»   » ಸಾಯಿ ಕುಮಾರ್ ಅಭಿನಯದ ಹೊಸ ಚಿತ್ರದ ಲುಕ್ ರಿಲೀಸ್

ಸಾಯಿ ಕುಮಾರ್ ಅಭಿನಯದ ಹೊಸ ಚಿತ್ರದ ಲುಕ್ ರಿಲೀಸ್

Posted By:
Subscribe to Filmibeat Kannada

ನಟ ಸಾಯಿ ಕುಮಾರ್ ವಿಭಿನ್ನ ಪಾತ್ರಗಳಿಗೆ ಹೆಸರು ಮಾಡಿರುವ ನಟ. ಸದ್ಯ 'ಪಟಾಕಿ' ಸಿನಿಮಾದಲ್ಲಿ ಪೊಲೀಸ್ ಆಗಿ ಅಬ್ಬರಿಸಿದ್ದ ಸಾಯಿ ಕುಮಾರ್ ಈಗ ಮತ್ತೊಂದು ಹೊಸ ಸಿನಿಮಾದ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

'women's day' ಎನ್ನುವ ಹೆಸರಿನಲ್ಲಿ ಬರುತ್ತಿರುವ ಈ ಸಿನಿಮಾದಲ್ಲಿ ಸಾಯಿ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸಿನಿಮಾದಲ್ಲಿನ ಸಾಯಿ ಕುಮಾರ್ ಅವರ ಲುಕ್ ಹೊರಬಿದ್ದಿದೆ. ಪಂಚೆ ತೊಟ್ಟು, ಹಳ್ಳಿ ಗೌಡರ ರೀತಿ ಸಾಯಿ ಕುಮಾರ್ ಖದರ್ ತೋರಿಸಿದ್ದಾರೆ. ಈ ಫೋಟೋಗಳನ್ನು ನೋಡುತ್ತಿದ್ದರೆ ಚಿತ್ರದಲ್ಲಿ ಅವರದ್ದು ನೆಗೆಟಿವ್ ಪಾತ್ರ ಇರಬಹುದು ಎನ್ನುವ ಅನುಮಾನ ಸಹ ಮೂಡುತ್ತದೆ.

Sai Kumar Starring 'Women's day' movie First Look Out.

ಆರ್.ಜಿ.ಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಮಹಿಳಾ ಹಕ್ಕುಗಳನ್ನು ಕೇಂದ್ರೀಕರಿಸುವ ಅಂಶಗಳನ್ನು ಈ ಚಿತ್ರದ ಕಥೆ ಒಳಗೊಂಡಿದೆ. ಚಿತ್ರದಲ್ಲಿ ಪ್ರಕಾಶ್ ಸಿದ್ದಿ, ಸೂರ್ಯ, ರಿಪ್ಪು ಧಮಾನ್ ಸಿಂಗ್, ಅರುಣ್, ಅಕ್ಷರಾ, ಸ್ನೇಹ, ಸೇರಿದಂತೆ ಕೆಲ ಕಲಾವಿದರು ನಟಿಸಿದ್ದಾರೆ.

English summary
Sai Kumar Starring New Kannada movie 'Women's day' First Look out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada