»   » 'ಕಾಸ್ಟಿಂಗ್ ಕೌಚ್' ವಿವಾದದ ಬಗ್ಗೆ ಮನಬಿಚ್ಚಿ ಮಾತನಾಡಿದ ಸಮಂತಾ

'ಕಾಸ್ಟಿಂಗ್ ಕೌಚ್' ವಿವಾದದ ಬಗ್ಗೆ ಮನಬಿಚ್ಚಿ ಮಾತನಾಡಿದ ಸಮಂತಾ

Posted By:
Subscribe to Filmibeat Kannada

ಕಾಸ್ಟಿಂಗ್ ಕೌಚ್ ವಿವಾದ ತೆಲುಗು ಇಂಡಸ್ಟ್ರಿಯಲ್ಲಿ ಸಣ್ಣದಾಗಿ ಶುರುವಾಗಿ ಈಗ ಆಲದ ಮರವಾಗಿ ಬೆಳೆಯುತ್ತಿದೆ. ಎಲ್ಲ ಇಂಡಸ್ಟ್ರಿಯಲ್ಲೂ ನಟಿಯರು ಈ ವಿಷ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ರಂಗಸ್ಥಲಂ' ಅಂತಹ ಸೂಪರ್ ಹಿಟ್ ಸಿನಿಮಾದ ನಂತರ ಈಗ 'ಮಹಾನಟಿ' ಎಂಬ ಬಹುದೊಡ್ಡ ಪ್ರಾಜೆಕ್ಟ್ ನಲ್ಲಿ ಸಮಂತಾ ನಟಿಸಿದ್ದಾರೆ. ಈ ನಡುವೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸಮಂತಾ ಕಾಸ್ಟಿಂಗ್ ಕೌಚ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮಹೇಶ್ ಬಾಬು ಕುಟುಂಬದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಶ್ರೀರೆಡ್ಡಿ

ಎಲ್ಲರೂ ಹೇಳುವಾಗೆ ಕಾಸ್ಟಿಂಗ್ ಕೌಚ್ ಎಲ್ಲ ಇಂಡಸ್ಟ್ರಿಯಲ್ಲಿಯೂ ಇದೆ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲ ಎಂದಿರುವ ಸಮಂತಾ 8 ವರ್ಷದಲ್ಲಿ ತಾನು ನೋಡಿ ಸಿನಿಲೋಕ ಹೇಗಿತ್ತು ಎಂಬುದನ್ನ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ....

'ಕಾಸ್ಟಿಂಗ್ ಕೌಚ್' ಇಂಡಸ್ಟ್ರಿಯಲ್ಲಿ ಇದೆ

''ಕೇವಲ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ ಈ ರೀತಿಯ ಕೆಟ್ಟ ಸಂಸ್ಕೃತಿ ಇದೆ. ಆ ಕ್ಷೇತ್ರ, ಈ ಕ್ಷೇತ್ರ ಎಂದು ಹೇಳಲು ನಾನು ಬಯಸುವುದಿಲ್ಲ. ಎಲ್ಲ ಕ್ಷೇತ್ರದಲ್ಲೂ ಇದೆ ಎಂಬುದಷ್ಟೇ ನನ್ನ ಅಭಿಪ್ರಾಯ'' ಎಂದಿದ್ದಾರೆ.

ನಟಿ-ಶಾಸಕಿ ರೋಜಾ ಮಾತಿಗೆ ತಿರುಗೇಟು ನೀಡಿದ ಶ್ರೀರೆಡ್ಡಿ

ನನಗೆ ಆ ಅನುಭವ ಆಗಿಲ್ಲ

''ಒಳ್ಳೆಯದು, ಕೆಟ್ಟದ್ದು ಎಂಬುದು ಎಲ್ಲ ಕಡೆಯೂ ಇರುತ್ತೆ. ಅಂತಹ ಬ್ಲ್ಯಾಕ್ ಶಿಪ್ ಗಳು ಕೆಲವರು ಇರ್ತಾರೆ. ಕಳೆದ 8 ವರ್ಷಗಳಿಂದ ನಾನು ತೆಲುಗು ಮತ್ತು ತಮಿಳು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಮೊದಲ ಸಿನಿಮಾ ಹಿಟ್ ಆಗಿದ್ದರಿಂದ ನನ್ನ ವೃತ್ತಿ ಜೀವನದಲ್ಲಿ ನಾನು ಯಾವುದೇ ಕಷ್ಟ ಎದುರಿಸಿಲ್ಲ. ಅಂತಹ ಪರಿಸ್ಥಿತಿಯೂ ನನಗೆ ಬಂದಿಲ್ಲ'' ಎಂದು ತಮ್ಮ ಅನುಭವವನ್ನ ಹಂಚಿಕೊಂಡರು.

'ಕಾಸ್ಟಿಂಗ್ ಕೌಚ್' ತಡೆಯಲು ಹೊಸ ಹೆಜ್ಜೆಯಿಟ್ಟ ಪವನ್ ಕಲ್ಯಾಣ್

ಮಕ್ಕಳಾದ ನಂತರವೂ ಅಭಿನಯಿಸುತ್ತೇನೆ

''ಆದ್ರೆ, ಮನಸ್ಸಿನಿಂದ ಒಂದು ವಿಷ್ಯ ಹೇಳುತ್ತೇನೆ. ಇಂಡಸ್ಟ್ರಿಯಲ್ಲಿ ಅನೇಕ ಒಳ್ಳೆಯ ಸಂಗತಿಗಳಿವೆ. ನಾನು ಚೆಂದವಾದ ಮನಸ್ಸು ಮತ್ತು ಮನುಷ್ಯತ್ವುಳ್ಳ ವ್ಯಕ್ತಿಗಳನ್ನ ಇಲ್ಲಿ ಭೇಟಿಯಾಗಿದ್ದೇನೆ. ಅದಕ್ಕೆ ಮಕ್ಕಳಾದ ನಂತರವೂ ಇಂಡಸ್ಟ್ರಿಯಲ್ಲಿ ಮುಂದುವರೆಯಲು ನಿರ್ಧರಿಸಿದ್ದೇನೆ'' ಎಂದು ತಮ್ಮ ಭವಿಷ್ಯದ ಬಗ್ಗೆ ತಿಳಿಸಿದರು.

ಸರ್ಕಾರ ವಿಶೇಷ ಕ್ರಮ ಜರುಗಿಸಬೇಕು

''ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಸರ್ಕಾರ ಪ್ರತ್ಯೇಕವಾಗಿ ಕ್ರಮ ತೆಗೆದುಕೊಳ್ಳಬೇಕು. ಅದನ್ನ ನಿಯಂತ್ರಿಸಲು ವಿಶೇಷವಾಗಿ ಗಮನ ಹರಿಸಬೇಕು'' ಎಂದು ಆಗ್ರಹಿಸಿದ್ದಾರೆ.

English summary
Samantha akkineni Reacting to the recent sexual harassment controversy in Tollywood, the actress shared in an interview that casting couch is a reality in all industries and not in just in films says.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X