For Quick Alerts
  ALLOW NOTIFICATIONS  
  For Daily Alerts

  'ಕಬಾಲಿ' ಮಗಳು ಸಾಯಿ ಧನ್ಸಿಕಾಗೆ ಕನ್ನಡ ಕಷ್ಟ ಅಲ್ಲವೇ ಅಲ್ಲ.!

  By Harshitha
  |

  'ಕಬಾಲಿ' ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಪಾತ್ರದಲ್ಲಿ ಅಭಿನಯಿಸಿದ್ದ ಸಾಯಿ ಧನ್ಸಿಕಾ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಆಕ್ಷನ್ ಕಟ್ ಹೇಳುತ್ತಿರುವ ಸಸ್ಪೆನ್ಸ್, ಥ್ರಿಲ್ಲರ್ 'ಉದ್ಘರ್ಷ' ಸಿನಿಮಾದಲ್ಲಿ ಸಾಯಿ ಧನ್ಸಿಕಾ ಅಭಿನಯಿಸುತ್ತಿದ್ದಾರೆ.

  ಕನ್ನಡಕ್ಕೆ ಬಂದ 'ಕಬಾಲಿ' ಮಗಳು ಸಾಯಿ ಧನ್ಸಿಕಾ!

  ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ 'ಉದ್ಘರ್ಷ' ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್ ಜೊತೆ ಸಾಯಿ ಧನ್ಸಿಕಾ ನಟಿಸುತ್ತಿದ್ದಾರೆ. ಈಗಾಗಲೇ 'ಉದ್ಘರ್ಷ' ಸಿನಿಮಾ ಸೆಟ್ಟೇರಿದ್ದು, ಮೊದಲ ಶೆಡ್ಯೂಲ್ ನ ಚಿತ್ರೀಕರಣ ಕೊಡಗಿನಲ್ಲಿ ನಡೆಯುತ್ತಿದೆ.

  ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸುವ ಸಾಯಿ ಧನ್ಸಿಕಾ, ಕನ್ನಡ ಡೈಲಾಗ್ ಗಳನ್ನು ಹೇಳುವುದು ಕಷ್ಟವೇ ಅಲ್ಲ ಎನ್ನುತ್ತಾರೆ. ತೆಲುಗು ಹಾಗೂ ಕನ್ನಡ ಡೈಲಾಗ್ ಗಳನ್ನು ಪಟ ಪಟ ಅಂತ ಹೇಳುವ ಸಾಯಿ ಧನ್ಸಿಕಾ, ಇನ್ನೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ.

  ಕನ್ನಡ ಭಾಷೆ ಗೊತ್ತಿದ್ದರೂ, ಗೊತ್ತಿಲ್ಲದಂತೆ ವರ್ತಿಸುವ ನಟಿಯರಿಗಿಂತ, ಭಾಷೆ ಬಾರದಿದ್ದರೂ, ಶ್ರದ್ಧೆಯಿಂದ ಕಲಿತು ಮಾತನಾಡುವ ಸಾಯಿ ಧನ್ಸಿಕಾ ಅಂತಹ ನಟಿಯರೇ ಮೇಲು.!

  English summary
  Actress Sai Dhansika of 'Kabali' fame finds talking in Kannada quite easy. Sai Dhansika is acting in Sunil Kumar Desai directorial Kannada Movie 'Udgharsha'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X