For Quick Alerts
  ALLOW NOTIFICATIONS  
  For Daily Alerts

  2 ಕೋಟಿ ಆಫರ್ ತಿರಸ್ಕರಿಸಿದ ಸಾಯಿ ಪಲ್ಲವಿ.! ಕಾರಣ ಇಲ್ಲಿದೆ

  |
  ಎರಡು ಕಾರಣಕ್ಕೆ ತನ್ನ ಸಿದ್ಧಾಂತ ಬಿಡದ ಸಾಯಿ ಪಲ್ಲವಿ

  ಸಾಯಿ ಪಲ್ಲವಿ ಮುಟ್ಟಿದ್ದೆಲ್ಲ ಚಿನ್ನವಾಗ್ತಿದೆ. ಚೊಚ್ಚಲ ಚಿತ್ರದಿಂದ ಇಲ್ಲಿಯವರೆಗೂ ರಿಲೀಸ್ ಆಗಿರುವ ಎಲ್ಲ ಚಿತ್ರಗಳಲ್ಲಿಯೂ ಪ್ರೇಮಂ ಬೆಡಗಿ ಕಮಾಲ್ ಮಾಡಿದ್ದಾರೆ. ಸದ್ಯಕ್ಕೆ ಇಡೀ ಸೌತ್ ಇಂಡಸ್ಟ್ರಿ ಸಾಯಿ ಪಲ್ಲವಿ ಅಂದ್ರೆ ಕಣ್ ಕಣ್ ಬಿಟ್ಟು ನೋಡುವಂತಾಗಿದೆ. ಸ್ಟಾರ್ ನಟಿಯರನ್ನ ಹಿಂದಿಕ್ಕಿ ಯುವ ಜನಾಂಗದ ಮನಸ್ಸು ಕದ್ದಿರುವ ಸಾಯಿ ಪಲ್ಲವಿ ಈಗ ಬಹುಬೇಡಿಕೆಯ ನಟಿ.

  ಹೀಗೆ ಕಡಿಮೆ ಅವಧಿಯಲ್ಲೇ ಅಪಾರ ಅಭಿಮಾನಿಗಳನ್ನ ಗಳಿಸಿರುವ ಸಾಯಿ ಪಲ್ಲವಿ ಈಗ 2 ಕೋಟಿ ಆಫರ್ ಬಂದಿದ್ದ ಪ್ರಾಜೆಕ್ಟ್ ವೊಂದನ್ನ ತಿರಸ್ಕರಿಸಿದ್ದಾರೆ. ಇದು ಸಿನಿರಂಗದಲ್ಲಿ ಬಹಳ ಚರ್ಚೆಯಾಗ್ತಿದ್ದು, ಎಂತಹ ಅವಕಾಶ ಮಿಸ್ ಮಾಡಿಕೊಂಡರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

  ಸ್ಟಾರ್ ನಟಿಯ ಮಾಜಿ ಗಂಡನ ಜೊತೆ ಸಾಯಿ ಪಲ್ಲವಿ ಮದುವೆ?

  ಆದ್ರೆ, ಸಾಯಿ ಪಲ್ಲವಿ ಈ ಪ್ರಾಜೆಕ್ಟ್ ರಿಜೆಕ್ಟ್ ಮಾಡುವುದಕ್ಕೆ ಬಲವಾದ ಕಾರಣವಿದೆ. 2 ಕೋಟಿ ಸಂಭಾವನೆ ನೋಡಿದ್ರೆ, ಅದರಿಂದ ತಾನು ಎದುರಿಸಬೇಕಾದ ಸವಾಲು ಏನು ಎಂದು ತಿಳಿದು, ಈ ಡೀಲ್ ಬೇಡ ಅಂದಿದ್ದಾರೆ. ಅಷ್ಟಕ್ಕೂ, ಸಾಯಿ ಪಲ್ಲವಿಗೆ 2 ಕೋಟಿ ಆಫರ್ ಮಾಡಿದ್ದು ಯಾರು? ಅದನ್ನ ಈ ನಟಿ ತಿರಸ್ಕರಿಸಿದ್ದು ಯಾಕೆ? ಮುಂದೆ ಓದಿ.....

  ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗುವಂತೆ ಆಫರ್

  ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗುವಂತೆ ಆಫರ್

  ಸಾಯಿ ಪಲ್ಲವಿ ಸ್ಟಾರ್ ನಟಿ ಆಗುತ್ತಿದ್ದಂತೆ ಕಾರ್ಪೋರೇಟ್ ಕಂಪನಿಗಳು ಆಕೆಯ ಹಿಂದೆ ಬಿದ್ದಿವಿ. ತಮ್ಮ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಎಂದು ಆಫರ್ ಮಾಡುತ್ತಿದೆ. ಹೀಗೆ, ಖ್ಯಾತ ಸಂಸ್ಥೆಯೊಂದು ಸಾಯಿ ಪಲ್ಲವಿಗೆ 2 ಕೋಟಿ ಆಫರ್ ನೀಡಿ ಬ್ರಾಂಡ್ ಅಂಬಾಸಿಡರ್ ಆಗುವಂತೆ ಬೇಡಿಕೆ ಮುಂದಿಟ್ಟಿದೆ. ಆದ್ರೆ, ಈ ಆಫರ್ ತಿರಸ್ಕರಿಸಿದ್ದಾರೆ ನಟಿ ಸಾಯಿ ಪಲ್ಲವಿ.

  ಸಿನಿಮಾ ಸೋತಿದ್ದಕ್ಕೆ ಸಾಯಿ ಪಲ್ಲವಿ ಮಾಡಿದ್ದೇನು ಗೊತ್ತಾ?

  ಫೇಸ್ ಕ್ರೀಮ್ ಗೆ ರಾಯಭಾರಿ ಆಗಲ್ಲ ಅಂದ್ರು ಪಲ್ಲವಿ

  ಫೇಸ್ ಕ್ರೀಮ್ ಗೆ ರಾಯಭಾರಿ ಆಗಲ್ಲ ಅಂದ್ರು ಪಲ್ಲವಿ

  ಈ ಸಂಸ್ಥೆ ಹೊಸದಾಗಿ ಫೇಸ್ ಕ್ರೀಮ್ ಒಂದನ್ನ ಪರಿಚಯಿಸುತ್ತಿದೆ. ಇದಕ್ಕೆ ಸಾಯಿ ಪಲ್ಲವಿ ಅವರನ್ನ ರಾಯಭಾರಿಯನ್ನಾಗಿಸಲು ಪ್ಲಾನ್ ಮಾಡಿ ಅಪ್ರೋಚ್ ಮಾಡಿದೆ. ಆದ್ರೆ, ಈ ಡೀಲ್ ಒಪ್ಪಿಕೊಳ್ಳದ ಸಾಯಿ ಪಲ್ಲವಿ ಸಾಧ್ಯವಿಲ್ಲ ಎಂದು ರಿಜೆಕ್ಟ್ ಮಾಡಿದ್ದಾರೆ. ಇದಕ್ಕೆ ಕಾರಣ ಕೂಡ ಹೇಳಿದ್ದಾರೆ.

  'ಫಿದಾ' ಹುಡುಗಿ ಬೇಡ ಎಂದಿದ್ದೇಕೆ?

  'ಫಿದಾ' ಹುಡುಗಿ ಬೇಡ ಎಂದಿದ್ದೇಕೆ?

  ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಹೆಚ್ಚು ಮೇಕಪ್ ಹಾಕುವುದಿಲ್ಲ. ತಮ್ಮ ಮುಖದಲ್ಲಿ ಮೊಡವೆಗಳಿದ್ದರೂ ಅದನ್ನ ಕಾಣಿಸಿದಂತೆ ಮಾಡಿಕೊಳ್ಳಲು ಮೇಕಪ್ ಬಳಸುವುದಿಲ್ಲ. ತನ್ನ ನೈಜ ಸೌಂದರ್ಯವನ್ನೇ ಉಳಿಸಿಕೊಂಡು, ಸಿನಿಮಾ ಮಾಡ್ತಾರೆ. ಅಂತಹದ್ರಲ್ಲಿ ಈ ಡೀಲ್ ಒಪ್ಪಿಕೊಂಡರೇ ಕ್ರೀಮ್ ಬಗ್ಗೆ ಜಾಹೀರಾತು ನೀಡಬೇಕು. ಮೊಡವೆ ಇರಲ್ಲ, ಕಲೆ ಇರಲ್ಲ ಎಂದು ಹೇಳಬೇಕು. ಜನರನ್ನ ಮೋಸ ಮಾಡಲು ನನ್ನಿಂದ ಆಗಲ್ಲ. ಸುಳ್ಳು ಹೇಳಲು ಕಷ್ಟ ಎಂಬ ಕಾರಣಕ್ಕೆ ಸಾಯಿ ಪಲ್ಲವಿ ಈ ಡೀಲ್ ಕೈಬಿಟ್ಟಿದ್ದಾರೆ.

  ಈ ಒಂದು ಕಾರಣಕ್ಕಾಗಿ 'ಮದುವೆ ಆಗಲ್ಲ' ಎಂದ ಸಾಯಿ ಪಲ್ಲವಿ

  ಜನರಿಗೆ ಅದೇ ಸಾಯಿ ಪಲ್ಲವಿ ಇಷ್ಟ

  ಜನರಿಗೆ ಅದೇ ಸಾಯಿ ಪಲ್ಲವಿ ಇಷ್ಟ

  ಅಂದ್ಹಾಗೆ, ಸಾಯಿ ಪಲ್ಲವಿ ಮುಖದಲ್ಲಿ ಹೆಚ್ಚು ಮೊಡವೆಗಳಿವೆ. ಆದ್ರೆ, ಅದು ಆಕೆಗೆ ಯಾವುತ್ತು ಮೈನಸ್ ಆಗಿಲ್ಲ. ಅಭಿಮಾನಿಗಳಿಗೆ ಸಾಯಿ ಪಲ್ಲವಿ ಅಂದ್ರೆ ಆ ನೈಜ ಮುಖ ರಿಜಿಸ್ಟರ್ ಆಗಿದೆ. ಅಸಲಿ ಪಲ್ಲವಿಯನ್ನೇ ಹೆಚ್ಚು ಇಷ್ಟಪಡ್ತಾರೆ. ಮೇಕಪ್ ಇಲ್ಲದ ಪಲ್ಲವಿ ಅಂದ್ರೆನೇ ಅಭಿಮಾನಿಗಳಿಗೂ ಇಷ್ಟ. ಹೀಗಿರುವಾಗ, ಜಾಹೀರಾತಿಗಾಗಿ ಮೇಕಪ್ ಹಾಕಲು ಒಪ್ಪಲಿಲ್ಲ ಈ ನಟಿ. ಇದು ಮೆಚ್ಚುಗೆಗೆ ಪಾತ್ರವಾಗಿದೆ.

  English summary
  Popular brand approached Sai Pallavi to endorse their latest face cream and offered amount of 2 crore. but, she has reject this offer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X