»   » ಕನ್ನಡಕ್ಕೆ ಬಂದ ಹಾಟ್ ಐಟಂ ಮಾಲ್ ಸಾಕ್ಷಿ ಪ್ರಧಾನ್

ಕನ್ನಡಕ್ಕೆ ಬಂದ ಹಾಟ್ ಐಟಂ ಮಾಲ್ ಸಾಕ್ಷಿ ಪ್ರಧಾನ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಚಿತ್ರರಸಿಕರ ಮೈ ಬೆಚ್ಚಗೆ ಮಾಡಲು ಮತ್ತೊಬ್ಬ ಚೆಲುವೆ ಗಾಂಧಿನಗರ ಅಂಗಳಕ್ಕೆ ಅಡಿಯಿಟ್ಟಿದ್ದಾರೆ. 'ಬಿಗ್ ಬಾಸ್' ಹಾಗೂ 'ಸ್ಪ್ಲಿಟ್ಸ್ ವಿಲ್ಲಾ' (ಎಂಟಿವಿ ಡೇಟಿಂಗ್ ರಿಯಾಲಿಟಿ ಶೋ) ಶೋಗಳ ಮೂಲಕ ಜನಪ್ರಿಯವಾಗಿರುವ ಸಾಕ್ಷಿ ಪ್ರಧಾನ್ ಕನ್ನಡ ಬೆಳ್ಳಿಪರದೆ ಮೇಲೆ ಸೊಂಟ ಬಳುಕಿಸಲಿದ್ದಾರೆ.

ಚೇತನ್ ಚಂದ್ರ ಪ್ರಧಾನ ಭೂಮಿಕೆಯಲ್ಲಿರುವ 'ವ್ಯಾಘ್ರ' ಚಿತ್ರದ ಐಟಂ ಹಾಡಿನಲ್ಲಿ ಸಾಕ್ಷಿ ಪ್ರಧಾನ್ ತಮ್ಮ ಮೈಮಾಟ ಮೆರೆಯಲಿದ್ದಾರೆ. ಸಾಕ್ಷಿ ಮತ್ತು ರಾಜೀವ್ ಪಿಳ್ಳೈ ನಡುವಿನ ಈ ಸ್ಪೆಷಲ್ ನಂಬರ್ ಚಿತ್ರೀಕರಣ ಈಗ ಸರ್ಜಾಪುರದ ಫಾರಂ ಹೌಸ್ ನಲ್ಲಿ ಭರದಿಂದ ಸಾಗುತ್ತಿದೆ. [ಸದ್ದಿಲ್ಲದೇ ಕಾಲಿವುಡ್ ಗೆ ಹಾರಿದ ಕರುನಾಡ ಕುವರ]

Sakshi Pradhan Item Number in Kannada

ಕನ್ನಡ ಮತ್ತು ತಮಿಳಿನಲ್ಲಿ (ನಿಂಡ್ರುಕೊಲ್ವಾನ್) ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ದ್ವಿಭಾಷಾ ಚಿತ್ರಕ್ಕೆ ಮುಂಬೈ ಬೆಡಗಿಯನ್ನು ಕರೆತರಲು ನಿರ್ದೇಶಕರು ಪ್ಲಾನ್ ಮಾಡಿದ್ದರು. ಅವರ ಕಣ್ಣಿಗೆ ಬಿದ್ದ ಬೆಡಗಿ ಸಾಕ್ಷಿ. ಕೇವಲ ಅಂದಚೆಂದಲ್ಲಷ್ಟೇ ಅಲ್ಲ ಒಳ್ಳೆಯ ಡಾನ್ಸರ್ ಕೂಡ ಹೌದು ಎನ್ನುತ್ತಾರೆ ನಿರ್ದೇಶಕ ವಿಪಿ ಶಂಕರ್.

ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಡ್ರೀಮ್ ಬಾಯ್ ಚೇತನ್ ಚಂದ್ರ ತಮಿಳು ಚಿತ್ರರಂಗಕ್ಕೂ ಅಡಿಯಿಡುತ್ತಿದ್ದಾರೆ. ಈಗಾಗಲೆ ತಮಿಳುನಾಡು ಮತ್ತು ಕರ್ನಾಟಕದ ಹಲವಾರು ತಾಣಗಳಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ಆಕ್ಷನ್ ಕಮ್ ಲವ್ ಸ್ಟೋರಿಯಿರುವ ಈ ಚಿತ್ರದಲ್ಲಿ ಚೇತನ್ ಚಂದ್ರಗೆ ನಾಯಕಿಯಾಗಿರುವುದು 2012ನೇ ಸಾಲಿನ ಮಿಸ್ ಇಂಡಿಯಾದಲ್ಲಿ ಭಾಗವಹಿಸಿದ್ದ ಸುಂದರಿ ಕರುಣಾ ಡೋಗ್ರಾ. 8 ಪ್ಯಾಕ್ ಆಬ್ಸ್ ನಿಂದ ಫಿಟ್ ಆಗಿರುವ ಚೇತನ್, ಈ ಚಿತ್ರದಲ್ಲಿ ಹಿಂದೆಂದಿಗಿಂತಲೂ ಭರ್ಜರಿ ಆಕ್ಷನ್ ಮಾಡಲಿದ್ದಾರಂತೆ. (ಏಜೆನ್ಸೀಸ್)

English summary
Bigg Boss and Splitsvilla reality shows fame Sakshi Pradhan shakes her legs in Kannada-Tamil bilingual movie Vyaagra/Nindrukolvan. The movie has Chetan Chandra in the lead. At present the special number is being shot at a farmhouse in Sarjapur.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada