»   » ಸಾಧು ಕೋಕಿಲಾಗೆ ತಲೆಮಾಂಸ ಅಂದ್ರೆ ಪ್ರಾಣ

ಸಾಧು ಕೋಕಿಲಾಗೆ ತಲೆಮಾಂಸ ಅಂದ್ರೆ ಪ್ರಾಣ

By: ಜೀವನರಸಿಕ
Subscribe to Filmibeat Kannada

ಕನ್ನಡದಲ್ಲಿ ಸಾಧು ಕೋಕಿಲಾ ಕಾಮಿಡಿ ಅಂದ್ರೆ ಎಲ್ಲರಿಗೂ ಗೊತ್ತು. ಆದರೆ ಸಾಧು ಮಹಾರಾಜ್ ಗೆ ಏನಿಷ್ಟ ಅಂತ ಗೊತ್ತಾ. ಹೌದು ಸಾಧು ಕೋಕಿಲಾಗೆ ಈಗೀಗ ತಲೆಮಾಂಸ ಅಂದ್ರೆ ತುಂಬಾನೇ ಇಷ್ಟವಂತೆ, ಇದಕ್ಕೆ ಕಾರಣವೂ ಇದೆ.

ಈ ಕಾಮಿಡಿ ಕಿಲಾಡಿಗೆ ತಲೆಮಾಂಸ ಇಷ್ಟವಾಗಿರೋದು ಮಗನ ಕಾರಣದಿಂದ. ಸಾಧು ಪುತ್ರ ಈಗ ಸಿನಿಮಾ ಡೈರೆಕ್ಟ್ ಮಾಡೋ ಪ್ಲಾನ್ ನಲ್ಲಿದ್ದಾರೆ. ಅದಕ್ಕಾಗೀನೇ ಒಂದು ಕ್ಯಾಚಿ ಟೈಟಲ್ ಸೆಲೆಕ್ಟ್ ಮಾಡಿದ್ದಾರೆ. ಆ ಟೈಟಲ್ಲೇ 'ತಲೆಮಾಂಸ'. ಇತ್ತೀಚೆಗೆ ಸುಮ್ನೆ ಮಾತಾಡಿ ತಲೆ ತಿನ್ನೋರನ್ನ ತಲೆಮಾಂಸ ಅಂತ ಕರೆಯೋದು ಫೇಮಸ್. [ಕಾಮಿಡಿ ಸಿನಿಮಾಗಳೇ ಕಾಣ್ತಿಲ್ಲ ಗಾಂಧಿನಗರದಲ್ಲಿ]

Sadhu Kokila

ಇದೇ ಟೈಟಲ್ ಈಗ ವಾಣಿಜ್ಯ ಮಂಡಳಿಯಲ್ಲಿ ಸುರಾಗ್ ಫಿಲ್ಮ್ಸ್ ಪಡೆದುಕೊಂಡಿದೆ. ಸದ್ಯ ಸಾಧು ಕೋಕಿಲ ಮಗನನ್ನ ಮ್ಯೂಸಿಕ್ ಡೈರೆಕ್ಟರಾಗಿ ಲಾಂಚ್ ಮಾಡೋ ಪ್ಲಾನ್ ನಲ್ಲಿದ್ರು. ಆದರೀಗ ತನ್ನ ಹಾಗೇನೇ ಡೈರೆಕ್ಟರಾಗಿ ಮಗನನ್ನ ಸ್ಯಾಂಡಲ್ ವುಡ್ ಗೆ ತರೋ ಪ್ಲಾನ್ ಮಾಡಿದ್ದಾರೆ ಅನ್ಸುತ್ತೆ.

ಅದಕ್ಕಾಗೀನೇ ಈ 'ತಲೆಮಾಂಸ' ಟೈಟಲ್ ರಿಜಿಸ್ಟರ್ ಆಗಿರೋದು. ಸಾಧು ಕೋಕಿಲ ಸಿನಿಮಾದಲ್ಲಿ 'ತಲೆಮಾಂಸ' ಆಗಿದ್ದುಕೊಂಡೇ ಮಗನ ಡೈರೆಕ್ಷನ್ ನಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಕುತೂಹಲ ಎಲ್ಲರನ್ನ ಕಾಡ್ತಿದೆ.

English summary
Kannada movies comedy king Sadhu Kokila upcoming movie titled as Talemamsa. Sadhu Kokila son is all set to direct this movie. The title has registered in Karnataka Film Chamber of Commerce. 
Please Wait while comments are loading...