For Quick Alerts
  ALLOW NOTIFICATIONS  
  For Daily Alerts

  ಸಲಾರ್ 'ಉಗ್ರಂ' ರಿಮೇಕಾ? ಚಿತ್ರದಲ್ಲಿ ನಟಿಸುತ್ತಿರುವ ಕನ್ನಡಿಗ ಪ್ರಮೋದ್ ಹೇಳಿದ್ದಿಷ್ಟು

  |

  ಉಗ್ರಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಪ್ರಶಾಂತ್ ನೀಲ್ ನಂತರ ಕೆಜಿಎಫ್ ಚಿತ್ರ ಸರಣಿ ಮಾಡಿ ಸದ್ಯ ಭಾರತ ಚಿತ್ರರಂಗದ ಸ್ಟಾರ್ ನಿರ್ದೇಶಕರ ಪಟ್ಟಿಯನ್ನು ಸೇರಿದ್ದಾರೆ. ಕೆಜಿಎಫ್ ಮೂಲಕ ಭಾರೀ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ಪ್ರಶಾಂತ್ ನೀಲ್ ನಿರ್ದೇಶನ ಮಾಡುವ ಚಿತ್ರಗಳಿಗೆ ಕೋಟಿ ಕೋಟಿ ಸುರಿಯಲು ವಿವಿಧ ಚಿತ್ರರಂಗಗಳ ನಿರ್ಮಾಣ ಸಂಸ್ಥೆಗಳು ಕಾಯುತ್ತಿವೆ.

  ಇನ್ನು ಉಗ್ರಂ ಹಾಗೂ ಕೆಜಿಎಫ್ ಚಿತ್ರ ಸರಣಿ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಈಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದು ಮೊದಲಿಗೆ ಪ್ರಭಾಸ್‌ಗೆ ಸಲಾರ್ ಎಂಬ ಮಾಸ್ ಸಬ್ಜೆಕ್ಟ್ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಜೂನಿಯರ್ ಎನ್‌ಟಿಆರ್‌ಗೂ ಸಹ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಸಲಾರ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಚಿತ್ರದಲ್ಲಿ ಪ್ರಭಾಸ್ ಜತೆಗೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ರೀತಿಯ ದೊಡ್ಡ ನಟರೂ ಸಹ ಅಭಿನಯಿಸುತ್ತಿದ್ದಾರೆ.

  ಈ ತಂಡಕ್ಕೆ ಇತ್ತೀಚೆಗಷ್ಟೆ ಕನ್ನಡದ ರತ್ನನ್ ಪ್ರಪಂಚ ಚಿತ್ರದ ಮೂಲಕ ವೈರಲ್ ಆಗಿದ್ದ ನಟ ಪ್ರಮೋದ್ ಪಂಜು ಕೂಡ ಸೇರಿಕೊಂಡಿದ್ದು ಸಲಾರ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಈ ಹಿಂದಿನಿಂದಲೂ ಸಲಾರ್ ಚಿತ್ರ ಕನ್ನಡದ ಉಗ್ರಂ ಚಿತ್ರದ ರಿಮೇಕ್ ಎಂಬ ದೊಡ್ಡ ಅನುಮಾನ ಹಾಗೂ ಕುತೂಹಲವಿದ್ದು ಈ ಕುರಿತಾಗಿ ಈಗ ನಟ ಪ್ರಮೋದ್ ಕೂಡ ಮಾತನಾಡಿದ್ದಾರೆ..

  ಇದು ಉಗ್ರಂ ರಿಮೇಕಾ?

  ಇದು ಉಗ್ರಂ ರಿಮೇಕಾ?

  ಕನ್ನಡ ಫಿಲ್ಮೋಲಜಿ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ್ದ ಪ್ರಮೋದ್ ಪಂಜು ಅವರು ತಾವು ಸಲಾರ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿರುವುದನ್ನು ಹೇಳಿಕೊಂಡರು. ಇದೇ ಸಂದರ್ಶನದಲ್ಲಿ ಎಲ್ಲರೂ ಸಲಾರ್ ಉಗ್ರಂ ಚಿತ್ರದ ರಿಮೇಕ್ ಎನ್ನುತ್ತಿದ್ದಾರೆ, ಇದು ನಿಜಾನಾ ಎಂಬ ಪ್ರಶ್ನೆ ಪ್ರಮೋದ್‌ಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಪ್ರಮೋದ್ "ಇಲ್ಲ. ನಂಗೆ ಗೊತ್ತಿಲ್ಲ, ಅದನ್ನು ಪ್ರಶಾಂತ್ ಸರ್ ಹತ್ರಾನೇ ಕೇಳಬೇಕು. ನನ್ನ ಅನಿಸಿಕೆ ಪ್ರಕಾರ ಆ ತರಹದ ಐಡಿಯಾನೇ ಬಂದಿಲ್ಲ. ಇದು ತುಂಬಾ ದೊಡ್ಡದಾಗಿ ಇದೆ ಸರ್. ಜಡ್ಜ್ ಕೂಡ ಮಾಡೋಕಾಗಲ್ಲ, ಅಷ್ಟು ದೊಡ್ಡದಾಗಿ ಮಾಡ್ತಾ ಇದಾರೆ. ಇಂತಹ ಚಿತ್ರದಲ್ಲಿ ಅಭಿನಯಿಸ್ತಾ ಇರೋದು ಖುಷಿಯಿದೆ. ಇದನ್ನು ನೀವು ಸುಲಭವಾಗಿ ಇದು ಅದೇನಾ ಅಂತ ಹೇಳಿಬಿಡುವುದಕ್ಕಾಗುವುದಿಲ್ಲ, ಇದರಲ್ಲಿ ಒಂದಷ್ಟು ಬೇರೆ ಇದೆ. ಬಂದಮೇಲೆ ಗೊತ್ತಾಗಲಿದೆ" ಎಂದು ಹೇಳಿದರು.

  ಖುದ್ದಾಗಿ ಪ್ರಶಾಂತ್ ನೀಲ್‌ರಿಂದ ಆಫರ್

  ಖುದ್ದಾಗಿ ಪ್ರಶಾಂತ್ ನೀಲ್‌ರಿಂದ ಆಫರ್

  ಇನ್ನು ತನಗೆ ಪ್ರಶಾಂತ್ ನೀಲ್ ಅವರೇ ಖುದ್ದಾಗಿ ಕರೆಮಾಡಿ ಅವಕಾಶ ನೀಡಿದ್ರು ಎಂಬುದನ್ನು ಪ್ರಮೋದ್ ತಿಳಿಸಿದ್ದಾರೆ. ರತ್ನನ್ ಪ್ರಪಂಚ ಚಿತ್ರದಲ್ಲಿನ ತನ್ನ ನಟನೆಯನ್ನು ನೋಡಿ ಮೆಚ್ಚಿಕೊಂಡ ಪ್ರಶಾಂತ್ ನೀಲ್ ಅದೇ ಕಾರಣಕ್ಕಾಗಿ ಸಲಾರ್ ಚಿತ್ರದಲ್ಲಿ ಅವಕಾಶ ನೀಡಿದ್ರು ಎಂದು ಪ್ರಮೋದ್ ಹೇಳಿಕೊಂಡಿದ್ದಾರೆ. ಚಿತ್ರೀಕರಣದ ಸ್ಥಳದಲ್ಲೂ ಸಹ ಪ್ರಶಾಂತ್ ನೀಲ್ ತಮ್ಮ ನಟನೆಯನ್ನು ನೋಡಿ ಅನೇಕ ಬಾರಿ ಹೊಗಳಿದ್ದಾರೆ ಎಂದು ಪ್ರಮೋದ್ ಖುಷಿಯಿಂದ ಹಂಚಿಕೊಂಡರು.

  ಕನ್ನಡದ ಎರಡು ಚಿತ್ರಗಳಲ್ಲಿ ಪ್ರಮೋದ್ ನಟನೆ

  ಕನ್ನಡದ ಎರಡು ಚಿತ್ರಗಳಲ್ಲಿ ಪ್ರಮೋದ್ ನಟನೆ

  ರತ್ನನ್ ಪ್ರಪಂಚ ಚಿತ್ರದ ಮೂಲಕ ಹೆಚ್ಚು ಹೆಸರು ಹಾಗೂ ಐಡೆಂಟಿಟಿ ಪಡೆದ ಪ್ರಮೋದ್ ಪಂಜು ಈ ಹಿಂದೆ ಗೀತಾ ಬ್ಯಾಂಗಲ್ ಸ್ಟೋರ್ ಹಾಗೂ ಪ್ರೀಮಿಯರ್ ಪದ್ಮಿನಿ ಚಿತ್ರದ ಮೂಲಕವೂ ವೀಕ್ಷಕರ ಮನ ಗೆದ್ದಿದ್ದರು. ಸದ್ಯ ಸಲಾರ್ ಚಿತ್ರದಲ್ಲಿ ನಟಿಸುತ್ತಿರುವ ಪ್ರಮೋದ್ ಅಭಿನಯದ ಬಾಂಡ್ ರವಿ ಬಿಡುಗಡೆಗೆ ರೆಡಿ ಇದೆ ಹಾಗೂ ಇಂಗ್ಲಿಷ್ ಮಂಜ ಎಂಬ ಚಿತ್ರದಲ್ಲಿ ಸಹ ಪ್ರಮೋದ್ ನಟಿಸುತ್ತಿದ್ದಾರೆ.

  English summary
  Salaar is bigger than Ugramm and many things are different here says actor Pramod. Read on
  Tuesday, November 22, 2022, 15:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X