»   » 'ಕುರುಕ್ಷೇತ್ರ'ದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಪಾತ್ರವೇನು?

'ಕುರುಕ್ಷೇತ್ರ'ದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಪಾತ್ರವೇನು?

Posted By:
Subscribe to Filmibeat Kannada

ದರ್ಶನ್ ಅಭಿನಯಿಸಲಿರುವ 50ನೇ ಚಿತ್ರ 'ಕುರುಕ್ಷೇತ್ರ' ಸೆಟ್ಟೇರಲು ದಿನಗಣನೆ ಶುರುವಾಗಿದ್ದು, ಒಂದೊಂದೆ ಪಾತ್ರಗಳು ಅಂತಿಮವಾಗುತ್ತಿದೆ. ದರ್ಶನ್ ಜೊತೆ 'ಕುರುಕ್ಷೇತ್ರ' ಚಿತ್ರದಲ್ಲಿ ರವಿಚಂದ್ರನ್, ಶ್ರೀನಿವಾಸ ಮೂರ್ತಿ, ಶ್ರೀನಾಥ್ ಸೇರಿದಂತೆ ಹಲವರು ಕಾಣಿಸಿಕೊಳ್ಳುತ್ತಿದ್ದಾರೆ.

ಬಹು ತಾರಬಳಗದ ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ವಿಶೇಷ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಯಾವ ಪಾತ್ರವೆಂಬುದು ಖಚಿತವಾಗಿರಲಿಲ್ಲ. ಚಿತ್ರತಂಡದಿಂದ ಹೊರಬಿದ್ದಿರುವ ಮಾಹಿತಿ ಪ್ರಕಾರ ಸಾಯಿಕುಮಾರ್ ಶಕುನಿ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ.

'ಕುರುಕ್ಷೇತ್ರ' ಚಿತ್ರದಲ್ಲಿ ನಿಖಿಲ್ ಕುಮಾರ್ ಲುಕ್ ಬಹಿರಂಗ

Sai Kumar Sai to Play Shakuni in Kurukshetra

ಇನ್ನುಳಿದಂತೆ ದುರ್ಯೋಧನನಾಗಿ ದರ್ಶನ್, ಶ್ರೀ ಕೃಷ್ಣನಾಗಿ ರವಿಚಂದ್ರನ್, ದ್ರೋಣಾಚಾರ್ಯರಾಗಿ ಶ್ರೀನಿವಾಸ ಮೂರ್ತಿ, ಧೃತರಾಷ್ಟ್ರರಾಗಿ ಶ್ರೀನಾಥ್, ಭಾನುಮತಿ ಪಾತ್ರದಲ್ಲಿ ರೆಜಿನಾ, ದ್ರೌಪದಿಯಾಗಿ ಸ್ನೇಹಾ, ಅಭಿಮನ್ಯು ಪಾತ್ರದಲ್ಲಿ ನಿಖಿಲ್ ಕುಮಾರ್ ಅಬ್ಬರಿಸಲಿದ್ದಾರೆ.

ಯಾರೂ ನಿರೀಕ್ಷೆ ಮಾಡದ ನಟ ಈಗ ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮ.!

ಮುನಿರತ್ನ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನ ನಾಗಣ್ಣ ನಿರ್ದೇಶನ ಮಾಡುತ್ತಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ. ಜುಲೈ 30 ರಂದು ಸಿನಿಮಾ ಮುಹೂರ್ತ ನೆರವೇರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರಂತೆ.

ದರ್ಶನ್ ಅಂಡ್ ಟೀಂ ರೆಡಿ: ಜುಲೈ 30ಕ್ಕೆ 'ಕುರುಕ್ಷೇತ್ರ' ಶುರು

English summary
Kannada Actor Sai Kumar to Play Shakuni character in Darshan's 50th Movie Kurukshetra. The Movie Directed by Naganna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada