»   » ಅಬ್ಬಾ.! ತಂಗಿ ಮದುವೆಗೆ ಸಲ್ಲು ಕೊಟ್ಟ ಗಿಫ್ಟ್ ಎಂತದ್ದು

ಅಬ್ಬಾ.! ತಂಗಿ ಮದುವೆಗೆ ಸಲ್ಲು ಕೊಟ್ಟ ಗಿಫ್ಟ್ ಎಂತದ್ದು

Posted By:
Subscribe to Filmibeat Kannada

ಸಲ್ಮಾನ್ ಖಾನ್ ಬಾಲಿವುಡ್ ಗೆ ಬ್ಯಾಡ್ ಬಾಯ್ ಆಗಿದ್ರೂ, ತಂಗಿ ಅರ್ಪಿತಾಗೆ ಮಾತ್ರ ಮುದ್ದಿನ ಅಣ್ಣ. ಅದಕ್ಕೆ ತಂಗಿ ಮದುವೆಯನ್ನ ಅಣ್ಣ ಸಲ್ಲು ಧಾಮ್ ಧೂಮ್ ಅಂತ ಅದ್ದೂರಿಯಾಗಿ ನೆರವೇರಿಸುತ್ತಿರುವುದೇ ಸಾಕ್ಷಿ.

ಮದುವೆ ಕರೆಯೋಲೆಯಿಂದ ಹಿಡಿದು ಕಲ್ಯಾಣ ಮಂಟಪದವರೆಗೂ ಸಲ್ಲು ತಂಗಿ ವಿವಾಹ ಮಹೋತ್ಸವದಲ್ಲಿ ಶ್ರೀಮಂತಿಕೆ ತುಂಬಿತುಳುಕುತ್ತಿದೆ. ಅತಿಥಿಗಳನ್ನ ಅದ್ದೂರಿಯಾಗಿ ಸ್ವಾಗತಿಸುತ್ತಿರುವ ಸಲ್ಲು, ಇದೇ ಖುಷಿಯಲ್ಲಿ ತನ್ನ ಪ್ರೀತಿಯ ತಂಗಿಗೆ ಏನು ಉಡುಗೊರೆ ಕೊಟ್ಟಿದ್ದಾರೆ ಗೊತ್ತಾ? [ಸಲ್ಲೂ ತಂಗಿ ಅರ್ಪಿತಾ ಹರಸಲು ಬಂದ ಶಾರುಖ್]

Salman Khan

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಅರ್ಪಿತಾ ಮತ್ತು ಆಯುಷ್ ಶರ್ಮಾಗೆ ಸಲ್ಲು ಬರೋಬ್ಬರಿ 16 ಕೋಟಿ ಮೌಲ್ಯದ 3 ಬೆಡ್ ರೂಮ್ ಹೊಂದಿರುವ ಐಶಾರಾಮಿ ಫ್ಲಾಟ್ ನ ಗಿಫ್ಟಾಗಿ ನೀಡಿದ್ದಾರೆ. ಮುಂಬೈನ ಕಾರ್ಟರ್ ರೋಡ್ ನಲ್ಲಿರುವ ಈ ಫ್ಲಾಟ್, ಸಲ್ಲು ನೆಲೆಸಿರುವ ಗ್ಯಾಲೆಕ್ಸಿ ಅಪಾರ್ಟ್ಮೆಂಟ್ ನಿಂದ ಬರೀ 5 ನಿಮಿಷ ಪಯಣ. [ಸಲ್ಲೂ ತಂಗಿ ಮದುವೆಗೆ ಮೋದಿ, ಶಾರುಖ್ ಬರ್ತಾರಾ?]

ತಂಗಿಯನ್ನ ಆಗಾಗ ನೋಡಿ, ಮಾತನಾಡಿಸುವುದಕ್ಕೆ ಅನುಕೂಲವಾಗಲಿ ಅಂತ ತಮ್ಮ ಮನೆಯ ಹತ್ತಿರವಿರುವ ಫ್ಲಾಟ್ ನೇ ತಂಗಿಗೆ ಪ್ರೆಸೆಂಟ್ ಮಾಡಿದ್ದಾರೆ ಸಲ್ಲು. ವಿಶೇಷ ಅಂದ್ರೆ, ಸಲ್ಲು ಕುಟುಂಬಕ್ಕೆ ಆಪ್ತರಾಗಿರುವ ಖನ್ನಾ ಕುಟುಂಬದ 'ಆಶೀರ್ವಾದ್' ಬಂಗಲೆಯ ಪಕ್ಕದಲ್ಲೇ ಈ ಫ್ಲಾಟ್ ಇದ್ಯಂತೆ. [ಸಲ್ಲು ತಂಗಿಯ ಮದುವೆ ವೈಭವಕ್ಕೆ ಅದ್ದೂರಿ ಲಗ್ನಪತ್ರಿಕೆ]

Salman Khan2

ನಾಳೆ (ನವೆಂಬರ್ 18) ರಂದು ನಿಗದಿಯಾಗಿರುವ ಮುಹೂರ್ತದಲ್ಲಿ ಅರ್ಪಿತಾ, ತನ್ನ ಧೀರ್ಘ ಕಾಲದ ಗೆಳೆಯ ಆಯುಷ್ ಶರ್ಮಾರನ್ನ ಕೈಹಿಡಿಯಲಿದ್ದಾರೆ. ಖಾನ್ ಖಾನ್ದಾನ್ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರೇ ಇದಕ್ಕೆ ಸಾಕ್ಷಿಯಾಗಿ ವಧು-ವರರನ್ನ ಆಶೀರ್ವದಿಸಲಿದ್ದಾರೆ. (ಏಜೆನ್ಸೀನ್)

English summary
Salman Khan has gifted 3 BHK flat to his sister Arpitha as her wedding gift. The flat is said to be costing around Rs.16 crore and is situated in Carter Road, Mumbai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada