»   » ಹೆಂಡತಿಯನ್ನು ಕೀಳು ಭಾಷೆಯಲ್ಲಿ ನಿಂದಿಸುವ "ದರ್ಶನ್" ಆಡಿಯೋ ಕ್ಲಿಪ್

ಹೆಂಡತಿಯನ್ನು ಕೀಳು ಭಾಷೆಯಲ್ಲಿ ನಿಂದಿಸುವ "ದರ್ಶನ್" ಆಡಿಯೋ ಕ್ಲಿಪ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಕೌಟುಂಬಿಕ ಕಲಹ ಕುರಿತ ಇಂಚಿಂಚೂ ಮಾಹಿತಿ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಮೆಗಾ ಸೀರಿಯಲ್ ತರಹ ಗಂಟೆ ಲೆಕ್ಕದಲ್ಲಿ ಪ್ರಸಾರವಾಗುತ್ತಲೇ ಇದೆ.

ಮಾಧ್ಯಮಗಳ ಜೊತೆ ಮಾತನಾಡುವಾಗಲೇ ತಮ್ಮ ಪತ್ನಿಗೆ 'ಬಾಯ್ ಫ್ರೆಂಡ್ ಇದ್ದಾನೆ' ಅಂತ ದರ್ಶನ್ ಮಾಡಿದ ಗಂಭೀರ ಆರೋಪದ ಸುತ್ತ ಗಂಟೆಗಟ್ಟಲೆ ಚರ್ಚೆ ಕೂಡ ನಡೆದಿರುವುದನ್ನ ನೀವೆಲ್ಲಾ ನೋಡಿರ್ತೀರಾ. ಈಗ ವಿಷಯ ಅದಲ್ಲ. [ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

ಪತ್ನಿ ವಿಜಯಲಕ್ಷ್ಮಿಗೆ 'ಹೊಲಸು' ಭಾಷೆಯಲ್ಲಿ ದರ್ಶನ್ ಬೈದಿದ್ದಾರೆ ಎನ್ನಲಾಗಿರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂದೆ ಓದಿ....[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

ಥರ್ಡ್ ಕ್ಲಾಸ್ ಭಾಷೆಯ ಆಡಿಯೋ ಕ್ಲಿಪ್!

'ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವಾಯ್ಸ್' ಎನ್ನುವ ಅಡಿಬರಹದೊಂದಿಗೆ ವೈರಲ್ ಆಗಿರುವ 'ಆಡಿಯೋ ಕ್ಲಿಪ್' ಕೇಳುವುದಕ್ಕೆ ಅಸಹ್ಯ. ['ಗಲಾಟೆ ಸಂಸಾರ'; ದರ್ಶನ್ ಬೆಟ್ಟು ಮಾಡುತ್ತಿರುವ 'ಅವರು' ಯಾರು?]

ವಿಜಯಲಕ್ಷ್ಮಿ ಬಗ್ಗೆ ಕೊಳಕು ಮಾತು

ಕೊಳಕು ಭಾಷೆಯಲ್ಲಿ ನಟ ದರ್ಶನ್ (ದರ್ಶನ್ ವಾಯ್ಸ್ ಅಂತ ವೈರಲ್ ಆಗಿದೆ ಅಷ್ಟೆ) ವಿಜಯಲಕ್ಷ್ಮಿ ರವರನ್ನ ನಿಂದಿಸುವಾಗ ರೆಕಾರ್ಡ್ ಆಗಿರುವ ಆಡಿಯೋ ಕ್ಲಿಪ್ ಅದು. [ಬ್ರೇಕಿಂಗ್ ನ್ಯೂಸ್ - ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ರಾ ದರ್ಶನ್?]

ಅದು ದರ್ಶನ್ ಧ್ವನಿಯೇ?

ಕೇಳುವುದಕ್ಕೆ 'ಆ ಆಡಿಯೋ ಕ್ಲಿಪ್'ನಲ್ಲಿರುವ ಧ್ವನಿ, ದರ್ಶನ್ ಧ್ವನಿಯಂತೆಯೇ ಇದೆ. ಆದ್ರೆ, ಅದು 'ದರ್ಶನ್ ರವರದ್ದೇ' ಅಂತ ಪಕ್ಕಾ ಹೇಳುವುದು ಕಷ್ಟ. [ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್]

ವಾಟ್ಸ್ ಆಪ್ ನಲ್ಲಿ ಆಡಿಯೋ ಕ್ಲಿಪ್ ವೈರಲ್

ವಾಟ್ಸ್ ಆಪ್ ನಲ್ಲಿ ಆ 'ಆಡಿಯೋ ಕ್ಲಿಪ್' ವೈರಲ್ ಆಗಿದೆ. ಅದನ್ನ ವೈರಲ್ ಆಗುವಂತೆ ಮಾಡಿದ್ದು ಯಾರು? ಆಡಿಯೋ ಕ್ಲಿಪ್ ರೆಕಾರ್ಡ್ ಮಾಡಿ ಲೀಕ್ ಮಾಡಿದವರ್ಯಾರು? ಎನ್ನುವ ಬಗ್ಗೆ ಮಾಹಿತಿ ಇಲ್ಲ. [ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?]

ವಿಜಯಲಕ್ಷ್ಮಿ ಹೇಳುವುದೇ ಬೇರೆ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಕಾರ, ಅದು ದರ್ಶನ್ ರವರ ಧ್ವನಿ ಅಲ್ಲವೇ ಅಲ್ಲ!

ವಿಜಯಲಕ್ಷ್ಮಿ ವಿವರಣೆ

''ಅದು ದರ್ಶನ್ ವಾಯ್ಸ್ ಅಲ್ಲ. ಅವರು ನನ್ನನ್ನ ಯಾವತ್ತೂ ಹಾಗೆ ಬೈದಿಲ್ಲ. ಮಾಮೂಲಿ ಗಲಾಟೆ ಇದೆ ನಿಜ. ಆದ್ರೆ, ಅಷ್ಟು ಕೆಟ್ಟ ಭಾಷೆಯಲ್ಲಿ ಎಂದೂ ಬೈದಿಲ್ಲ. ಟಿವಿ ಚಾನೆಲ್ ಗಳಲ್ಲಿ ನಿನ್ನೆಯಿಂದ ಬ್ಯಾಕ್ ಟು ಬ್ಯಾಕ್ ಸುದ್ದಿ ಪ್ರಸಾರವಾಗುತ್ತಲೇ ಇದೆ. ಇದನ್ನ ನೋಡಿ ಯಾರೋ ಈ ರೀತಿ ಕಿತಾಪತಿ ಮಾಡಿದ್ದಾರೆ'' ಅಂತಾರೆ ವಿಜಯಲಕ್ಷ್ಮಿ.

ದರ್ಶನ್ ಕಾಮೆಂಟ್!

ಹೊಲಸು ಮಾತುಗಳಿರುವ 'ಆಡಿಯೋ ಕ್ಲಿಪ್' ಬಗ್ಗೆ ದರ್ಶನ್ ಇದುವರೆಗೂ ಕಾಮೆಂಟ್ ಮಾಡಿಲ್ಲ.

ಆಡಿಯೋ ಕ್ಲಿಪ್ ನಿಮಗೆ ಕೇಳಿಸೋಲ್ಲ!

ಕೀಳು ಭಾಷೆಯಲ್ಲಿ (ದರ್ಶನ್ ರವರ ವಾಯ್ಸ್ ಎನ್ನಲಾಗಿರುವ) 'ಆಡಿಯೋ ಕ್ಲಿಪ್' ಇರುವ ಕಾರಣ 'ಒನ್ ಇಂಡಿಯಾ ಫಿಲ್ಮಿಬೀಟ್' ಅದನ್ನ ಓದುಗರ ಮುಂದೆ ಇಡುತ್ತಿಲ್ಲ.

English summary
A salacious audio clip, created by unknown goes viral on whatsapp. The audio clip makes distasteful remarks on strained relationship between Challenging star Darshan and his wife Vijayalakshmi. We refuse to share the audio with our audience. Thank you.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada