For Quick Alerts
  ALLOW NOTIFICATIONS  
  For Daily Alerts

  'ಮಧ್ಯದ' ಬೆರಳು ತೋರಿಸಿ ನೆಟ್ಟಿಗರಿಗೆ ಮಾಂಜಾ ಕೊಟ್ಟ ಅಕ್ಕಿನೇನಿ ಸೊಸೆ

  |

  ಮದುವೆ ಆದ್ಮೇಲೆ ಸಮಂತಾ ಸಿನಿಮಾ ಮಾಡ್ತಾರಾ ಇಲ್ವಾ, ಮಾಡಿದ್ರು ಎಂತಹ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ತಾರೆ ಎಂಬ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿತ್ತು. ಆದ್ರೆ, ಅಕ್ಕಿನೇನಿ ಮನೆಗೆ ಸೊಸೆಯಾದ ನಂತರವೂ ತಮ್ಮ ಹಳೆ ಶೈಲಿಯಲ್ಲಿ ಸಿನಿಮಾಗಳನ್ನ ಮಾಡ್ತಿದ್ದಾರೆ.

  ಕಥೆ ಅಥವಾ ಸಿನಿಮಾದಲ್ಲಿ ಯಾವುದೇ ಬದಲಾವಣೆ ಕಾಣಿಸಿಲ್ಲ. ಇನ್ನು ಮದುವೆ ನಂತರ ಸಮಂತಾ ತೊಡುವ ಬಟ್ಟೆಯ ವಿಚಾರವಂತೂ ನೆಟ್ಟಿಗರನ್ನ, ಅಕ್ಕಿನೇನಿ ಕುಟುಂಬದ ಅಭಿಮಾನಿಗಳನ್ನ ತಾಳ್ಮೆಯನ್ನ ಪರೀಕ್ಷೆ ಮಾಡುತ್ತಿದೆ. ಮೊದಲಿನಂತೆ ತುಂಬಾ ಹಾಟ್ ಆಗಿ, ಗ್ಲಾಮರಸ್ ಆಗಿ, ಬಿಕಿನಿ ಹಾಗೂ ತುಂಬಾ ಶಾಟ್ ಆಗಿ ಬಟ್ಟೆಗಳನ್ನ ತೊಟ್ಟು ಫೋಸ್ ಕೊಟ್ಟಿದ್ದಾರೆ.

  ಸದ್ಯ, ಪತಿಯ ಜೊತೆ ಹಾಲಿಡೇ ಎಂಜಾಯ್ ಮಾಡ್ತಿರುವ ಸಮ್ಮು, ಒಳ್ಳೆ ಐಟಂ ಡ್ಯಾನ್ಸರ್ ರೀತಿ ಕಾಸ್ಟ್ಯೂಮ್ ತೊಟ್ಟು ಫೋಸ್ ಕೊಟ್ಟಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ. ಇದ್ಯಾವುದಕ್ಕೂ ಕೇರ್ ಮಾಡದ ಸ್ಯಾಮ್ ಟ್ರೋಲ್ ಮಾಡೋರಿಗೆ ಮಧ್ಯದ ಬೆರಳು ತೋರಿಸಿ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ಆ ಫೋಟೋ ಯಾವುದು.? ಮುಂದೆ ಓದಿ......

  ನಿನ್ನಿಂದ ನಾವು ಇದನ್ನ ನಿರೀಕ್ಷೆ ಮಾಡಿರಲಿಲ್ಲ

  ನಿನ್ನಿಂದ ನಾವು ಇದನ್ನ ನಿರೀಕ್ಷೆ ಮಾಡಿರಲಿಲ್ಲ

  ಸ್ಪೇನ್ ನ ನ್ ನ ಐಬಿಜಾಯಲ್ಲಿ ಹಾಲಿಡೇ ಎಂಜಾಯ್ ಮಾಡ್ತಿರುವ ಸಮಂತಾ ಮತ್ತು ನಾಗಚೈತನ್ಯ ಜೋಡಿ ಹಲವು ಫೋಟೋ ಗಳನ್ನು ಅಪ್ ಲೋಡ್ ಮಾಡಿದೆ. ಇವುಗಳಲ್ಲಿ ಒಂದು ಫೋಟೋ ಟ್ರೋಲ್ ಗೆ ಗುರಿಯಾಗಿದೆ. ಅಕ್ಕಿನೇನಿ ಸೊಸೆಯಾದ ನಿನ್ನಿಂದ ಈ ಇದನ್ನ ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ.

  ಸರಿಯಾದ ಬಟ್ಟೆ ಹಾಕು

  ಸರಿಯಾದ ಬಟ್ಟೆ ಹಾಕು

  ನೀನು ಈಗ ಅಕ್ಕಿನೇನಿ ಕುಟುಂಬದ ಸೊಸೆ. ನಿನಗೆ ಮದುವೆಯಾಗಿದೆ. ಸರಿಯಾಗಿ ಬಟ್ಟೆ ಹಾಕುವುದನ್ನ ಕಲಿಯಬೇಕು. ನಾವು ನಿನ್ನಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಮೊದಲು ಈ ಫೋಟೋ ಡಿಲಿಟ್ ಮಾಡು. ಈ ರೀತಿ ಬಟ್ಟೆಗಳನ್ನ ಹಾಕಬೇಡ'' ಎಂದು ಹಲವು ಕಾಮೆಂಟ್ ಮಾಡ್ತಿದ್ದಾರೆ.

  ಮಧ್ಯದ ಬೆರಳು ತೋರಿಸಿದ ಸಮಂತಾ

  ಮಧ್ಯದ ಬೆರಳು ತೋರಿಸಿದ ಸಮಂತಾ

  ಈ ಕಾಮೆಂಟ್ ಗಳನ್ನ ನೋಡಿದ ಸಮಂತಾಗೆ ಸಹಜವಾಗಿ ಕೋಪ ಬಂದಿದೆ. ಇವುಗಳಿಗೆ ಪದಗಳಲ್ಲಿ ಉತ್ತರ ಕೊಡುವುದು ಸರಿಯಲ್ಲ ಎಂದು ಯೋಚಿಸಿದ ಸಮಂತಾ ಮಧ್ಯದ ಬೆರಳನ್ನ ತೋರಿಸುವ ಮೂಲಕ ಎಲ್ಲರಿಗೂ ಟಾಂಗ್ ನೀಡಿದ್ದಾರೆ.

  ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ಅಕ್ಕಿನೇನಿ ಸೊಸೆ

  ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ಅಕ್ಕಿನೇನಿ ಸೊಸೆ

  ಅಂದ್ಹಾಗೆ, ಟ್ರೋಲ್ ಮಾಡೋರಿಗೆ ಸಮಂತಾ ಮಾಂಜಾ ಕೊಡ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಕೂಡ ಇಂತಹ ಕಾಮೆಂಟ್ ಗಳಿಗೆ ಸರಿಯಾಗಿ ಜಾಡಿಸಿದ್ದಾರೆ. ಕಾಲೆಳೆದವರಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.

  English summary
  Samantha Akkineni shows the middle finger to trolls who slammed her for beachwear pic. Naga Chaitanya Akkineni and Samantha Ruth Prabhu are currently spending some quality time in Ibiza.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X