»   » ಮತ್ತೆ ಅಭಿಮಾನದ ಹೂಮಳೆಯಲ್ಲಿ ಮುಳುಗಿದ 'ಸಾಹಸಸಿಂಹ'!

ಮತ್ತೆ ಅಭಿಮಾನದ ಹೂಮಳೆಯಲ್ಲಿ ಮುಳುಗಿದ 'ಸಾಹಸಸಿಂಹ'!

By: ಕುಸುಮ
Subscribe to Filmibeat Kannada

ಕಳೆದ ಶುಕ್ರವಾರ ತೆರೆಕಂಡ 'ಸಾಹಸಸಿಂಹ' ಚಿತ್ರ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳಿಂದ ತುಂಬಿ ಹೋಗಿ ಯಶಸ್ವಿ ಪ್ರದರ್ಶನವಾಗುತ್ತಿರೋ ಸುದ್ದಿ ಮತ್ತು ಅಬಿಮಾನಿಗಳ ಕ್ರೇಜ್ನ ವಿಷಯವನ್ನು ನಿಮಗೆ ಹೇಳಿದ್ವಿ. ರಾಜಾಜಿನಗರದ ವಿಷ್ಣು ಅಭಿಮಾನಿಗಳು ಸಾಹಸಸಿಂಹ ಚಿತ್ರವನ್ನು 33 ವರ್ಷಗಳ ನಂತರ ಮತ್ತೆ ರೀರಿಲೀಸ್ನ ಹಬ್ಬವನ್ನು ಗ್ರ್ಯಾಂಡಾಗಿ ಆಚರಿಸಿದ್ದಾರೆ.

30 ವರ್ಷಗಳ ನಂತರ ಖೈದಿ ಸಿನಿಮಾ ರಿರಿಲೀಸ್ ಆದಾಗ ವಿಷ್ಣು ಅಭಿಮಾನಿಗಳು ಅತ್ಯಂತ ದೊಡ್ಡ ಹೂವಿನ ಹಾರವನ್ನು ತಮ್ಮ ನೆಚ್ಚಿನ ನಟನಿಗೆ ಹಾಕಿ ಲಿಮ್ಕಾ ದಾಖಲೆ ಬರೆದು ಅಭಿಮಾನ ಮೆರೆದಿದ್ದರು. ಅದೇ ಚಿತ್ರವನ್ನು ನೆನಪಿಸುವಂತೆ ಈಗ ಮತ್ತೆ ಹೂವಿನ ದೊಡ್ಡ ದೊಡ್ಡ ಹಾರವನ್ನು ವಿಷ್ಣುವರ್ಧನ್ ಅವರ 'ಸಾಹಸಸಿಂಹ' ಚಿತ್ರದ ಕಟೌಟ್ಗೆ ಹಾಕುವ ಮೂಲಕ ಮತ್ತೊಮ್ಮೆ ಹಳೆಯ ದಾಖಲೆಯನ್ನು ನೆನಪಿಸಿದ್ದಾರೆ. [ಕೋಡಿಶ್ರೀಗಳಿಗೆ ಅರಿವಿತ್ತೇ ವಿಷ್ಣುವರ್ಧನ್ ಸಾವಿನ ಮುನ್ಸೂಚನೆ?]

Sahasa Simha Vishnuvardhan still in the heart of fans

ಚಂದನವನ ಕಂಡ ಚೆಂದದ ನಾಯಕ ವಿಷ್ಣುವರ್ಧನ್ ಅವರ 'ಸಾಹಸಸಿಂಹ'ನಿಗೆ ಅಭಿಮಾನಿಗಳು ತೋರಿಸುತ್ತಿರುವ ಅಭಿಮಾನ ಇಷ್ಟಿದೆ. ಆದರೆ ಕಿಂಚಿತ್ತೂ ಅಭಿಮಾನ ಇಲ್ಲದಂತೆ ವರ್ತಿಸುತ್ತಿರುವ ಸರ್ಕಾರ ಮತ್ತು ಜನಪ್ರತಿನಿಧಿಗಳು ಚಿತ್ರರಂಗ ಕಂಡ ಶ್ರೇಷ್ಠ ನಾಯಕನಿಗೆ ಯಾವಾಗ ಸಮಾಧಿ ನಿರ್ಮಿಸಿ ಗೌರವ ಸಲ್ಲಿಸುತ್ತೋ?

ಇದರ ನಡುವೆ ನೆನಪಾಗಿದ್ದು ಇತ್ತೀಚೆಗೆ ಹುಚ್ಚ ವೆಂಕಟ್ ಹೇಳಿದ ಮಾತು "ಸಮಾಧಿ ನಿರ್ಮಿಸಿಲ್ಲ ಅಂದ್ರೆ ಅವರು ಇನ್ನೂ ಬದುಕಿದ್ದಾರೆ ಅಂತಾನೇ ಅರ್ಥ". ವಿಷ್ಣು ನಮ್ಮ ಜೊತೆಗೇ ಇದ್ದಾರೆ ಅನ್ನುವಂತೆ ಅವರ ಸಿನಿಮಾಗಳ ಜೊತೆ ನಿಂತಿರುವ ಅವರ ಅಭಿಮಾನಿಗಳಿಗೆ ನಮ್ಮದೊಂದು ಸೆಲ್ಯೂಟ್. [ಬದುಕಿದ್ದಾಗ, ಸತ್ತಮೇಲೂ ವಿಷ್ಣುಗೆ ಅನ್ಯಾಯ: ಅಂಬಿ ಬಾಂಬ್]

English summary
Fans have shown again that how much they love Vishnuvardhan by rereleasing the movie Sahasa Simha. Big cut out of Dr Vishnuvardhan and huge garland were the attraction.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada