»   » ಸಕಲೇಶಪುರ ಕನ್ನಡದ ಸ್ಟಾರ್ ನಟರಿಗೆ ಶೂಟಿಂಗ್ ಹಾಟ್ಸ್ಪಾಟ್

ಸಕಲೇಶಪುರ ಕನ್ನಡದ ಸ್ಟಾರ್ ನಟರಿಗೆ ಶೂಟಿಂಗ್ ಹಾಟ್ಸ್ಪಾಟ್

By: ಜೀವನರಸಿಕ
Subscribe to Filmibeat Kannada

ಅದು 2005. ಯೋಗರಾಜ್ ಭಟ್ ಅನ್ನೋ ಸಾಮಾನ್ಯ ನಿರ್ದೇಶಕ 'ಮುಂಗಾರುಮಳೆ' ಅನ್ನೋ ಟೈಟಲ್ ಇಟ್ಕೊಂಡು ಹೊಸಬರ ತಂಡ ಕಟ್ಟಿಕೊಂಡು ಶೂಟಿಂಗ್ಗೆ ಹೊರಟಿದ್ರು. 'ಮುಂಗಾರುಮಳೆ'ಯ ಶೂಟಿಂಗ್ ಟೈಟಲ್ಗೆ ತಕ್ಕಂತೇ ಮಳೆಯ ನಾಡಲ್ಲೇ ನಡೆಯಬೇಕಾಗಿತ್ತು.

ಇದಕ್ಕೆ ಯೋಗರಾಜರು ಆಯ್ಕೆ ಮಾಡಿಕೊಂಡಿದ್ದು ಸಕಲೇಶಪುರವನ್ನ. ಸಕಲೇಶಪುರ ಬಯಲುಸೀಮೆ ಜಿಲ್ಲೆಯಾದ ಹಾಸನದಲ್ಲಿದ್ರೂ ಭೌಗೋಳಿಕವಾಗಿ ಸಹ್ಯಾದ್ರಿ ಪರ್ವತಶ್ರೇಣಿಯ ಬೆಟ್ಟಸಾಲುಗಳ ಮಲೆನಾಡ ಮಡಿಲು. ಅತಿಹೆಚ್ಚು ಮಳೆಯಾಗೋ ಪ್ರದೇಶ.

ಚಿತ್ರದ ಹೆಚ್ಚಿನ ಭಾಗದ ಶೂಟಿಂಗ್ ಸಕಲೇಶಪುರದಲ್ಲೇ ನಡೀತು. ಸಿನಿಮಾ ನೋಡಿದ ಪ್ರೇಕ್ಷಕ ಹಸಿರು ಹಬ್ಬವನ್ನ ಕಣ್ಣಲ್ಲಿ ತುಂಬಿಕೊಂಡು ಖುಷ್ ಖುಷಿಯಾದ. ಸಿನಿಮಾ ಅದ್ಭುತ ಸಕ್ಸಸ್ ಪಡೀತು. ಆದ್ರೆ ಭಟ್ಟರಿಗೆ ಅದ್ಭುತ ಲೊಕೇಷನ್ ಕೊಟ್ಟ ಸಕಲೇಶಪುರವನ್ನ ಭಟ್ಟರು ಹೊಗಳಲೂ ಇಲ್ಲ ಕೃತಜ್ಞತೆ ಸಲ್ಲಿಸಲೂ ಇಲ್ಲ. ಅದಕ್ಕಾಗಿ ಸಕಲೇಶಪುರದ ಜನತೆ ಪ್ರತಿಭಟನೆಯನ್ನೂ ನಡೆಸಿದ್ರು.

ಈಗ ಮುಂಗಾರುಮಳೆ-2ರ ಶೂಟಿಂಗ್ ಆರಂಭವಾಗಿದೆ ಅದೂ ಸಕಲೇಶಪುರದಲ್ಲೇ ನಡೀತಿದೆ. ಈ ಸಕಲೇಶಪುರ ಸದ್ಯ ಶೂಟಿಂಗ್ನ ಹಾಟ್ ಸ್ಪಾಟ್ ಅನ್ಕೊತಿದ್ದೀರಾ? ಹೌದು ಸಕಲೇಶಪುರ ಕನ್ನಡದ ಸ್ಟಾರ್ ನಟರಿಗೆ ಶೂಟಿಂಗ್ ಹಾಟ್ಸ್ಪಾಟ್. ಯಾವ್ಯಾವ ನಟರಿಗೆ ಸಕಲೇಶಪುರ ಹಾಟ್ಸ್ಪಾಟ್ ಅನ್ನೋದನ್ನ ಸ್ಲೈಡ್ನಲ್ಲಿ ನೋಡ್ತಾ ಹೋಗಿ.

ಹೆಸರು ಯಾರ್ದೋ

ಪಾಪ ಶೂಟಿಂಗ್ ನಡೆಯೋದು ಸಕಲೇಶಪುರದಲ್ಲೇ ಆದ್ರೆ ಸಿನಿಮಾ ಮಂದಿ ಹೇಳೋದು ಮಾತ್ರ ಕೂರ್ಗ್ ಅಂತ. ಮಡಿಕೇರಿ ಅಥವಾ ಕೂರ್ಗ್ ಅಂತ ಹೇಳಿದ್ರೆ ಅದೊಂಥರಾ ಸ್ಟಾಂಡರ್ಡ್ ಅನ್ನೋದು ಸಿನಿಮಾದವ್ರ ಲೆಕ್ಕಾಚಾರ.

ರವಿಚಂದ್ರನ್ ಫೇವರೀಟ್

ಕನ್ನಡ ಚಿತ್ರರಂಗಕ್ಕೊಂದು ಶ್ರೀಮಂತಿಕೆ ತಂದುಕೊಟ್ಟ ನಿರ್ದೇಶಕ ಕ್ರೇಜಿಸ್ಟಾರ್ ರವಿಮಾಮನ ಫೇವರೀಟ್ ಲೊಕೇಷನ್ ಸಕಲೇಶಪುರ. 'ಸಿಪಾಯಿ'ಯಂತಹಾ ಸಿನಿಮಾಗಳಿಗೆ ರವಿಮಾಮ ಒಂದಿಡೀ ತಿಂಗಳು ಪ್ರಕೃತಿಯ ಮಡಿಲು ಸಕಲೇಶಪುರದ ಶುಕ್ರವಾರ ಸಂತೆ ಅನ್ನೋ ಊರಲ್ಲಿ ಮನೆ ಮಾಡಿಕೊಂಡು ಅಲ್ಲೇ ಉಳಿದು ಶೂಟ್ ಮಾಡಿದ್ರು.

ಕ್ರೇಜಿಸ್ಪಾಟ್

ರವಿಚಂದ್ರನ್ ತೆರೆಮೇಲೆ ತೋರಿಸೋದು ಒಂದು ಕಾಲದಲ್ಲಿ ತೆಲುಗು ತಮಿಳು ಇಂಡಸ್ಟ್ರಿಗಳಿಗೂ ಮ್ಯಾಜಿಕ್ನಂತೆ ಭಾಸವಾಗ್ತಿತ್ತು. ಈ ಮಾತನ್ನ ನಾವಲ್ಲ ಹೇಳಿದ್ದು 'ಬಾಹುಬಲಿ' ನಿರ್ದೇಶಕ ರಾಜಮೌಳಿ ಹೇಳಿದ ಡೈಲಾಗ್ ಇದು. ಅಂತಹಾ ರವಿಮಾಮ ಪ್ರಕೃತಿಯನ್ನ ಸೆರೆ ಹಿಡಿಯೋಕೆ ಹೊರಡ್ತಾ ಇದ್ದಿದ್ದು ಸಕಲೇಶಪುರಕ್ಕೆ.

ಚಾಲೆಂಜಿಂಗ್ಸ್ಟಾರ್ ಫೇವರೀಟ್

ಚಾಲೆಂಜಿಂಗ್ಸ್ಟಾರ್ ದರ್ಶನ್ರ ಅದೆಷ್ಟೋ ಸಿನಿಮಾದ ಹಾಡುಗಳು ಸಕಲೇಶಪುರದ ಸುಂದರ ಲೊಕೇಷನ್ಗಲ್ಲಿ ಶೂಟ್ ಆಗಿವೆ. ಅದ್ಭುತ ಪ್ರಕೃತಿ ರಮಣೀಯ ಸ್ಥಳ ಸಕಲೇಶಪುರದಲ್ಲಿ ಶೂಟಿಂಗ್ ಇದ್ರೆ ದರ್ಶನ್ ಸಕಲೇಶಪುರದಲ್ಲಿರೋ ತಮ್ಮ ಸ್ನೇಹಿತರ ಮನೆಯಲ್ಲೇ ಉಳೀತಾರೆ.

ಗಣೇಶ್ಗೆ ಗೋಲ್ಡನ್ ಪ್ಲೇಸ್

ಸ್ಯಾಂಡಲ್ವುಡ್ಗೆ ಗಣೇಶ್ ಗೋಲ್ಡನ್ಸ್ಟಾರ್ ಆಗಿ ಸಿಕ್ಕಿದ್ದು 'ಮುಂಗಾರುಮಳೆ'ಯ ನಂತರವೇ. ಇದ್ರ ನಂತ್ರ ಗಣೇಶ್ರ ಇಷ್ಟದ ಪ್ಲೇಸ್ ಅಂದ್ರೆ ಸಕಲೇಶಪುರ. ಸಕಲೇಶಪುರ ನಮ್ಮನ್ನ ಬೇರೆಯದ್ದೇ ಲೋಕಕ್ಕೆ ಕರ್ಕೊಂಡು ಹೋಗುತ್ತೆ ಅಂತಾರೆ ಗೋಲ್ಡನ್ಸ್ಟಾರ್.

ಪ್ರೀತಮ್ ಗುಬ್ಬಿ ಫೇವರೀಟ್

ಗಣೇಶ್ ಜೊತೆ ಹಲವು ಸಿನಿಮಾ (ಹಾಗೆ ಸುಮ್ಮನೆ) ಮಾಡಿದ ಪ್ರೀತಮ್ ಗುಬ್ಬಿ 'ಮುಂಗಾರುಮಳೆ'ಯಿಂದ ಸಕಲೇಶಪುರದಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ಶೂಟಿಂಗ್ ಮಾಡಿದ್ದಾರೆ. ಪ್ರೀತಮ್ ಗುಬ್ಬಿಯವರಿಗೂ ಸಕಲೇಶಪುರದ ಲೊಕೇಷನ್ಗಳು ಆಲ್ವೇಸ್ ಫೇವರೀಟ್.

ಮುಂಗಾರುಮಳೆ-2

ಮುಂಗಾರುಮಳೆ ಅನ್ನೋ ಮ್ಯಾಜಿಕಲ್ ಸಿನಿಮಾದ ಭಾಗ ಎರಡರ ಶೂಟಿಂಗ್ ಈಗ ಸದ್ದಿಲ್ಲದೆ ಆರಂಭವಾಗಿದೆ. ಅದೂ ಮತ್ತೆ ಸಕಲೇಶಪುರದಲ್ಲೇ ಅನ್ನೋದು ವಿಶೇಷ. ಸಹಜವಾಗಿ ನಿರ್ದೇಶಕ ಶಶಾಂಕ್ ಜ್ಯೋತಿಷ್ಯವನ್ನ ನಂಬರ್ ಗೇಮನ್ನ ಹೆಚ್ಚಾಗಿ ನಂಬ್ತಾರೆ. ಹಾಗಾಗಿ ಚಿತ್ರವನ್ನ 'ಮುಂಗಾರುಮಳೆ' ಶೂಟಿಂಗ್ ಆರಂಭವಾದ ಜುಲೈ 28ರಂದೇ ಮುಂಗಾರುಮಳೆ 2ರ ಚಿತ್ರೀಕರಣವನ್ನೂ ಅದೇ ಸ್ಪಾಟಲ್ಲಿ ಆರಂಭಿಸಿದ್ದಾರೆ.

ಮಳೆ ಸಕಲೇಶಪುರದಲ್ಲೇ

ಆಗಸ್ಟ್ ತಿಂಗಳ ಮಳೆಗಾಲದಲ್ಲಿ ಸಕಲೇಶಪುರದಲ್ಲಿ ಶೂಟಿಂಗ್ ಮಾಡೋದು ಒಂದು ಸವಾಲೇ ಸರಿ ಅಂತಿದ್ದಾರೆ ನಿರ್ದೇಶಕ ಶಶಾಂಕ್. ಈ ಅನುಭವ ಆರ್ ಚಂದ್ರು ನಿರ್ದೇಶನದ 'ಮಳೆ' ಚಿತ್ರತಂಡ ಕೂಡ ಆಗಿದೆ. ಇನ್ನು 'ಮಳೆ' ಚಿತ್ರದಲ್ಲಿ ಕಾಣೋ ಕಲರ್ಫುಲ್ ಲೊಕೇಷನ್ಗಳು ಕೂಡ ಸಕಲೇಶಪುರದ್ದೇ.

English summary
Most of Kannada movies have been shot in picturesque Sakaleshpur, malenadu in Hassan district. Though many movies like Mungaru Male, Haage Summane, Mungaru Male 2, Male have been shot in this rainy hotspot, the credit has gone to Coorg! ಸಕಲೇಶಪುರ ಕನ್ನಡದ ಸ್ಟಾರ್ ನಟರಿಗೆ ಶೂಟಿಂಗ್ ಹಾಟ್ಸ್ಪಾಟ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada