»   » 'ಪಿ ಕೆ' ಅವತಾರದಲ್ಲಿ ಎಂಟ್ರಿ ಕೊಟ್ಟ ಸಾಧು ಮಹಾರಾಜ್

'ಪಿ ಕೆ' ಅವತಾರದಲ್ಲಿ ಎಂಟ್ರಿ ಕೊಟ್ಟ ಸಾಧು ಮಹಾರಾಜ್

Posted By:
Subscribe to Filmibeat Kannada

'ಪಿ ಕೆ' ಸಿನಿಮಾ ಅಂತ ಹೇಳಿದ ತಕ್ಷಣ ಆಮೀರ್ ಖಾನ್ ರವರ ಪೋಸ್ಟರ್ ನೆನಪಿಗೆ ಬರುತ್ತೆ. ಈಗ ಕಾಮಿಡಿ ಕಿಂಗ್ ಸಾಧು ಕೋಕಿಲ ಅದೇ ಗೆಟಪ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ, ಸಾಧು ಈ ಅವತಾರಕ್ಕೆ ಕಾರಣವಾಗಿರುವುದು 'ಧೈರ್ಯಂ' ಸಿನಿಮಾ.

ಥ್ರಿಲ್ ನೀಡುವ ಅಜೇಯ್ ರಾವ್ ಅಭಿನಯದ 'ಧೈರ್ಯಂ' ಟ್ರೈಲರ್, ನೀವೂ ನೋಡಿ..

ಅಜಯ್ ರಾವ್ ನಟನೆಯ 'ಧೈರ್ಯಂ' ಸಿನಿಮಾದ ಬಗ್ಗೆ ಅನೇಕ ಸಂಗತಿಗಳನ್ನು ಈಗಾಗಲೇ 'ಫಿಲ್ಮಿ ಬೀಟ್ ಕನ್ನಡ'ದಲ್ಲಿ ಓದಿರುತ್ತೀರಿ. ಅದೇ ರೀತಿ ಈಗ ಸಿನಿಮಾದಲ್ಲಿ ಸಾಧು ಅವರ ಪಾತ್ರ ಎಲ್ಲರ ಗಮನ ಸೆಳೆಯುತ್ತಿದೆ. 'ಪಿ ಕೆ' ಚಿತ್ರದಲ್ಲಿ ಆಮೀರ್ ಕಾಣಿಸಿಕೊಂಡಿದ್ದ ರೀತಿಯಲ್ಲಿ ಸಾಧು ಸ್ಲೇಟ್ ಹಿಡಿದು ನಿಂತಿದ್ದಾರೆ. ಜೊತೆಗೆ ಅದರಲ್ಲಿ 'ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ' ಅಂತ ಬರೆದಿದ್ದು, ಸಾಧು ಅವರ ಪಾತ್ರದ ಬಗ್ಗೆ ಕುತುಹಲ ಮೂಡಿಸಿದೆ.

Sadhu Kokila 'P K' look in 'Dhairyam' movie

ಅಂದಹಾಗೆ, 'ಧೈರ್ಯಂ' ಸಿನಿಮಾವನ್ನು 'ಮಳೆ' ಖ್ಯಾತಿಯ ಶಿವ ತೇಜಸ್ ನಿರ್ದೇಶನ ಮಾಡುತ್ತಿದ್ದು, ಡಾ.ಕೆ .ರಾಜು ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿದೆ. ಸದ್ಯ ಸೆನ್ಸಾರ್ ಹಂತದಲ್ಲಿರುವ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

English summary
Check out Kannada Actor Sadhu Kokila's 'PK' look in 'Dhairyam' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada