ಟೀಸರ್, ಟ್ರೈಲರ್ ಆಗಲಿ ಅಥವಾ ಆಡಿಯೋ ಆಗಲಿ ಇನ್ನೂ ಸಹ ಬಿಡುಗಡೆಗೊಂಡಿಲ್ಲ. ಹೀಗಿರುವಾಗ ಇನ್ನುಳಿದ 2 ತಿಂಗಳುಗಳಲ್ಲಿ ಕ್ರಾಂತಿ ತೆರೆಗೆ ಬರುವುದು ಅನುಮಾನವೇ ಸರಿ. ಈ ಮೂಲಕ ಕ್ರಾಂತಿ ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ತೆರೆ ಬರುವ ಸಾಧ್ಯತೆಗಳು ಇವೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

  English summary
  Sadhu gives Darshan Kranti cinema update by sharing Ravichandran's dubbing work photo . Read on
  Thursday, October 27, 2022, 18:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X