»   » ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ಸಾಧು ಕೋಕಿಲ ಪುತ್ರ ಸುರಾಗ್

ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ಸಾಧು ಕೋಕಿಲ ಪುತ್ರ ಸುರಾಗ್

Posted By:
Subscribe to Filmibeat Kannada
sadhu kokila son suraag entry as a music director in Kannada film industry

ಸಾಧು ಕೋಕಿಲ ಒಬ್ಬ ಸಂಗೀತ ನಿರ್ದೇಶಕನಾಗಿ ಮತ್ತು ಹಾಸ್ಯ ನಟನಾಗಿ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತ. ಅದೇ ರೀತಿ ಇದೀಗ ಸಾಧು ಕೋಕಿಲ ಪುತ್ರ ಕೂಡ ಅಪ್ಪನ ಹಾದಿಯಂತೆ ನಡೆಯುತ್ತಿದ್ದಾರೆ. ಸಾಧು ಪುತ್ರ ಸುರಾಗ್ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿದ ಹಾಸ್ಯ ನಟ ಸಾಧು ಕೋಕಿಲ

ಮಹೇಶ್ ಬಾಬು ನಿರ್ದೇಶನದ 'ಅತಿರಥ' ಚಿತ್ರದ ಮೂಲಕ ಸುರಾಗ್ ಕನ್ನಡ ಚಿತ್ರರಂಗಕ್ಕೆ ಪರಿಚಿತವಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಸಂಗೀತ ನಿರ್ದೇಶಕನಾಗಿ ಸುರಾಕ್ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದ ಸಂಗೀತದಲ್ಲಿ ದೊಡ್ಡ ಆಸಕ್ತಿ ಹೊಂದಿದ್ದ ಸುರಾಗ್ ಈಗಾಗಲೇ ಸಾಧು ಸಂಗೀತ ನೀಡಿದ್ದ ಅನೇಕ ಚಿತ್ರಗಳಿಗೆ ಪ್ರೋಗ್ರಾಮಿಂಗ್ ಕೆಲಸ ಮಾಡಿದ್ದಾರೆ.

Sadhu Kokila son Suraag debut in 'Athiratha' movie

ಈ ಹಿಂದೆ ನಾಗಶೇಖರ್ ನಿರ್ದೇಶನದ 'ಗಡಿಯಾರ' ಚಿತ್ರದ ಮೂಲಕ ಸುರಾಗ್ ಸಂಗೀತ ಯಾತ್ರೆ ಶುರು ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ. ಆದರೆ ಈಗ 'ಅತಿರಥ' ಚಿತ್ರದ ಮೂಲಕ ಮತ್ತೊಬ್ಬ ಪ್ರತಿಭಾವಂತ ಸಂಗೀತ ನಿರ್ದೇಶಕ ಸುರಾಗ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಅತಿರಥ' ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಟ 'ಆ ದಿನಗಳು' ಚೇತನ್ ಮತ್ತು ಲತಾ ಹೆಗಡೆ ಚಿತ್ರದಲ್ಲಿ ನಟಿಸಿದ್ದಾರೆ.

English summary
kannada music director and comedy actor Sadhu Kokila son Suraag debut as a music director in 'Athiratha' kannada movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada